ಡಾ : ಬಾಬು ಜಗಜೀವನ್ ರಾವ್ ಇವರ ಜಯಂತಿ ಕಾರ್ಯಕ್ರಮವನ್ನು ಹಿಂದುಳಿದ ವರ್ಗದ ಇಂಜಿನಿಯರ್ ಬಾಲಕಿಯರ ವಸತಿ ನಿಲಯ ಆಚರಣೆ ಮಾಡಲಾಯಿತು. ನಿಲಯದ ಸಿಬ್ಬಂದಿ ಶ್ರೀಮತಿ ವಿಜಯಲಕ್ಷ್ಮಿ ಎಸ್ ಬೇವಿನಮಟ್ಟಿ ಇವರು ಮಾತನಾಡಿ ಬಾಬು ಜಗಜೀವನ್ ರಾವ್ ಇವರು ಶೋಷಿತರ ಹಕ್ಕುಗಳಿಗಾಗಿ ಹೋರಾಡಿದ ಧೀಮಂತ ನಾಯಕ ಸ್ವಾತಂತ್ರ್ಯ ಹೋರಾಟಗಾರರು ಹಸಿರು ಕ್ರಾಂತಿಯ ಹರಿಕಾರರು ನಮ್ಮ ಭಾರತ ದೇಶದ ಮಾಜಿ ಉಪ ಪ್ರಧಾನಮಂತ್ರಿ ಆಗಿದ್ದರೂ, ಇವರು ಹಿಂದುಳಿದ ವರ್ಗದವರ ಬಗ್ಗೆ ಸಾಕಷ್ಟು ಹೋರಾಟಗಳನ್ನು ಮಾಡಿದ್ದು ಇವರು ತತ್ವ ಸಿದ್ಧಾಂತಗಳು ಎಲ್ಲರೂ ಪಾಲಿಸಬೇಕು ಎಂದು ವಸತಿ ನಿಲಯದ ಮಕ್ಕಳಿಗೆ ತಿಳಿಸಿದರು ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗದವರು, ವಸತಿ ನಿಲಯದ ವಿದ್ಯಾರ್ಥಿನಿಯರು ಹಾಜರಿದ್ದರು
