ಗೋಕರ್ಣ: “ಕಡಮೆ ಶಾಲೆಯು ತಾಲೂಕಿನಲ್ಲಿಯೇ ಉತ್ತಮ ಶಾಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಕಲಿಕೆಗೆ ಪೂರಕವಾದ ವಾತಾವರಣ ಮತ್ತು ಸಂಪನ್ಮೂಲ ಶಿಕ್ಷಕರ ಬಳಗವನ್ನು ಹೊಂದಿದೆ” ಎಂದು ಕುಮಟಾ ಬಿ ಆರ್ ಸಿ ಸಮನ್ವಯಾಧಿಕಾರಿಗಳಾದ ರೇಖಾ ಸಿ ನಾಯ್ಕ ನುಡಿದರು.
ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸ್ಕೇರಿ ಕಡಿಮೆ ಶಾಲಾ ವಾರ್ಷಿಕೋತ್ಸವವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಿ.ಜಿ.ನಾಯಕ ರವರು ಮಾತನಾಡಿ “ಕಡಿಮೆ ಶಾಲೆಯಲ್ಲಿರುವ ಶಿಕ್ಷಕರು ಬಾಲಕರು – ಪಾಲಕರು ಹಳೆ ವಿದ್ಯಾರ್ಥಿ ಸಂಘದ ಸಹಭಾಗಿತ್ವ ದಲ್ಲಿ ಈ ವಾರ್ಷಿಕ ಸಮ್ಮೇಳನ ಅದ್ಧೂರಿಯಾಗಿ ನಡೆದು ಎಲ್ಲರಿಗೂ ಮಾದರಿಯಾಗಿದೆ” ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಗುರೂಜಿ ರಾಜಗೋಪಾಲ ಅಡಿ ರವರು ಮಾತನಾಡಿ “ಶತಮಾನದ ಹೊಸ್ತಿಲಲ್ಲಿರುವ ಕಡಿಮೆ ಶಾಲೆಯಲ್ಲಿ ಮುಂಬರುವ ಶೈಕ್ಷಣಿಕ ಅಭಿವೃದ್ಧಿ ಕಾರ್ಯದಲ್ಲಿ ನಾನೆಂದು ಬೆನ್ನೆಲುಬಾಗಿರುವೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯತ ಹನೇಹಳ್ಳಿ ಅಧ್ಯಕ್ಷರಾದ ಸಣ್ಣು ಗೌಡ ಮಾತನಾಡಿ “ಕಡಿಮೆ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ಶಾಲೆಯ ಹಾಗೂ ಊರಿನ ಕೀರ್ತಿಯನ್ನು ಬೆಳಗುವಂತಾಗಲಿ” ಎಂದು ಆಶಿಸುತ್ತೇನೆ ಎಂದರು.
ನಿವೃತ್ತ ಶಿಕ್ಷಕರಾದ ವಿದ್ಯಾ ನಾಯಕ ಹಾಗೂ ಶಾಲೆಯಿಂದ ವರ್ಗಾವಣೆಗೊಂಡ ಸರಿತಾ ಆಚಾರಿ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಈಶ್ವರ ಎಚ್ ಮಡಿವಾಳ ಸನ್ಮಾರ್ಗ ಸಮಿತಿ ಅಧ್ಯಕ್ಷರಾದ ಉಪನ್ಯಾಸಕ ರಮೇಶ್ ಗೌಡ, ಶಿಕ್ಷಣ ಸಂಯೋಜಕರಾದ ದೀಪಾ ಕಾಮತ, ಹನೇಹಳ್ಳಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಭಾರತಿ ನಾಯ್ಕ, ಗ್ರಾ.ಪಂ ಸದಸ್ಯರಾದ ಭಾರತಿ ಗೌಡ, ಮತ್ತು ಜ್ಯೂವಾಂ ಫರ್ನಾಂಡೀಸ್. ಮಂಜುನಾಥ ನಾಯಕ ಸಿ ಆರ್ ಪಿ ಮಂಜುಳ ನಾಯ್ಕ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿ ಗಳಾದ ಪಲ್ಲವಿ ಸಂಗಡಿಗರಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಿದ್ಯಾರ್ಥಿಗಳಾದ ದೀಕ್ಷಾ ಸಂಗಡಿಗರಿಂದ ಸ್ವಾಗತ ನೃತ್ಯ ನಡೆಯಿತು, ಮುಖ್ಯಾಧ್ಯಾಪಕರಾದ ಉಮಾ ಜಿ ನಾಯ್ಕ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕರಾದ ದೇವಯಾನಿ ನಾಯಕ ವಾರ್ಷಿಕ ವರದಿ ವಾಚಿಸಿದರು.ನಯನಾ ಜೆ.ಪಿ ಬಹುಮಾನ ವಿತರಣಾ ಯಾದಿ ವಾಚಿಸಿದರು. ಶಿಕ್ಷಕರಾದ ವೈಶಾಲಿ ನಾಯಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಲತಾ ಗೌಡ ರವರು ವಂದಿಸಿದರು. ಶಿಕ್ಷಕರಾದ ಆನಂದ ನಾಯ್ಕ ಹಾಗೂ ರಾಜೀವ ಗಾಂವಕರ ರವರು ಕಾರ್ಯಕ್ರಮ ಸಂಯೋಜನೆ ಮಾಡಿದರು.
ಶಿಕ್ಷಕರಾದ ಸವಿತಾ ಗೌಡ.ಹಾಗೂ ನಾಗರತ್ನ ಗೌಡ ಸಹಕರಿಸಿದರು.ಮುಖ್ಯಾಧ್ಯಾಪಕರು, ಶಿಕ್ಷಕರು, ಪಾಲಕ- ಪೋಷಕರು, ಹಳೆಯ ವಿದ್ಯಾರ್ಥಿಗಳ ಸಂಘ, ಸನ್ಮಾರ್ಗ ಸಮಿತಿ ಸದಸ್ಯರ ಸಹಕಾರದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.
