‘ಸಾಹಿತ್ಯದ ನವಿಲು’ ಹೆಚ್.ಎಸ್. ಪ್ರತಿಮಾ ಹಾಸನ್ ರವರ ‘ಪ್ರತಿಮಾವಲೋಕನ’ ಕೃತಿ ಪರಿಚಯ
ಸಮಾಜದಲ್ಲಿ ಹೆಣ್ಣಿಗೆ ವಿಶೇಷವಾದ ಸ್ಥಾನವಿದೆ. ಆದರೆ ಕೆಲವೊಮ್ಮೆ ಅದು ಹೇಳುವುದಕ್ಕೆ ಸರಿ ಹೊರತು ಪ್ರಸ್ತುತದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಇಂದು ಸಮಾಜ,ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಎಲ್ಲರಂಗದಲ್ಲೂ ಹೆಣ್ಣು ಮಕ್ಕಳು ಬಹಳಷ್ಟು ಕಷ್ಟಪಟ್ಟು ಸಾಧನೆಯ ದಾರಿಯಲ್ಲಿ ಅಡ್ಡಲಾಗಿ ಬಂದ ಸಮಸ್ಯೆಗಳನ್ನೆಲ್ಲ ಎದುರಿಸಿಕೊಂಡು ಹೋಗುತ್ತಿದ್ದಾರೆ. ಅಂಥವರಲ್ಲಿ ಹಾಸನ ನಗರದ ‘ಸಾಹಿತ್ಯದ ನವಿಲು’,’ಮಹಿಳಾ ಸಾಧಕಿ’,’ಬಹುಮುಖ ಪ್ರತಿಭೆ’,ಎಂದು ಹೆಸರು ಪಡೆದು ರಾಜ್ಯಾದಂತ ಹೆಸರಾಗಿರುವ ಶ್ರೀಮತಿ ಹೆಚ್.ಎಸ್.ಪ್ರತಿಮಾ ಹಾಸನ್ ರವರು ಸಾಹಿತ್ಯದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ.
ಹೀಗಾಗಲೇ ರಾಜ್ಯ,ಹೊರ ರಾಜ್ಯ,ರಾಷ್ಟ್ರ,ಅಂತರರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಪಡೆದು ನಮ್ಮ ಹಾಸನದ ‘ಹೆಮ್ಮೆಯ ಪುತ್ರಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇವರು ಎಂಎ, ಬಿಎಡ್, ಮಾಡಿದ್ದು ಅತ್ಯುನ್ನತ ದರ್ಜೆಯಲ್ಲಿ ತನ್ನ ಪದವಿಯನ್ನು ಮುಗಿಸಿದ್ದು. ಅಂದಿನಿಂದಲೂ ಬಹಳ ಕ್ರಿಯಾಶೀಲರಾಗಿಯೇ ಕ್ರೀಡೆಗಳಲ್ಲಿ, ಪಾಠ ಪ್ರವಚನಗಳಲ್ಲಿ ಮುಂದಿದ್ದರು.
ಒಮ್ಮೆ ಸಮಾಜದ ಎದುರು ಅವರ ಕಾರ್ಯ ಅನಾವರಣವಾಗಬೇಕಾದರೆ ಬಹಳಷ್ಟು ಕಷ್ಟದ ಕಾರ್ಯವನ್ನು ಅರಿತು,ಕಲಿತು, ಕಲಿಸುವಂತೆ ಮಾಡುವುದು ನಿಜವಾದ ಸಾಧನೆಯ ಸರಿ.
ಸಾಹಿತ್ಯದ ಕ್ಷೇತ್ರದಲ್ಲಿ ‘ ಸಾಹಿತ್ಯದ ನವಿಲು’ ಎಂಬ ಬಿರುದನ್ನು ಪಡೆದು ದಿನನಿತ್ಯದ ಅಂಕಣಗಳಲ್ಲಿ ಪ್ರಸಿದ್ಧಿಯಾಗಿ ರಾಜ್ಯದ್ಯಂತ ಮನೆ ಮಾತಾಗಿರುವ ಶ್ರೀಮತಿ ಹೆಚ್.ಎಸ್.ಪ್ರತಿಮಾ ಹಾಸನ್ ರವರು ಕಥೆ,ಲೇಖನ,ವಿಮರ್ಶೆ,ಶಿಶುಗೀತೆ,ಮಕ್ಕಳ ಕಥೆ,ಕಾದಂಬರಿ,ಕವನ,ಸಾಧಕರ ಪರಿಚಯ, ಟಂಕಾ ,ಚುಟುಕು,ಮುಕ್ತಕ,ಭಾವಗೀತೆ,ಜಾನಪದ ಗೀತೆ ಹೀಗೆ ಹಲವಾರು ಪ್ರಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಕ್ರಿಯವಾಗಿ ಸಾಹಿತ್ಯ ಸೇವೆಯನ್ನು ಮಾಡುತ್ತಿದ್ದಾರೆ . ಎಲ್ಲಡೆಯೂ ತಮ್ಮದೇ ಆದ ಅಭಿಮಾನ ಬಳಗವನ್ನು ಹೊಂದಿದ್ದಾರೆ.
ಹಲವಾರು ದಿಗ್ಗಜ ಸಾಹಿತಿಗಳ, ಹಿರಿಯ ಸಾಹಿತಿಗಳ, ಯುವ ಬರಹಗಾರರ ಪುಸ್ತಕಗಳನ್ನು ಪುಸ್ತಕ ಪರಿಚಯವನ್ನು ಮಾಡಿದ್ದು ಅದರಲ್ಲಿ 35ಪುಸ್ತಕ ಪರಿಚಯವನ್ನು ಮುಕ್ತಕಗಳಿಂದ ಪ್ರಾರಂಭಿಸಿ ಪುಸ್ತಕ ಪರಿಚಯಿಸಿದ್ದಾರೆ.ಎಲ್ಲ ಕೃತಿಗಳ ಪರಿಚಯವು ಪ್ರಸಿದ್ಧ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ತಾವು ಬೆಳೆಯುವುದಲ್ಲದೆ ಹಲವಾರು ಪ್ರತಿಭಾವಂತ ಕವಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಾ ಅವರನ್ನು ಸಹ ಬಳಸುತ್ತಿದ್ದಾರೆ. ತಮ್ಮದೇ ಆದ ಸಂಸ್ಥೆಗಳಲ್ಲಿ ಅಂತವರಿಗೆ ವೇದಿಕೆಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.
ಸೃಜನಾತ್ಮಕ ಸಾಹಿತ್ಯದಂತೆಯೇ ವಿಮರ್ಶ ಸಾಹಿತ್ಯದಲ್ಲಿ ಬಹುದೊಡ್ಡ ಸಾಧನೆ ಮಾಡಹೊರಟಿರುವ ಶ್ರೀಮತಿ ಹೆಚ್ ಎಸ್ ಪ್ರತಿಮಾ ಹಾಸನ್ ಅವರು ಹಾಸನದ ‘ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ’ದ ಸಂಸ್ಥಾಪಕ ಅಧ್ಯಕ್ಷರು. ಶಿಕ್ಷಕಿಯಾಗಿ, ಸಮಾಜ ಸೇವಕಿಯಾಗಿ,ಪತ್ರಕರ್ತೆಯಾಗಿ,ಗಾಯಕಿಯಾಗಿ,ಉತ್ತಮ ವಾಗ್ಮಿಯಾಗಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಪಡಿಯಚ್ಚು ಮೂಡಿಸಿದ್ದಾರೆ.ಪಾದರಸದಂತೆ ಸದಾ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ ಇವರು ಮಹಿಳಾ ಪರ ಹೋರಾಟಗಾರರು,ಕಾವೇರಿ ನದಿ ವಿವಾದ ಹೋರಾಟದಲ್ಲಿಯೂ ಭಾಗವಹಿಸಿದವರು.ಇವರ ಸಾಮಾಜಿಕ, ಶೈಕ್ಷಣಿಕ,ಸಾಹಿತ್ಯದ ಸೇವೆಗಾಗಿ ಗಡಿನಾಡು ಪ್ರದೇಶಗಳಲ್ಲಿ ‘ ಹೆಮ್ಮೆಯ ಕನ್ನಡತಿ ” ಗಡಿನಾಡ ಕನ್ನಡತಿ ‘ ಕನ್ನಡಪರ ಹೋರಾಟಗಾರ್ತಿ ಯಾಗಿ ರಾಷ್ಟ್ರೀಯ ಪ್ರಶಸ್ತಿಗಳು,ರಾಜ್ಯ ಪ್ರಶಸ್ತಿಗಳು,ಅಂತರರಾಜ್ಯ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ನಾನು ಕಂಡಂತೆ ಇವರು ಕಾರ್ಯದಲ್ಲಿ ನಮ್ಮಿಕ್ಕೆ ಇಟ್ಟು ಯಾವ ಪ್ರತಿ ಫಲ ಅಪೇಕ್ಷಿಸದೆ ಕಾರ್ಯದ ಮುಖಾಂತರ ತಮ್ಮ ಸ್ಥಾನಮಾನವನ್ನು ಉಳಿಸಿಕೊಂಡಿದ್ದಾರೆ. ಇವರಿಗೆ ಬೆನ್ನು ತಟ್ಟುವವರಿಗಿಂತ ಬೆನ್ನಿಗೆ ಇರಿದವರೆ ಹೆಚ್ಚು ಎಂಬುದು ಇವರ ಆತ್ಮೀಯ ಸ್ನೇಹಿತರಿಗೆ ತಿಳಿದಿದೆ. ಇವರು ಬಂದಂತಹ ಎಲ್ಲಾ ಪ್ರಶಸ್ತಿಗಳನ್ನು ಏನು ಪಡೆದಿಲ್ಲ. ಹಲವಾರು ಪರಿಸ್ಥಿತಿಗಳನ್ನು ತಿರಸ್ಕರಿಸಿದ್ದಾರೆ. ತಮ್ಮ ಪ್ರತಿಭೆಯ ಮೇಲೆ ಬಂದಂತಹ ಪ್ರಶಸ್ತಿಗಳನ್ನು ಪಡೆದಿರುವುದುಂಟು. ಎಷ್ಟು ಪ್ರಶಸ್ತಿಗಳನ್ನು ತಿರಸ್ಕಾರ ಮಾಡಿದ್ದಾರೆ. ತಮ್ಮ ನಿರೂಪಣಶೈಲಿ,ಪ್ರಾರ್ಥನೆ, ಕಾರ್ಯಕ್ರಮದ ಆಯೋಜನೆ, ಸಂಯೋಜನೆ, ಕಾರ್ಯಕ್ರಮದ ಅಧ್ಯಕ್ಷತೆ,ಮಖ್ಯ ಅತಿಥಿಯಾಗಿ
, ಬಹಳಷ್ಟು ಜನರ ಮನದಲ್ಲಿ ಇವರ ಕಾರ್ಯ ಉಳಿದಿದ್ದು ನಿಜಕ್ಕೂ ಇವರ ಕಾರ್ಯಕ್ಕೆ ಸಿಕ್ಕ ಫಲವದು.
ತಮ್ಮ ಕಾವ್ಯಾನುಭವ,ಪಾಠಪ್ರವಚನಗಳಿಂದ ಸಿದ್ಧಿಸಿಕೊಂಡು ಆಕರ್ಶಕವಾದ ಮಾತುಗಾರಿಕೆ ಶೈಲಿ ಇವೆಲ್ಲವೂ ಒಂದು ಹದವಾದ ಪಾಕದಲ್ಲಿ ಬೆರೆತು ಇಂದು ತಮ್ಮದೇ ವಿಮರ್ಶಾಲೇಖನಗಳ ಸಂಕಲನದ ರೂಪದಲ್ಲಿ ಪ್ರತಿಮಾವಲೋಕನ ಸಹೃದಯರ ಕರಗಳಲ್ಲಿ ರಾರಾಜಿಸಲು ಬಿಡುಗಡೆಗೆ ಸಿದ್ಧವಾಗಿದೆ
ಸೂಕ್ಷ್ಮ ಸಹೃದಯನೊಬ್ಬ ಒಂದು ಸಾಹಿತ್ಯ ಕೃತಿಯನ್ನು ಆಸ್ವಾದಿಸಿ,ಆಲೋಚಿಸಿ ಅದರ ಗುಣಾವಗುಣಗಳನ್ನು ವಿವೇಚಿಸಿ ಅದರ ಬೆಲೆಯನ್ನು ಕಟ್ಟುವ ಒಂದು ನಿಷ್ಪಕ್ಷಪಾತ ಪ್ರಯತ್ನವೇ ವಿಮರ್ಶೆ.ಅಂತಹ ಹಲವು ಕವಿಗಳ ಕೃತಿಗಳನ್ನು ಓದಿ ಪ್ರತಿಮಾ ಹಾಸನ್ ಅವರು ವಿಮರ್ಶಿಸಿ ಸಂಗ್ರಹಿಸಿದ್ದಾರೆ. ಅವರ ಕೃತಿಗಳ ಪರಿಚಯದೊಂದಿಗೆ ಅವರನ್ನು ಬಳಸುತ್ತಿದ್ದಾರೆ.
ವಿಮರ್ಶಕನಾದವನು ಪ್ರತಿಭಾವಂತ ಕವಿ ಸೃಷ್ಟಿಸಿದ ಸಾಹಿತ್ಯ ಕೃತಿಯ ಪರಿಶೀಲನೆಗೆ,ವಿವೇಚನೆಗೆ ಹೊರಡುವ ಕಾರಣ ಅವನಲ್ಲಿಯೂ ಪ್ರತಿಭೆ ಇರಬೇಕು.ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಆಸ್ವಾದನ ಕ್ರಿಯೆಯಲ್ಲಿ ಒಂದು ಪ್ರತಿಭಾ ವ್ಯಾಪಾರವೇ ಎಂದು ಪರಿಗಣಿತವಾಗಿದೆ.ಈ ಸಹೃದಯನ ಪ್ರತಿಭೆಯನ್ನು ರಾಜಶೇಖರ ಅಲಂಕಾರಿಕ ಭಾವಯತ್ರಿ ಎಂದು ಕರೆದಿರುವನು. ಹೆಚ್.ಎಸ್.ಪ್ರತಿಮಾ ಹಾಸನ್ ರವರು ಮುಕ್ತಕಗಳು,ಚುಟುಕುಗಳು,ಕವನಸಂಕಲನಗಳು,ಕಥೆಗಳು ಮುಂತಾದವುಗಳನ್ನು ರಚಿಸಿದವರು ಮತ್ತು ಹಲವು ವೇದಿಕೆಗಳಲ್ಲಿ ತಮ್ಮ ವಿದ್ವತ್ಪೂರ್ಣ ವಿಷಯ ಮಂಡಿಸಿದವರಾಗಿ ಸ್ವತಃ ಭಾವಯತ್ರಿ ಪ್ರತಿಭೆ ಹೊಂದಿರುವುದರಿಂದ ಇಲ್ಲಿನ ವಿಮರ್ಶೆಗಳಿಗೆ ನ್ಯಾಯ ದೊರೆತಿದೆ.
ಈಗಾಗಲೇ ಸಾಹಿತ್ಯ ಲೋಕಕ್ಕೆ ‘ಪಂಚಮುಕ್ತ ಕಮಾಲೆ’,’ ಮನದಾಳದ ಪ್ರತಿಬಿಂಬ’, ಅಂತರಾಳದ ಪ್ರತಿರವ’, ‘-ಪ್ರತಿಬೋಧ’, ‘ ನೀಲ ಪ್ರತಿಮಾನ ಮಂಜು’, ‘ಭಾವನೆಗಳ ಪ್ರತಿರೂಪ ‘ ‘ ಪ್ರತಿಮಾಂತರಂಗ ‘( ಸಮಗ್ರ ಸಂಕಲನ ), ‘ಪ್ರತಿ ಕಾವ್ಯ ‘, ‘ ಬಣ್ಣದ ಪ್ರತಿ ಡಬ್ಬಿ’ ಪ್ರಸ್ತುತ ‘ ಪ್ರತಿಮಾವಲೋಕನ’ ( ಕೃತಿ ವಿಮರ್ಶನಾಲೋಕದಲ್ಲಿ ಒಂದು ಪಯಣ) ಕೃತಿಯು ಬಿಡುಗಡೆಗೆ ಸಿದ್ಧವಾಗಿದೆ. ಓದುಗರ ಕೈಸರಲಿದೆ.
ಟಿ ಎಸ್ ಎಲಿಯಟ್ ಹೇಳುವಂತೆ “ಕಾಲದಿಂದ ಕಾಲಕ್ಕೆ ವಿಮರ್ಶಕನೊಬ್ಬ ಉದಯಿಸಿ ಹಿಂದಿನ ಸಾಹಿತ್ಯವನ್ನು ಪರಿಶೀಲಿಸಿ, ಕವಿಗಳನ್ನು, ಕೃತಿಗಳನ್ನು ಒಂದು ಹೊಸ ಕ್ರಮದಲ್ಲಿ ನೆಲೆಗೊಳಿಸುವುದು ಅಗತ್ಯವಾಗಿದೆ” ಹೆಚ್.ಎಸ್.ಪ್ರತಿಮಾ ಹಾಸನ್ ಅವರು ಹಲವಾರು ಸಾಹಿತಿಗಳ ಕೃತಿಗಳನ್ನು ವಿಮರ್ಶಿಸಿದ್ದಾರೆ.’ ಇವರ ‘ಪ್ರತಿಮಾವಲೋಕನ'( ಕೃತಿ ವಿಮರ್ಶನಾ ಲೋಕದಲ್ಲೊಂದು ಪಯಣ) ಈ ಕೃತಿಯಲ್ಲಿರುವ ಎಲ್ಲಾ ಕೃತಿ ಪರಿಚಯವನ್ನು ಮುಕ್ತಕದಿಂದ ಪ್ರಾರಂಭಿಸಿದ್ದಾರೆ.
ಈ ಕೃತಿಯ ಬೆನ್ನುಡಿಯನ್ನು ಟಿ.ಸತೀಶ್ ಜವರೇಗೌಡ ರವರು ಬರೆದು ಬೆನ್ನು ತಟ್ಟುವ ಕೆಲಸವನ್ನು ಮಾಡಿ ಪ್ರೋತ್ಸಾಹಿಸಿದ್ದಾರೆ. ಮುನ್ನುಡಿಯನ್ನು ಗೊರೂರು ಅನಂತರಾಜುರವರು ಬಹಳ ಅರ್ಥಪೂರ್ಣವಾಗಿ ಬರೆದಿದ್ದಾರೆ. ಕೃತಿಯು ಒಟ್ಟು 228 ಪುಟಗಳನ್ನು ಒಳಗೊಂಡಿದ್ದು. ಬೆಲೆಯೂ 276 ಆಗಿದ್ದು. ಅರ್ಪಣೆಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತಿರುವಂತಹ ತನ್ನ ತಂದೆ ದಿವಂಗತ ಶ್ರೀ ಸುರೇಶ್ ರವರಿಗೂ, ತಾಯಿ ಶ್ರೀಮತಿ ನೀಲಮ್ಮ ಸುರೇಶ್ ರವರಿಗೂ, ಸಹೋದರರಾದ ಹೆಚ್.ಎಸ್.ಮಂಜುನಾಥ್ ( ಆರೋಗ್ಯ ನಿರಕ್ಷಣಾಧಿಕಾರಿ )ರವರಿಗೂ ವಿಶೇಷವಾಗಿ ಅರ್ಪಿಸಿದ್ದಾರೆ.
ಹಲವಾರು ದಿಗ್ಗಜರು ಶುಭನುಡಿಯನ್ನು ಬರೆದು ಆಶೀರ್ವದಿಸಿದ್ದಾರೆ. ಅಶ್ವಕ್ ಶಾಹಿ ಕನ್ನಡಿಗ ಕವಿಗಳು ಬೆಂಗಳೂರು ‘ ಸಾಹಿತ್ಯ ಲೋಕದ ತಾರೆಯ ಬಗ್ಗೆ’ ಎಂಬ ಶೀರ್ಷಿಕೆ ಅಡಿಯಲ್ಲಿ ಲೇಖಕಿಯ ಬಗ್ಗೆ ಪರಿಚಯ ಮಾಡಿದ್ದಾರೆ 35 ಕೃತಿಗಳ ವಿಮರ್ಶನಾ ಲೇಖನದ ನಂತರ ಲೇಖಕಿಯ ಪೂರ್ಣ ಪರಿಚಯವನ್ನು ಮುತ್ತುಸ್ವಾಮಿ ರವರು ಮಾಡಿದ್ದಾರೆ.
35 ತೃತೀಯ ಪರಿಚಯದಲ್ಲಿ ಮೊದಲನೆಯದು
ನಾರಾಯಣ ಸ್ವಾಮಿರವರ ‘ಅಂತರಂಗದದ್ಯಾನ’ದಲ್ಲಿ
ಗಜಲ್ ಗಳನ್ನು ಹಲವಾರು ಓದುಗರಿಗೆ ನೀಡಿ ಅದರ ಅಭಿಪ್ರಾಯವನ್ನು ವಿಭಿನ್ನವಾಗಿಯೇ ಕೃತಿಯ ವಿಮರ್ಶೆಯನ್ನು ಮಾಡಿರುವುದು ಇವರ ಹೊಸತನದ ಹಾಗೂ ವಿಶೇಷತೆಯನ್ನು , ವಿಭಿನ್ನತೆಯನ್ನು ಹೇಳುತ್ತದೆ. ಪ್ರತಿಯೊಂದು ವಿಮರ್ಶೆಯಲ್ಲೂ ಸಹ ಮೊದಲೊಂದು ಮುಕ್ತ ಕವನ ರಚಿಸಿ ತೃತೀಯ ಪರಿಚಯ ಮಾಡಿರುವುದು ಓದುಗರಿಗೆ ಆಸಕ್ತಿಯನ್ನು ಮೂಡಿಸುತ್ತದೆ. ಆನಂತರದಲ್ಲಿ ರಮೇಶ್ ಗುಬ್ಬಿ ರವರ ‘ಗುಬ್ಬಿಯ ಕಲರವ’ ಚುಟುಕು ಸಂಕಲನದಲ್ಲಿ ಚುಟುಕಗಳ ವಿವರಣೆ ಬಹಳ ಸೊಗಸಾಗಿ ನೀಡಿದ್ದಾರೆ. ಹಿರಿಯ ಸಾಹಿತಿಯಾದ ಗೊರೂರು ಅನಂತರಾಜು ಅವರ ಕಥೆಗೆ ವಸ್ತುವಾದಳು ಹುಡುಗಿ,ಸ ರಾ ಸುಳಕೂಡೆ ಅವರ ಕೇಳಿದಂತೆ ಹೇಳಿದಂತೆ ,ಡಿ ಎಸ್ ದಿನೇಶ ಅವರ ಒನ್ ಟಿ, ಸಿ ವಾಯ್ ಮೆಣಸಿನಕಾಯಿ ಅವರ ಕಾಲಚಕ್ರ ಮತ್ತಿತರ ಕಥೆಗಳು,ಗೀತಾ ವಿ ಆರ್ ಅವರ ಸೌಂದರ್ಯ ಗೀತ, ಮಾಲತಿ ಮೇಲ್ಕೋಟೆ ಅವರ ಹರಿವ ನದಿ, ಭೀಮೇಶ ತಳವಾರ ಅವರ ಕಣ್ಣೊಳಗಿನ ಕವಲುಗಳು,ಎಂ ಗೀತಾ ತಿಪ್ಪೇಸ್ವಾಮಿ ಅವರ ಭಾವಲಹರಿ ಮತ್ತು ಚುಟುಕು ಸಂಕಲನ, ಕವನಸಂಕಲನ, ಕಥಾಸಂಕಲನಗಳು ಹನಿಗವನ ಹೀಗೆ ಎಲ್ಲ ಪ್ರಕಾರದ ಸಾಹಿತ್ಯ ಕೃತಿಗಳನ್ನು ವಿಮರ್ಶಿಸಿ ವ್ಯಾಖ್ಯಾನ ನೀಡಿದ ವಿಮರ್ಶಾಲೇಖನ ಸಂಗ್ರಹ ಇದಾಗಿದೆ.
ವಿಮರ್ಶೆಯಿಂದ ಕವಿಗೆ, ಕಾವ್ಯಕ್ಕೆ,ಸಹೃದಯ ಸಮಾಜಕ್ಕೆ ಹಲವು ಪ್ರಯೋಜನಗಳಿವೆ.ಕವಿಯ ಕೃತಿಯ ಕಡೆಗೆ ಸಹೃದಯರ ಗಮನ ಹರಿದು ಕವಿಯ ಕೀರ್ತಿ ಹೆಚ್ಚಬಹುದು,ಕವಿಗೆ ತನ್ನ ಕಾವ್ಯದ ಬೆಲೆ ತಿಳಿಯಬಹುದು,ತನ್ನ ಮುಂದಿನ ಕೃತಿಗಳಲ್ಲಿ ಹಿಂದಿನ ಕೃತಿಗಳಲ್ಲಿನಲ್ಲಿ ಅಳವಡಿಸಿಕೊಳ್ಳಲಾಗದ ವಿಚಾರಗಳನ್ನು ತಿದ್ದಿಕೊಳ್ಳಲು ಸಹಾಯವಾಗಬಹುದು ಹೀಗೆ ಹಲವು ರೀತಿಯಲ್ಲಿ ಮಾರ್ಗದರ್ಶನ ವಾಗುವುದು.ಆದ್ದರಿಂದ ಪ್ರತಿಮಾ ಹಾಸನ್ ರವರ ಕಾರ್ಯ ಶ್ಲಾಘನೀಯ. ಪ್ರತಿಮಾ ಹಾಸನ್ ಅವರಿಂದ ಇನ್ನಷ್ಟು ಇಂಥಹ ಮೌಲ್ಯಯುತ ಕೃತಿಗಳು ಸಾರಸ್ವತ ಲೋಕಕ್ಕೆ ಬರಲಿ ,ಸಹೃದಯರ ಹೃದಯ ತಣಿಯಲಿ ಎಂದು ಆಶಿಸುತ್ತ ಶುಭ ಹಾರೈಸುವೆನು.
ಶ್ರೀಮತಿ ಹೆಚ್.ಎಸ್.ರಾಧಾ.ಶಿಕ್ಷಕಿ.ಹಾಸನ