ಉಡುಪಿ:ಕಾಪು “ಮನೆ ಮನೆ ಸಮೀಕ್ಷೆ ಕರಾರುವಕ್ಕಾಗಿ ನಡೆಯಬೇಕು. ಮೊಬೈಲ್ ಆ್ಯಪ್ ಮೂಲಕ ನಿಖರವಾದ ಮಾಹಿತಿ ದಾಖಲಿಬೇಕು. ಮನೆಯವರೊಂದಿಗೆ ಸೌಜನ್ಯದೊಂದಿಗೆ ವರ್ತಿಸಿ ಮಾಹಿತಿ ಸಂಗ್ರಹಿಸಬೇಕು. ಹಾಗೂ ಪರಿಶಿಷ್ಟ ಕುಟುಂಬದವರೂ ಸಹ ಗಣತಿದಾರರಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು ಎಂದು ತಹಶಿಲ್ದಾರ್ ಡಾ.ಪ್ರತಿಭಾ ಆರ್ ತಿಳಿಸಿದರು.
ಮೇ 5 ರಿಂದಮೇ 17 ರವರೆಗೆ ಮನೆ ಮನೆ ಸಮೀಕ್ಷೆ ನಡೆಯುತ್ತಿದೆ.
ಕಾಪು ತಾಲ್ಲೂಕಿನಲ್ಲಿ ಈ ಸಮೀಕ್ಷಾ ಕಾರ್ಯ ನಿಖರವಾಗಿ ನಡೆಯುತ್ತಿರುವುದರ ಬಗ್ಗೆ ಖಚಿತಪಡಿಸಿಕೊಳ್ಳಲು ಸ್ವತಃ ತಹಶಿಲ್ದಾರ್ ಇಂದು ಮಲ್ಲಾರು ಗ್ರಾಮದ ಶಿವಾನಂದ ಎಂಬುವರ ಮನೆಗೆ ಭೇಟಿ ನೀಡಿದರು. ಗಣತಿದಾರರಾದ ಶ್ರೀಮತಿ ಶಕೀಲಾ’ರವರು ಸಂಗ್ರಹಿಸಿರುವ ಮಾಹಿತಿಯ ನಿಖರತೆ ಪರಿಶೀಲಿಸಿದರು. ಕೆಲವು ತೊಡಕುಗಳಿಗೆ ಮಾರ್ಗದರ್ಶನ ನೀಡಿ ಸರಿಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ್ ಸಹಕರಿಸಿದರು.
ಕಾಪು ತಾಲ್ಲೂಕಿನಲ್ಲಿ ಯಾವ SC ಮನೆಯೂ ಸಮೀಕ್ಷೆಯಿಂದ ಹೊರಗುಳಿಯಬಾರದು ಎಂದು ಗಣತಿದಾರರಿಗೆ ಸೂಚನೆ ನೀಡಿದ್ದಾರೆ.
ಹತ್ತು ಗಣತಿದಾರರಿಗೆ ಒಬ್ಬರಂತೆ ಸೂಪರ್ ವೈಸರ್ ಗಳನ್ನು ನೇಮಕಾತಿ ಮಾಡಲಾಗಿದೆ. ಅವರುಗಳು ಈ ಗಣತಿದಾರರ ಕಾರ್ಯವನ್ನು ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ.
ಕೆಲವೊಮ್ಮೆ ಆ್ಯಪ್ ಸಮಸ್ಯೆ ಕಂಡುಬಂದಿರುತ್ತದೆ. ತಕ್ಷಣವೇ ಆ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಗಣತಿದಾರರಿಗೆ ಸಮೀಕ್ಷೆಗೆ ಅನುವು ಮಾಡಿಕೊಡಲಾಗುತ್ತಿದೆ.
ಕಾಪು ತಾಲ್ಲೂಕಿನಲ್ಲಿ
ಮಾಸ್ಟರ್ ಟ್ರೈನರ್: 5
ಸೂಪರ್ ವೈಸರ್: 13
ಗಣತಿದಾರರು : 130
“ಅಂದಾಜು” SC ಜನಸಂಖ್ಯೆ 6%
ಇರುತ್ತಾರೆ.
ನಿನ್ನೆಯವರೆಗೆ ಕಾಪು ತಾಲ್ಲೂಕಿನಲ್ಲಿ 321 SC ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. ಇಂದು ಆ್ಯಪ್ ಇನ್ನಷ್ಟು ಸರಳೀಕರಣಗೊಂಡಿದ್ದು ಇನ್ನಷ್ಟು ವೇಗವಾಗಿ ಸಮೀಕ್ಷೆ ನಡೆಯುತ್ತಿದೆ.
ಗಣತಿದಾರರಿಗೆ 5000/- ಗೌರವಧನ ನಿಗದಿಯಾಗಿದೆ ಜೊತೆಗೆ ಪ್ರತಿ SC ಮನೆ ಸಮೀಕ್ಷೆಗೆ ₹100 extra ನೀಡಲಾಗುತ್ತದೆ.
ಸೂಪರ್ ವೈಸರ್ ಗಳಿಗೆ ರೂ.10,000/- ನಿಗದಿಯಾಗಿದೆ.
ಗಣತಿದಾರರಿಗೆ ಟೋಪಿ, ನೋಟ್ ಪ್ಯಾಡ್, ಇಂಕ್ ಪ್ಯಾಡ್ ನೀಡಲಾಗಿದೆ.
ಪ್ರತಿ SC ಮನೆಯವರು ಸಹಿ ಮಾಡಿ ನೀಡಿದ ಸ್ವಯಂ ದೃಢೀಕರಣ ಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ತಹಶಿಲ್ದಾರ್ ರವರಿಗೆ ತಲುಪಿಸತಕ್ಕದ್ದು.
ಇಂದು ತಹಶಿಲ್ದಾರ್ ಡಾ.ಪ್ರತಿಭಾ ಆರ್ ರವರು ಸ್ವತಃ ಗ್ರಾಮಗಳಿಗೆ ಭೇಟಿ ನೀಡಿ SC ಒಳಮೀಸಲಾತಿ ಸಮೀಕ್ಷೆ ನಿಖರವಾಗಿ ನಡೆಯಲು ಮಾರ್ಗದರ್ಶನ ಮಾಡಿದ್ದಾರೆ. ಇದರಿಂದ Sc ಕುಟುಂಬಗಳಿಗೆ ಆತ್ಮವಿಶ್ವಾಸ ಹೆಚ್ಚಾಗಿದ್ದು ಯಾವುದೇ ಮುಜುಗರ ಭೀತಿ ಇಲ್ಲದೆ ಮಾಹಿತಿ ನೀಡಲು ಆತ್ಮವಿಶ್ವಾಸ ಬಂದಿದೆ.
ವರದಿ:ಡಾ.ನಂದುಪೂಜಾರಿ
