ತಾಲೂಕಿನ ಶೆಟಗೇರಿ ಗ್ರಾಮದ ಪ್ರಸ್ತುತ ಉಡುಪಿ ಜಿಲ್ಲೆ ಕುಂದಾಪುರದಲ್ಲಿ ನಿವಾಸಿಯಾಗಿರುವ ತೇಜಸ್ ವಿ ನಾಯಕ್
ಬಿಟೆಕ್ ಪದವಿ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣ ಪರೀಕ್ಷೆ ಜೆಇಇ ಅಡ್ವಾನ್ಸ್ ನಲ್ಲಿ 1661 ನೇ Rank ಪಡೆದು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ವೆಂಕಟರಮಣ ಬಿ. ನಾಯಕ ಹಾಗೂ ಕುಂದಾಪುರದ ಬಸ್ರೂರಿನ ಪೌಢಶಾಲಾ ಗಣಿತ ಶಿಕ್ಷಕಿಯಾಗಿರುವ ಜಯಲಕ್ಷ್ಮಿ ನಾಯಕ ಇವರ ಪುತ್ರನಾದ ತೇಜಸ್ ವಿ ನಾಯಕ್
ಎಸ್ ಎಸ್ ಎಲ್ ಸಿ ಯಲ್ಲಿ 8 ನೇ Rank ಪಡೆದಿದ್ದರು. ಕಾರ್ಕಳದ ಕ್ರಿಯೇಟಿವ್ ಪಿ ಯು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗದ ಸಹಕಾರದಿಂದ
ಇದೀಗ ಪಿಯುಸಿ ಯಲ್ಲಿ 590 ಅಂಕಗಳೊಂದಿಗೆ ರಾಜ್ಯಕ್ಕೆ 10 ನೇ Rank
ರಾಷ್ಟ್ರೀಯ ಮಟ್ಟದ ಜೆಇಇ ಮೇನ್ಸ್ ನಲ್ಲಿ
98.71 ಪರ್ಸಂಟೈಲ್,
ಜೆಇಇ ಆರ್ಕಿಟೆಕ್ಚರ್ ಆಲ್ ಇಂಡಿಯಾ 101ನೇ Rank
ಜೆಇಇ ಪ್ಲಾನಿಂಗ್ 33 Rank
ಕರ್ನಾಟಕ ಯುಜಿಸಿಇಟಿ ಯಲ್ಲಿ 434 Rank
ಕಾಮೆಡ್ ಕೆ 392 Rank
ತಮಿಳುನಾಡಿನ ಪ್ರತಿಷ್ಟಿತ ವೆಲ್ಲೂರಿನ
ವಿ ಐ ಟಿ- ಯಲ್ಲಿ ಕಂಪ್ಯೂಟರ್ ಸಯನ್ಸ್ ಗೆ ಆಯ್ಕೆ,
ಐಐಟಿ ಮದ್ರಾಸ್ ನಲ್ಲಿ ಆನ್ಲೈನ್ ಡಾಟಾ ಸಯನ್ಸ್ ಮತ್ತು ಸ್ಟೆಟಸ್ಟಿಕ್ ಕೋರ್ಸ್ ಗೆ ಆಯ್ಕೆ,
ಭಾರತೀಯ ವಿಜ್ಞಾನ ಮತ್ತು ಸಂಶೋಧನಾ ವಿಭಾಗಕ್ಕೆ ಐಐ ಎಸ್ ಆರ್
ನಲ್ಲಿ 460 ನೇ Rank ಪಡೆದು ಆಯ್ಕೆಯಾಗಿರುತ್ತಾರೆ.
ರಾಷ್ಟ್ರಮಟ್ಟದ ಅತೀ ಕಠಿಣ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ ನಲ್ಲಿ 1661 ನೇ Rank ಪಡೆದು ಅತ್ಯುತ್ತಮ ಸಾಧನೆ ಮಾಡಿ
IIT HYDARABAD
ಇಂಜಿನಿಯರಿಂಗ್ ಸಯನ್ಸ್ ಕೋರ್ಸ್ ಗೆ ಆಯ್ಕೆಯಾಗಿದ್ದು, ಇಲ್ಲಿ ಮುಂದಿನ ಪ್ರತಿಷ್ಠಿತ ಬಿಟೆಕ್ ಪದವಿ ಹಾಗೂ ಐಐಟಿ ಮದ್ರಾಸ್ ನ ಸ್ಟೆಟಾಸ್ಟಿಕ್- ಡಾಟಾ ಸಯನ್ಸ್- ಆನ್ಲೈನ್ ಕೋರ್ಸ್ ಪಡೆದು ಮುಂದಿನ ಸಾಧನೆ ಮಾಡಬೇಕೆನ್ನುವ ಆಸಕ್ತಿ ಹೊಂದಿರುತ್ತಾರೆ.
ತೇಜಸ್ ನ ಈ ಸಾಧನೆ ಉಡುಪಿ ಹಾಗೂ ಉತ್ತರಕನ್ನಡಕ್ಕೆ ಹೆಮ್ಮೆ ತಂದಿದ್ದು , ಸಾಧನೆಯ ಗುರಿಯಿಟ್ಟುಕೊಂಡಿರುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.
ತೇಜಸ್ ನ ಸಾಧನೆಗೆ ಅಭಿನಂದನೆಗಳು.
