ಹುಣಸೂರು ಗ್ರಾಮಗಳಿಗೆ ತೆರಳಿ ಪಡಿತರದಾರರಿಂದ ಹೆಬ್ಬೆಟ್ಟು ಪಡೆದು ಆಹಾರ ಇಲಾಖೆ ನಿಯಮಗಳನ್ನ ಗಾಳಿಗೆ ತೂರಿದ ಆರೋಪ ಎದುರಿಸುತ್ತಿರುವ ಹುಣಸೂರು ತಾಲೂಕಿನ ಶ್ಯಾನುಭೋಗನ ಹಳ್ಳಿ ನ್ಯಾಯಬೆಲೆ ಅಂಗಡಿಯನ್ನ ಕೊಳಘಟ್ಟ ಗ್ರಾಮಕ್ಕೆ ವರ್ಗಾವಣೆ ಮಾಡುವಂತೆ ಕನಸಿನ ಭಾರತ ಮಾಧ್ಯಮದ ವರದಿಗಾರ ವಿಶಾಂತ್ ನೀಡಿದ ಮನವಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸ್ಪಂದಿಸಿದೆ.ಕೂಡಲೇ ಈ ಸಂಭಂಧ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಆಹಾರ ಇಲಾಖೆ ಜಂಟಿ ನಿರ್ದೇಶಕರು ಹುಣಸೂರು ತಹಸೀಲ್ದಾರ್ ಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.ಕೆಲವು ದಿನಗಳ ಹಿಂದೆ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ಪಡಿತರದಾರರಿಂದ ಬಯೋಮೆಟ್ರಿಕ್ ಪಡೆದು ನಿಯಮಗಳನ್ನ ಗಾಳಿಗೆ ತೂರಿದ್ದಾರೆ ಹಾಗೂ ಪಡಿತರ ದುರುಪಯೋಗವಾಗುತ್ತಿದೆ ಎಂಬ ಶಂಕೆ ವ್ಯಕ್ತಪಡಿಸಿ ಸುದ್ದಿ ಮಾಡಲಾಗಿತ್ತು.ಈ ಸಂಭಂಧ ತಹಸೀಲ್ದಾರ್ ರವರು ನಿಯಮಗಳನ್ನ ಗಾಳಿಗೆ ತೂರಿದ ಬಗ್ಗೆ ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ರು.ಅಲ್ಲದೆ ಸರ್ವರ್ ಪ್ರಾಬ್ಲಂ ಎಂ ಕಾರಣ ನೀಡಿ ನ್ಯಾಯಬೆಲೆ ಅಂಗಡಿ ಪರ ಬ್ಯಾಟಿಂಗ್ ಮಾಡಿದ್ರು.ಸರ್ವರ್ ಸಮಸ್ಯೆ ಇದ್ದಲ್ಲಿ ನ್ಯಾಯಬೆಲೆ ಅಂಗಡಿಯನ್ನ ಕೊಳಘಟ್ಟ ಗ್ರಾಮಕ್ಕೆ ಶಿಫ್ಟ್ ಮಾಡಿ ಪಡಿತರದಾರರಿಗೆ ಅನುಕೂಲ ಮಾಡಿಕೊಡುವಂತೆ ವಿಶಾಂತ್ ದೂರು ನೀಡಿದ್ದರು.ವಿಶಾಂತ್ ರವರ ಮನವಿಗೆ ಸ್ಪಂದಿಸಿದ ಇಲಾಖೆ ಈ ಸಂಭಂಧ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಹಸೀಲ್ದಾರ್ ಗೆ ಸೂಚನೆ ನೀಡಿದ್ದಾರೆ…
