ಹುಣಸೂರು ತಾಲೂಕಿನ ಚಿಕ್ಕ ಹುಣಸೂರು ಗ್ರಾಮದ ಅಂಬೇಡ್ಕರ್ ನಗರದಲ್ಲಿ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲು ಜಾಗ ಕಲ್ಪಿಸಿ ಕೊಡುವಂತೆ ಶಿಶುಪಾಲನೆ ಯೋಜನಾಧಿಕಾರಿಗಳು 24/03/2025 ರಂದು ತಾಲೂಕು ದಂಡ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು. ಅಂಗನವಾಡಿ ಕಟ್ಟಡ ನಿರ್ಮಿಸಲು ಜಾಗವನ್ನು ಗುರುತಿಸಿ ಅಂಗನವಾಡಿ ಕಟ್ಟಲು ಜಾಗ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಕಸಬಾ ರಾಜಸ್ವ ನಿರೀಕ್ಷಕರಿಗೆ ಸ್ಥಳ ಪರಿಶೀಲನೆ ಮಾಡಿ ಸರ್ಕಾರಿ ಜಾಗವನ್ನು ಗುರುತಿಸಿ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲು ಸೂಕ್ತವಾದ ಸ್ಥಳವನ್ನು ನೀಡಬೇಕಾಗಿ ಮಾನ್ಯ ತಹಸಿಲ್ದಾರ್ ರವರು ಸ್ಥಳ ಪರಿಶೀಲಸಲು ರಾಜಸ್ವ ನಿರೀಕ್ಷಕರಿಗೆ ವರದಿ ನೀಡಿದರು. ರಾಜಸ್ವ ನಿರೀಕ್ಷಕರು ಚಿಕ್ಕ ಹುಣಸೂರು ಗ್ರಾಮದ ಸರ್ವೆ ನಂಬರ್ 73/1ರಲ್ಲಿ ಎರಡು ಎಕರೆ ಏಳು ಗುಂಟೆ ಜಾಗದಲ್ಲಿ ಸರ್ಕಾರಿ ಜಮೀನನ್ನು ಗುರುತಿಸಿದ ರಾಜಸ್ವ ನಿರೀಕ್ಷರು ಅದರಲ್ಲಿ 2 ಗುಂಟೆ ಜಾಗವನ್ನು ಗುರುತಿಸಿ ಮಾನ್ಯ ತಹಸಿಲ್ದಾರ್ ಅವರಿಗೆ ರಾಜಸ್ವ ನಿರೀಕ್ಷಕರು ವರದಿಯನ್ನು ನೀಡಿದರು. ನಂತರ ತಹಸಿಲ್ದಾರ್ ಅವರು ತಾಲೂಕು ಭೂಮಾಪಕ ವಿಜಯಕುಮಾರ್ ಅವರಿಗೆ ಎರಡು ಗುಂಟೆ ಜಾಗವನ್ನು ಅಳತೆ ಮಾಡಿ ಗಡಿ ಗುರುತಿಸಿ ನಕಾಶೆ ಮಾಡಿ ಕೊಡುವಂತೆ ತಹಸೀಲ್ದಾರ್ ಭೂಮಾಪಕರಿಗೆ ನೋಟಿಸ್ ಜಾರಿ ಮಾಡಿದರು. ನೋಟಿಸ್ ಪಡೆದ ವಿಜಯ್ ಕುಮಾರ್ ಅವರು ಸ್ಥಳ ಪರಿಶೀಲನೆ ಮಾಡಿದ ಬಳಿಕ ಅಳತೆ ಮಾಡಿ ನಕಾಶೆಯನ್ನು ಗುರುತಿಸಿ ಚೆಕ್ ಬಂದಿಯನ್ನು ಗುರುತಿಸಿದರು. ಈ ವಿಚಾರದ ಕುರಿತು ಅಂಗನವಾಡಿ ಬೇಕು ಎಂದು ಒಂದು ಗುಂಪು, ಮಾರಮ್ಮನ ಗುಡಿ ಬೇಕು ಎಂದು ಮತ್ತೊಂದು ಗುಂಪು ಹೋರಾಟಕ್ಕೆ ನಿಂತಿದೆ. ಹೀಗಾದರೆ ಮುಂದಿನ ಪೀಳಿಗೆಗೆ ಮಾರಮ್ಮನ ಗುಡಿ ಬೇಕೆ? ಅಥವಾ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಅಂಗನವಾಡಿ ಬೇಕೆ? ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ . ಎರಡು ಗುಂಪುಗಳ ನಡುವೆ ನಡೆಯುತ್ತಿರುವ ಹೋರಾಟಕ್ಕೆ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ
