ಉತ್ತರ ಕನ್ನಡ ಜಿಲ್ಲೆಯಿಂದ ಒಟ್ಟು 400 ಗೃಹ ರಕ್ಷಕರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಜಿಲ್ಲಾ ಕಮಾಂಡೆಂಟ್ ರಾದ ಡಾ.ಸಂಜು ನಾಯಕ ರ ನೇತೃತ್ವದಲ್ಲಿ ಹೊರಟಿದೆ.
ಕೊಲ್ಹಾಪುರ ಜಿಲ್ಲೆಗೆ ನಮ್ಮ ಉತ್ತರ ಕನ್ನಡ ಜಿಲ್ಲೆಯ ಗೃಹ ರಕ್ಷಕರನ್ನು ನಿಯೋಜನೆ ಮಾಡಲಾಗಿದೆ . ಉತ್ತರ ಕನ್ನಡ
ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಸಲ 50 ಮಹಿಳಾ ಗೃಹ ರಕ್ಷಕರನ್ನು ಹೊರ ರಾಜ್ಯದ ಚುನಾವಣೆಗೆ ನಿಯೋಜನೆ ಮಾಡಲಾಗಿದೆ. ಕಮಾಂಡೆಂಟ್ ಡಾ. ಸಂಜು ನಾಯಕ ರು ವೈಯಕ್ತಿಕವಾಗಿ ಮುತುವರ್ಜಿ ವಹಿಸಿ ರಾಜ್ಯದ ಹಿರಿಯ ಅಧಿಕಾರಿಗಳ ಮನವೊಲಿಸಿ ಮಹಿಳಾ ಗೃಹ ರಕ್ಷಕೀಯರಿಗೆ ಹೊರ ರಾಜ್ಯದ ಚುನಾವಣೆಯಲ್ಲಿ ಭಾಗವಹಿಸಲು ಅನುಮತಿ ಪಡೆದಿದ್ದಾರೆ.16 ನವೆಂಬರ್ ನಿಂದಾ 21 ರವರೆಗೆ ಒಟ್ಟು 6 ದಿನ ಚುನಾವಣಾ ಬಂದೋಬಸ್ತ್ ಕರ್ತವ್ಯಕ್ಕೆ ಜಿಲ್ಲೆಯ ಗೃಹ ರಕ್ಷಕರು ಹೊರಟಿದ್ದಾರೆ.
ಒಂದು ದಿನಕ್ಕೆ ಅಂದಾಜು 1080 ರುಪಾಯಿ ಲೆಕ್ಕದಲ್ಲಿ ಪ್ರತಿ ಗೃಹ ರಕ್ಷಕರಿಗೆ ಕರ್ತವ್ಯ ಭತ್ಯೆ ಮಹಾರಾಷ್ಟ್ರ ಸರಕಾರ ನೀಡಲಿದೆ.ಜಿಲ್ಲೆಯ ಒಟ್ಟು 14 ಘಟಕದಿಂದ 400 ಗೃಹ ರಕ್ಷಕರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಕರ್ತವ್ಯಕ್ಕೆ ತೆರಳಿದ್ದಾರೆ. ಶ್ರೀಮತಿ ಡಾ.ದೀಪಾಲಿ ಕಾಳೆ, ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್, ಸೊಲ್ಲಾಪುರ ಸಿಟಿ ಇವರ ಅಧೀನದಲ್ಲಿ 6 ದಿನ ಮಹಾರಾಷ್ಟ್ರ ಚುನಾವಣೆ ಕರ್ತವ್ಯ ಮಾಡಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಿಂದ 350 ಪುರುಷ ಗೃಹ ರಕ್ಷಕರು ಮತ್ತು 50 ಮಹಿಳಾ ಗೃಹ ರಕ್ಷಕರನ್ನು ಚುನಾವಣೆಗೆ ನಿಯೋಜನೆ ಮಾಡಲಾಗಿದೆ.
ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಗೃಹ ರಕ್ಷರಿಗೆ ಹೊರ ರಾಜ್ಯದ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಲು ಕಮಾಂಡೆಂಟ್ ಡಾ.ಸಂಜು ನಾಯಕ ಮುತುವರ್ಜಿ ವಹಿಸಿಕೊಂಡು ಅವಕಾಶ ನೀಡಿದ್ದಾರೆ. ಶ್ರೀ. ಎಂ. ರಾಜಕುಮಾರ, ಐಪಿಎಸ್ ಪೊಲೀಸ ಕಮಿಷನರ್ ಸೊಲ್ಲಾಪುರ ಸಿಟಿ ಇವರ ಅಧೀನದಲ್ಲಿ 6 ದಿನ ಮಹಾರಾಷ್ಟ್ರ ಚುನಾವಣೆ ಕರ್ತವ್ಯ ಮಾಡಲಿದ್ದಾರೆ.
