ಚನ್ನರಾಯಪಟ್ಟಣ ತಾಲೋಕು
ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ತಾಲೂಕು ಶಿಕ್ಷಣಾಧಿಕಾರಿ ದೀಪ ಅವರಿಗೆ ಮನವಿ ಸಲ್ಲಿಸಲಾಯಿತು
ಹಾಸನ ಜಿಲ್ಲಾಧ್ಯಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಯುವಕರು ಹಳ್ಳಿಗಳಿಂದ ಮತ್ತು ಪಟ್ಟಣಗಳಿಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವ್ಯಾಸಂಗ ಮಾಡುವ ಸಂದರ್ಭದಲ್ಲಿ ಬೇರೆ ಇತರೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಹಲವು ಪ್ರಕರಣಗಳಲ್ಲಿ ಕಂಡು ಬಂದಿರುತ್ತದೆ. ಕೆಲವು ದುಷ್ಟ ಹಿತಾಸಕ್ತಿಗಳು ವಿದ್ಯಾರ್ಥಿಗಳನ್ನು ದುರುಪಯೋಗಪಡಿಸಿಕೊಂಡು ಸಮಾಜದ ವಿರುದ್ಧ ದೇಶದ್ರೋಹದಂತಹ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಕೆಲವು ಕಾಲೇಜುಗಳಲ್ಲಿ ಡ್ರಗ್ಸ್, ಗಾಂಜಾ, ಅಫೀಮು ಅಂತಹ ಮಾದಕ ವಸ್ತುಗಳನ್ನು ಹಲವು ಕಾಲೇಜುಗಳಲ್ಲಿ ಮಾರಾಟ ಮಾಡಿ, ವಿದ್ಯಾರ್ಥಿಗಳ ಜೀವನವನ್ನು ಕಿಡಿಗೇಡಿಗಳು ಹಾಳು ಮಾಡುತ್ತಿದ್ದಾರೆ. ಅದರಲ್ಲಿ ಬಡ ವಿದ್ಯಾರ್ಥಿಗಳು ಹಣದ ಆಸೆಗೆ ಬಲಿಯಾಗುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳನ್ನು ಹೆದರಿಸಿ. ಈ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಈ ಕೃತ್ಯಗಳಲ್ಲಿ ಭಾಗವಹಿಸಲು ಒಳ್ಳೆಯ ವಿದ್ಯಾರ್ಥಿಗಳನ್ನು ಹಾಳು ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಿಂದ ವಿದ್ಯಾರ್ಥಿನಿಯರು ಮತ್ತು ನಗರ ಪ್ರದೇಶದಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ. ವಿದ್ಯಾರ್ಥಿನಿಯರಿಗೆ ಹಲವು ಸಮಸ್ಯೆಗಳು ಇರುತ್ತವೆ. ಕೆಲವು ಕಿಡಿಗೇಡಿಗಳಿಂದ ವಿದ್ಯಾರ್ಥಿನಿಯರಿಗೆ ಹೆದರಿಸುತ್ತಾರೆ, ಭಯಪಡಿಸುತ್ತಾರೆ. ವಿದ್ಯಾರ್ಥಿನಿಯರ ಪೋಟೋ ತೆಗೆಯುವುದು, ವಿಡಿಯೋ ಮಾಡುವುದು, ಅದನ್ನು ತೋರಿಸಿ ಹೆದರಿಸುವುದು ಅವರನ್ನು ಹಾಗೂ ಇತರೆ ಸ್ನೇಹಿತರನ್ನು ಬೇರೆ ರೀತಿ ಬಳಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ವಿಷಯಗಳನ್ನು ವಿದ್ಯಾರ್ಥಿನಿಯರು ತಮ್ಮ ತಂದೆ-ತಾಯಿಯ ಹತ್ತಿರ ಹೇಳಲು ಹೆದರುತ್ತಾರೆ. ಅವಮಾನವಾಗುವುದೆಂದು ಭಾವಿಸುತ್ತಾರೆ. ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುತ್ತಾರೆ. ಇದು ಮಿತಿಮೀರಿದಾಗ ಅನಾಹುತಗಳು ನಡೆಯುತ್ತವೆ, ಉದಾಹರಣೆಗೆ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಆಗಬಹುದು, ಕೊಲೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿದೆ. ಕಾಲೇಜಿನ ಹತ್ತಿರ ಇರುವ ಶಿಕ್ಷಣಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಪ್ರತಿ ತಿಂಗಳು ಕಾಲೇಜಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಕುಂದು-ಕೊರತೆ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು. ಪ್ರಾಂಶುಪಾಲರು ಮತ್ತು ಉಪನ್ಯಾಸಕಿಯರ ಹಾಗೂ ಶಿಕ್ಷಣ ಅಧಿಕಾರಿ ಅವರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ರವರ ನೇತೃತ್ವದಲ್ಲಿ ಪ್ರತೀ ಕಾಲೇಜಿನಲ್ಲಿ ಒಂದು ಕಮಿಟಿಯನ್ನು ಮಾಡಿ, ಪ್ರತೀ ತಿಂಗಳು ಸಭೆ ಕರೆದು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಅವರಿಗೇನಾದರೂ ತೊಂದರೆಗಳು, ಹೆದರಿಕೆಗಳು ಇನ್ನೂ ಸಮಸ್ಯೆಗಳು ಇದ್ದರೆ ಚರ್ಚಿಸಲು ಮುಕ್ತ ಅವಕಾಶವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟರೆ ದುರ್ಘಟನೆಗಳು ನಡೆಯದಂತೆ ಮುಂಜಾಗ್ರತಾವಾಗಿ ಕ್ರಮ ಕೈಗೊಳ್ಳಬಹುದು.
ಕಮಿಟಿಯವರ ಮುಂದೆ ವಿದ್ಯಾರ್ಥಿನಿಯರು ಪ್ರತ್ಯೇಕವಾಗಿ ಕೇಳಿಕೊಳ್ಳುತ್ತಾರೆ. ಆಗ ಅದರ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಂಡರೆ ಮುಂದೆ ಆಗಬಹುದಾದ ಅನಾಹುತಗಳನ್ನು ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಪ್ಪಿಸಬಹುದು.
ರಾಜ್ಯದಲ್ಲಿ ಈಗ ನಿರ್ಮಾಣವಾಗಿರುವ ಕೆಲವು ಘಟನೆಗಳಿಂದ ಮುಕ್ತವಾಗಿ ಧೈರ್ಯದಿಂದ ಎಲ್ಲಾ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಬಹುದು. ಪೋಷಕರ ಆತಂಕಗಳು ದೂರವಾಗಿ ಶಿಕ್ಷಣ ಇಲಾಖೆಗೆ ಒಳ್ಳೆಯ ಹೆಸರು ಬರುತ್ತದೆ.
ಆದ್ದರಿಂದ ತಾವುಗಳು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯ ಎಲ್ಲಾ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಅಖಿಲ ಕರ್ನಾಟಕ ಕಾಂಗ್ರೆಸ್ ಕಮಿಟಿ ಮಾನವ ಹಕ್ಕು ಆಯೋಗದ ಹಾಸನ ಜಿಲ್ಲಾ ಅಧ್ಯಕ್ಷರು ವರುಣ್ ಚಕ್ರವರ್ತಿ ಮತ್ತು ಮನೋಜ್ ನಾಯಕ್ ಅಯೂಬ್ ರಘು ಕ್ಷೇತ್ರ ಶಿಕ್ಷಣಾಧಿಕಾರಿ ದೀಪ ಅವರಿಗೆ ಮನವಿ ಮಾಡಿದರು
ವರದಿ : ಪರ್ವಿಜ್ ಅಹಮದ್ ಹಾಸನ