ಸೃಜನ ಲೇಖಕರು ಮತ್ತು ಕಲಾವಿದರ ಬಳಗ ಹಾಗೂ ವಿಚಾರ ಪ್ರಜ್ಞೆ ಪತ್ರಿಕಾ ಬಳಗ ಕೃಷ್ಣರಾಜನಗರ ಮೈಸೂರು ಜಿಲ್ಲೆ ಇವರ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲೂಕಿನ ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಬಳಗದ 57ನೇ ಸಮಾರಂಭ ಅಂಬ ಭವಾನಿ ಸಮುದಾಯ ಭವನ ಬಜಾರ್ ರಸ್ತೆ ಅಲ್ಲಿ ನಡೆಯಿತು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಉದ್ಘಾಟನೆ ಮಾಡಿದರು ನಂತರ ಆನಂದ್ ಪ್ರಾಧ್ಯಾಪಕರು ಮೈಸೂರು ವಿಶ್ವವಿದ್ಯಾಲಯ ಇವರು ಮಾತನಾಡಿ 25 ವಯಸ್ಸಿನ ಕೆಳಗಿನ ಎಲ್ಲ ವಿದ್ಯಾರ್ಥಿಗಳು ಈ ದೇಶಕ್ಕೆ ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗುವುದರಲ್ಲಿ ಸಂಶಯವೇ ಇಲ್ಲ ಆದ್ದರಿಂದ ಯುವಶಕ್ತಿಗಳನ್ನು ಗುರುತಿಸಿ ಈ ಸಮಾಜಕ್ಕೆ ಪರಿಚಯಿಸುವುದು ಅವರಿಗೆ ಸನ್ಮಾನ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ

ಇಂಥ ಒಂದು ಸಮಾರಂಭವನ್ನು ವಿಚಾರ ಪ್ರಜ್ಞೆ ಪಾಕ್ಷಿಕ ಪತ್ರಿಕೆಯ ಸಂಪಾದಕರಾದ ಸುರೇಶ್ ಅವರು ಒಂದು ಒಳ್ಳೆಯ ಹಾಗೂ ಉತ್ತಮ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂರವರು ಈ ಪ್ರತಿಭಾವಂತರ ವಿದ್ಯಾರ್ಥಿಗಳ ಸುಂದರ ಕನಸನ್ನು ಕಾಣುತ್ತಿದ್ದರು ಇದು ಭಾರತಕ್ಕೆ ಆಗಿದೆ ಮಾಜಿ ರಾಷ್ಟ್ರಪತಿಗಳು ನಮ್ಮ ದೇಶ ಸೂಪರ್ ಪವರ್ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳುತ್ತಿದ್ದರು ಅದು ಈಗ ನನಸಾಗಿದೆ ಈ ಸಮಾರಂಭದಲ್ಲಿ ಅತಿ ಹೆಚ್ಚು ಪತ್ರಿಕಾ ಪ್ರೇಮಿಗಳು ಭಾಗವಹಿಸಿರುವುದು ನನಗೆ ಅತಿಹೆ ಸಂತೋಷವನ್ನುಂಟು ಮಾಡಿದೆ ಎಂದರು . ಅತಿ ಹೆಚ್ಚು ಅತಿ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ನಾನು ಕಣ್ಣಾರೆ ಕಂಡಂತೆ ಇದೇ ಮೊದಲ ಸಮಾರಂಭವಾಗಿದೆ ಎಂದರು ಈ ಸಮಾರಂಭದಲ್ಲಿ ಬಸಂತ್ ಅಧ್ಯಕ್ಷರು ನವನಾಗರ ಬ್ಯಾಂಕ್ ವಸಂತಮ್ಮ ಕೃಷ್ಣೆಗೌಡ ಮಾಜಿ ಉಪಾಧ್ಯಕ್ಷರು ಶಿವಪ್ರಕಾಶ್ ಇನ್ಸ್ಪೆಕ್ಟರ್ ಶೇಷಾದ್ರಿ ಕುಮಾರ್ ಸೋಮಯ್ಯ ಮುಂತಾದ ಗಣ್ಯರು ಭಾಗವಹಿಸಿದ್ದರು.
