ಸಾಲಿಗ್ರಾಮ: ಮಕ್ಕಳಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು. ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಬೈಟ್ ರಾಯಲಿಸ್ಟ್ ಟ್ರಸ್ಟ್ನ ಅಮರ ಜ್ಯೋತಿ ವಿದ್ಯಾಸಂಸ್ಥೆಯು ಆಯೋಜಿ ಸಿದ್ದ ಅಮರ ಜ್ಯೋತಿ ಸಂಭ್ರಮ ಕಾರ್ಯಕ್ರಮವನ್ನು ಅವರು ಮಾತನಾಡಿದರು. ಉದ್ಘಾಟಿಸಿ ಗ್ರಾಮೀಣ ಪ್ರದೇಶದಲ್ಲಿ ಒಂದು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಅದನ್ನು ಮುನ್ನಡೆಸಿಕೊಂಡು ಹೋಗುವುದು ಬಹಳ ಕಷ್ಟದ ಕೆಲಸವಾಗಿದೆ. ಶಾಲೆಯ ಆಡಳಿತ ಮಂಡಳಿ ಹಾಗೂ ಬೋಧಕರು
ಶಾಲೆಗೆ ಬರುವ ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪುಗೊಳಿಸ ಬೇಕು. ಕಲಿಕೆಯ ಜೊತೆಗೆ ಇತರ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಒಟ್ಟಾರೆ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಎಂದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪಾಂಡವಪುರ ವಿಜಯ ಕಾಲೇಜಿನ ಗೌರವ ಕಾರ್ಯದರ್ಶಿ ಬಸವರಾಜು, ಪ್ರಾಂಶುಪಾಲ ವೆಂಕಟೇಗೌಡ, ತಾ.ಪಂ. ಮಾಜಿ ಸದಸ್ಯ ಸಣ್ಣಪ್ಪ, ಗ್ರಾ.ಪಂ. ಅಧ್ಯಕ್ಷೆ ಮಣಿಲಾ ಮಂಜು ನಾಥ್, ಮಾಜಿ ಅಧ್ಯಕ್ಷ ಹುಚ್ಚೇಗೌಡ, ತೇಜುಮೂರ್ತಿ, ಅಮರ ಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ವಿಕಾಸ್, ಉಪಾಧ್ಯಕ್ಷ ಡಿಶ್ ಮಂಜು, ಕಾರ್ಯದರ್ಶಿ ಕೆ.ಎನ್.ಸುನೀತಾವಿಕಾಸ್, ಟ್ರಸ್ಟಿಗಳಾದ ಮೀನಾಕ್ಷಿ ಗೋಪಾಲಸ್ವಾಮಿ, ರತ್ನ ನಾಗೇಂದ್ರ, ಲೀಲಾವತಿ ನಟರಾಜ್, ಶಿವಮ್ಮ ಶಿವೇಗೌಡ, ಗೋಪಾಲಸ್ವಾಮಿ, ಮುಖ್ಯ ಶಿಕ್ಷಕಿ ಎಂ.ನಂದಿನಿ, ಶಿಕ್ಷಕರಾದ ಸೌಮ್ಯ, ಪೂರ್ಣಿಮಾ, ರಂಜಿನಿ, ಸುಮತಿ, ಸರಸ್ವತಿ, ಸಿಬ್ಬಂದಿಗಳಾದ ಮಂಜಯ್ಯ, ಚೆಲುವರಾಜು, ಆಶಾ, ಚಂದ್ರಿಕಾ, ಮುಖಂಡರಾದ ಲೋಕೇಶ್, ರವಿ, ಮಂಜುನಾಥ್, ವಿದ್ಯಾ ರ್ಥಿಗಳು, ಪೋಷಕರು ಹಾಜರಿದ್ದರು.
