ಶಾಲಾ ಶಿಕ್ಷಣ ಇಲಾಖೆ ನಂಜನಗೂಡು ಇವರ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಹಾಗೂ ಗುರುವಂದನೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಶ್ರೀಮತಿ ಕಮಲಮ್ಮ ಗುರುಮಲ್ಲಪ್ಪ ಕಲ್ಯಾಣ ಮಂಟಪ ಹುಲ್ಲಳ್ಳಿ ರಸ್ತೆ ನಂಜನಗೂಡು ಇಲ್ಲಿ ನಡೆಯಿತು. ಸಮಾರಂಭವನ್ನು ನಂಜನಗೂಡಿನ ಜನಪ್ರಿಯ ಶಾಸಕರಾದ ದರ್ಶನ್ ಧ್ರುವನಾರಾಯಣ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಮಕ್ಕಳ ಬಾಲ್ಯಾವಸ್ಥೆಯಲ್ಲಿ ಅಚ್ಚು ಕಟ್ಟಾಗಿ ಕಾಪಾಡಿ ಅವರಿಗೆ ಉತ್ತಮ ಮಾರ್ಗದರ್ಶನ ನೀಡಿ ಈ ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾಡುವುದು ಪ್ರಾಥಮಿಕ ಶಾಲಾ ಶಿಕ್ಷಕರ ಕರ್ತವ್ಯವಾಗಿದೆ ಎಂದರು. ಈ ಸಮಾರಂಭದಲ್ಲಿ ನನಗೆ ಗುರುಭವನವನ್ನು ನಿರ್ಮಾಣ ಮಾಡಬೇಕೆಂದು ಸಂಘದ ವತಿಯಿಂದ ಎಲ್ಲಾ ಸದಸ್ಯರು ಅಧ್ಯಕ್ಷರು ಮಾನವಿಯನ್ನು ಮನವಿಯನ್ನು ಎಲ್ಲರೂ ಒಟ್ಟುಗೂಡಿ ನೀಡಿದ್ದೀರಿ ಸಂಪೂರ್ಣ ಕಾರ್ಯಗತವಾಗಿ ನಡೆಸಲು ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಮತ್ತು ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಂಪೂರ್ಣ ಸಹಕರಿಸುತ್ತೇನೆ ಎಂದರು. ನಿವೃತ್ತಿಯಾದ ಶಿಕ್ಷಕರಿಗೆ ಹಾಗೂ ತಾಲೂಕಿನ ಉತ್ತಮ ಶಿಕ್ಷಕರಿಗೆ ಪ್ರಶಸ್ತಿಯನ್ನು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಸಮಾರಂಭದಲ್ಲಿ ಜನಪ್ರಿಯ ಶಾಸಕರಿಗೆ ಎಲ್ಲಾ ಶಿಕ್ಷಕರ ಪರವಾಗಿ ಸನ್ಮಾನ ಮಾಡಲಾಯಿತು. ಹಾಗೂ ನಿವೃತ್ತ ಶಿಕ್ಷಕರಿಗೆ ತಾಲೂಕಿನ ಎಲ್ಲಾ ಉತ್ತಮ ಶಿಕ್ಷಕರಿಗೆ ಗೌರಾಪೂರ್ವಕ ಸನ್ಮಾನ ಮಾಡಲಾಯಿತು. ಸಮಾರಂಭದಲ್ಲಿ ಕಳಲೆ ಕೇಶವಮೂರ್ತಿ ಮಾಜಿ ಶಾಸಕರು, ವಿವೇಕಾನಂದ ಎಂಎಲ್ಸಿ, ಶ್ರೀಕಂಠ ನಗರಸಭಾಧ್ಯಕ್ಷರು, ಕ್ಷೇತ್ರ ಶಿಕ್ಷಣಾಧಿಕಾರರು ಮಹೇಶ್, ಬಿ ಆರ್ ಸಿ ಬಾಲ್ರಾಜು, ಅಧ್ಯಕ್ಷರಾದ ಧರ್ಮಾ ರತ್ನಾಕರ, ನೀಲಿ ಸಿದ್ದು ಅಧ್ಯಕ್ಷರು, ರವಿಕುಮಾರ್ ಮೈಸೂರು ಮೈಸೂರು ವಿಭಾಗದ ಕಾರ್ಯಧ್ಯಕ್ಷರು ಮುಂತಾದ ಗಣ್ಯರು ಭಾಗವಹಿಸಿದ್ದರು.
ಸತ್ಯನಾರಾಯಣ
