ಗುಡ್ ನ್ಯೂಸ್ ಸಂಸ್ಥಾಪಕ ರಾಘವೇಂದ್ರ ಜೈಲುಪಾಲಾಗಿದ್ದಾನೆ. 15 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿದೆ. ಜಾತಿನಿಂದನೆ ಪ್ರಕರಣದಲ್ಲಿ ಯುಟ್ಯೂಬರ್ ರಾಘವೇಂದ್ರ ಅರೆಸ್ಟ್ ಆಗಿದ್ದಾನೆ.ಎಸ್ಸಿ ಗಳನ್ನ ಚಪ್ಪಲಿ ಬಿಡುವ ಜಾಗದಲ್ಲಿ ಬಿಡಬೇಕು ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.
ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎರಡು ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ನಂತರ ರಾಘವೇಂದ್ರ ತಲೆ ಮರೆಸಿಕೊಂಡಿದ್ದ.ರಾಘವೇಂದ್ರನ ಬಂಧನಕ್ಕೆ ಪೊಲೀಸರ ಮೇಲೆ ಒತ್ತಡ ಹೇರಲಾಗಿತ್ತು.ರಾಘವೇಂದ್ರನ ಬಂಧನಕ್ಕೆ ತಂಡ ರಚಿಸಲಾಗಿತ್ತು. ಕುವೆಂಪುನಗರ ಠಾಣೆ ಪೊಲೀಸರು ಹೊರರಾಜ್ಯದಲ್ಲಿ ಅರೆಸ್ಟ್ ಮಾಡಿದ್ದಾರೆಂಬ ಮಾಹಿತಿ ಇದೆ.ತಾನು ಮಾತನಾಡಿದ್ದು ತಪ್ಪಾಗಿದೆ ಎಂದು ತನ್ನ ಚಾನೆಲ್ ನಲ್ಲೇ ಹೇಳಿಕೆ ನೀಡಿ ಸಮುದಾಯದ ಕ್ಷಮೆ ಕೇಳುವ ಮೂಲಕ ಪ್ರಕರಣಕ್ಕೆ ರಾಘವೇಂದ್ರ ಪುರಾವೆ ನೀಡಿದ್ದ.
ರಾಘವೇಂದ್ರ ವಿರುದ್ದ 15 ಲಕ್ಷ ಬ್ಲಾಕ್ ಮೇಲ್ ಮಾಡಿದ ಆರೋಪವೂ ಇದೆ.ಇದೀಗ ಅಟ್ರಾಸಿಟಿ ಪ್ರಕರಣದಲ್ಲಿ ತಗಲಾಕಿಕೊಂಡ ಯುಟ್ಯೂಬರ್ ರಾಘವೇಂದ್ರ ಜೈಲು ಪಾಲಾಗಿದ್ದಾನೆ.
