ಗೌರವಾನ್ವಿತ ನ್ಯಾಯಮೂರ್ತಿ ಡಾ. ನಾಗಮೋಹನದಾಸ ಎಕ ಸದಸ್ಯ ಆಯೋಗವು ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯ, ಉಪಜಾತಿಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಸೌಲಭ್ಯಕ್ಕಾಗಿ ಜಾತಿ ಸಮೀಕ್ಷೆಯು ನಡೆಯುತ್ತಿದ್ದು, ಪರಿಶಿಷ್ಟ ಜಾತಿಯ 101 ಜಾತಿಯ ಸಮುದಾಯದರು ತಮ್ಮ ನಿಖರವಾದ ದತ್ತಾಂಶವನ್ನು ನೀಡಲು ಕರ್ನಾಟಕ ರಾಜ್ಯ ಕಟಬು ಕಟಬರ ವಿಜಯಪುರ ಜಿಲ್ಲಾ ಅಧ್ಯಕ್ಷರಾದ ಶಿವಮೂರ್ತಿ ಕಾಟಕರ ರವರು ಆಗ್ರಹಿಸಿದ್ದಾರೆ
ಪರಿಶಿಷ್ಟ ಜಾತಿಯ ಸಮುದಾಯದಲ್ಲಿ ರಾಜ್ಯದಲ್ಲಿ 101 ಸಮುದಾಯಗಳು ಒಳಗೊಂಡಿದೆ ಅವುಗಳಲ್ಲಿ ಅತ್ಯಂತ ಹಿಂದುಳಿದ ನಿರ್ಲಕ್ಷಿತ ಅಲೆಮಾರಿ ಸಮುದಾಯದ ಸೂಕ್ಷ್ಮ ಸಮುದಾಯಗಳಿದ್ದು ಪ್ರಮುಖವಾಗಿ ತಮ್ಮ ಪಾರಂಪರಿಕ ವೃತ್ತಿ ಸೂಚಕವಾಗಿ ಕರೆಯಲ್ಪಡುವ ಶಿಳ್ಳೆ ಖ್ಯಾತಸ ಸಮುದಾಯವು ಒಂದಾಗಿದೆ ಇವರು ತೊಗಲು ಗೊಂಬೆಯಾಟ ಒಳನಾಡಿನ ನದಿ,ಹಳ್ಳ, ಕೆರೆ ಕಟ್ಟೆಗಳಲ್ಲಿ ಮೀನು ಹಿಡಿಯುವ, ಹೆಂಗಸರು ಹೆಜ್ಜೆ ಹಾಕುವ, ಬಿಕ್ಷಾಟನೆ ಅಂತಹ ವೃತ್ತಿಗಳಿಂದ ಬದುಕುತ್ತಿವೆ
ಇಂತಹ ಸಿಳ್ಳೆಕ್ಯಾತಸ ಸಮುದಾಯಕ್ಕೆ ಪ್ರಾದೇಶಿಕವಾಗಿ ಕೀಲ್ಲಿಕೇತರ ,ಕಟಬು ಕಟಬರ ,ಬುಂಡೆ ಬೇಸ್ತ ಅಂತ ಗುರುತಿಸಲಾಗುತ್ತವೆ ಜಾತಿಗಣತಿಯ ಸಮೀಕ್ಷೆ ಪ್ರಾರಂಭವಾಗಿರುವುದರಿಂದ ಅಲೆಮಾರಿ ಸೂಕ್ಷ್ಮ ಸಮುದಾಯದ ಶಿಳ್ಳೆಕ್ಯಾತಸ ಕ್ರಮ ಸಂಖ್ಯೆ 096 ರಲ್ಲಿ ಬರುವ ಉಪ ಜಾತಿಗಳ ಕಟಬು ಕಟಬರರು ಜಾತಿ ಕಾಲಂನಲ್ಲಿ ಶಿಳ್ಳೆಕ್ಯಾತಾಸ ಅಂತಾ ನಮೋದಿಸಲು ಆಗ್ರಹಿಸಲಾಗಿದೆ
*ಸಮೀಕ್ಷೆಗೆ ವಸ್ತು ನಿಸ್ಟವಾದ ಮಾಹಿತಿ ನೀಡಿ ‘ಶಿಳ್ಳೆಕ್ಯಾತಾಸ’ ಸಮುದಾಯ ಹಾಗೂ ಉಪ ಜಾತಿಗಳಿಗೆ ಆದ ಅನ್ಯಾಯದ ದತ್ತಾಂಶವನ್ನು ಒದಗಿಸಲು ವಿಜಯಪುರ ಜಿಲ್ಲಾಧ್ಯಕ್ಷ ಶಿವಮೂರ್ತಿ ಕಾಟಕರ (ದೇವಣಗಾಂವ) ಆಗ್ರಹಿಸಿದರು
ವರದಿ. ಉಮೇಶ ಕಟಬರ
