ವಿಜಯಪುರ: ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆಯ ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿ ಡಾಕ್ಟರ್ ಎಂ. ಡಿ ಮೇತ್ರಿಯವರನ್ನು ನೇಮಕಗೊಳಿಸಿ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ.ರಾಘವೇಂದ್ರ ಎಸ್.ಆರ್. ಅವರು ಆದೇಶಿಸಿದ್ದಾರೆ. ಮಾಹಿತಿ ಹಕ್ಕು ಉಲ್ಲಂಘನೆ, ದೀನ ದುರ್ಬಲರು, ಜನಸಾಮಾನ್ಯರ ಮೇಲೆ ದೌರ್ಜನ್ಯ, ಜನಾಂಗೀಯ ನಿಂದನೆ, ಮಹಿಳೆ ಮತ್ತು ಮಕ್ಕಳ ಮೇಲೆ ಕಿರುಕುಳ, ಮಾಹಿತಿ ಹಕ್ಕು ಬಳಕೆದಾರರ ಮೇಲೆ ಹಲ್ಲೆ, ಸುಳ್ಳು ದೂರು, ದಬ್ಬಾಳಿಕೆಯಂತಹ ಹಕ್ಕುಗಳ ಉಲ್ಲಂಘನೆ ಮಾನವ ವಿಚಾರಗಳ ವಿರುದ್ಧ ಹೋರಾಟ ನಡೆಸಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಶ್ರಮಿಸುವಂತೆ ರಾಜ್ಯಾಧ್ಯಕ್ಷರು ನೇಮಕಾತಿಯಲ್ಲಿ ಸೂಚಿಸಿದ್ದಾರೆ.
ವರದಿ : ಯಮನಪ್ಪ ಚೌಧರಿ