ಕೃಷ್ಣರಾಜನಗರ : ಸಾಲಿಗ್ರಾಮ ತಾಲೂಕಿನ ಲಕ್ಕಿಕುಪ್ಪೆ ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಸಂಬಂಧ ದಾಯಾದಿಗಳ ನಡುವೆ ಹೊಡೆದಾಟ ನಡೆದು ಇಬ್ಬರು ಕೆ.ಆರ್.ನಗರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ. ಆರೋಪಿ ಶಂಕರೇಗೌಡ ಲಕ್ಕಿ ಕುಪ್ಪೆ ಗ್ರಾಮದ ಕಾಮಕ್ಷಮ್ಮ ಮತ್ತು ಶ್ರೀಕಂಠೇಗೌಡರಿಗೆ ಅದೇ ಗ್ರಾಮದ ದಶರಥ ಶಂಕರೇಗೌಡ ಕುಸುಮ ಮತ್ತು ಸಂದೀಪ್ ಎಂಬವರು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಶ್ರೀಕಂಠೇಗೌಡ ಸಾಲಿಗ್ರಾಮ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇಲೆ ಸಾಲಿಗ್ರಾಮ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳು ತಲೆಮರಿಸಿಕೊಂಡಿದ್ದು ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ. ಹಲ್ಲೆಗೊಳಗಾದ ಕಾಮಾಕ್ಷಮ್ಮ ಮತ್ತು ಶ್ರೀಕಂಠೇಗೌಡರನ್ನು ಸಾಲಿಗ್ರಾಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೆ ಆರ್ ನಗರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
