ಸನ್ಮಾನ್ಯ ಶ್ರೀ ಎಚ್ ಕೆ ಪಾಟೀಲ್ ರವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವರಲ್ಲಿ ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಅವರು ಮನವಿ ಮಾಡಿ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ರಾಮನಾಥಪುರದ ಶ್ರೀ ಚರ್ತುಯುಗಮೂರ್ತಿ ಶ್ರೀರಾಮೇಶ್ವರಸ್ವಾಮಿ ದೇವಾಲಯದ ಜಿಣ್ಣೋದ್ದಾರದ ಕಾಮಗಾರಿಗೆ 4 ಕೋಟಿ 40 ಲಕ್ಷ ರೂಗಳ ಅನುದಾನ ಬಿಡುಗಡೆ ಮಂಜೂರು ಮಾಡಿಸಿಕೊಡಬೇಕೆಂದು ಶಾಸಕರು ಎ. ಮಂಜು ರವರು ಮನವಿ ಮಾಡಿದರು. ಇದಕ್ಕೆ ಪ್ರವಾಸೋದ್ಯಮ ಸಚಿವರು ಎಚ್. ಕೆ. ಪಾಟೀಲ್ ಸರ್ ರವರು ಸಮ್ಮತಿಸಿ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಂ.ಎನ್. ಕುಮಾರಸ್ವಾಮಿ, ಕಾಳಬೋಯಿ, ಸಿದ್ದರಾಜು, ಮಹದೇವ ಇದ್ದರು.
