ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಡಾಕ್ಟರ್ ಬಿಆರ್ ಅಂಬೇಡ್ಕರ್ ಯುವಕರ ಸಂಘ ಹೆಬ್ಬಾಲೆ, ಇವರ ವತಿಯಿಂದ ಜೈ ಭೀಮ್ ಕಪ್ ಮುಕ್ತ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಸಮಾರಪ್ಪ ಸಮಾರಂಭ ನಡೆಯಿತು. ಉದ್ಘಾಟನೆ ಡಾಕ್ಟರ ಮಂತರ್ ಗೌಡ ಶಾಸಕರು ಮಡಿಕೇರಿ ವಿಧಾನಸಭಾ ಕ್ಷೇತ್ರ ಇವರು ನೆರವೇರಿಸಿದರು. ನಂತರ ಇವರು ಮಾತನಾಡಿ ಹೆಬ್ಬಾಲೆ ಜೈ ಭೀಮ್ ಯುವಕರ ಸಂಘದವರು ಸಮಾಜ ಮೆಚ್ಚುವ ಉತ್ತಮ ಕಾರ್ಯ ಚಟುವಟಿಕೆಯನ್ನು ಹಮ್ಮಿಕೊಳ್ಳುತ್ತಿದ್ದು, ಈ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಹಾರೈಸಿದರು. ಮುಂದೆ ಯಶಸ್ವಿಯಾಗಿ ನಡೆಯಲಿ ಈ ಕಾರ್ಯಕ್ರಮಗಳು ನಿಲ್ಲದೆ ಇರಲಿ ಎಂದರು. ಅಧ್ಯಕ್ಷತೆಯನ್ನು ರವಿ ಹೆಚ್ ಈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಪಿ ಶಶಿಧರ್ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರು, ಹಾಗೂ ಮೋಹನ್ ರಾಜ್ ಉಪನಿರೀಕ್ಷಕರು ಗ್ರಾಮಾಂತರ ಪೊಲೀಸ್ ಠಾಣೆ, ರಂಜನ್ ಪ್ರೈಡ್ ಪ್ರಾಪರ್ಟೀಸ್ ಮತ್ತು ಡೆವಲಪರ್ ಅತಿಥಿಗಳಾಗಿ ಭಾಗವಹಿಸಿದ್ದರು
