ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿಲಮೂರು ಗ್ರಾಮದ ಒಳ ರಸ್ತೆಯು ತಂದೆ ತಾಯಿ ಇಲ್ಲದೆ ಪರದೇಶಿಯಂತೆ ಕಾಣುತ್ತಿದೆ, ನರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿಲಮೂರ ಗ್ರಾಮದ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಿಂದ ಬಣ್ಣೆಮ್ಮ ದೇವಿಯ ಕಟ್ಟೆ ವರೆಗೆ ಅತಿ ಹದಗೆಟ್ಟು ಹೋಗಿದೆ, ಇದು ಸಾರ್ವಜನಿಕರಿಗೆ ರೈತರಿಗೆ ಮತ್ತು ಶಾಲಾ ಮಕ್ಕಳಿಗೆ ಇದು ಮುಖ್ಯರಸ್ತೆಯಾಗಿದ್ದು ನಡೆದಾಡಲು ತೊಂದರೆಯಾಗಿದೆ, ಇದರ ವಿಚಾರ ವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರು ಕೆಲಸವಾಗುತ್ತಿಲ್ಲ, ಗ್ರಾಮ ಪಂಚಾಯಿತಿ ಸದಸ್ಯರು ಕೂಡಾ ಇದನ್ನು ನೋಡಿ ನೋಡಿದ ಹಾಗೆ ಸುಮ್ಮನಿದ್ದದ್ಧು, ಸಾರ್ವಜನಿಕರಿಗೆ ವಿಚಿತ್ರವಾಗಿದೆಯಂದು ಸಾರ್ವಜನಿಕರು ಹೇಳುತ್ತಿದ್ದಾರೆ, ರಸ್ತೆ ಬದಿಯಲ್ಲಿ ಮನಿಯ ಜನರು ರೈತರು ಮತ್ತು ವಿದ್ಯಾರ್ಥಿಗಳು ರಸ್ತೆಯ ಸರಿ ಮಾಡಿಲ್ಲವೆಂದು ಪಂಚಾಯತಿಯವರಿಗೆ ಹಿಡಿ ಶಾಪ ಹಾಕುತ್ತಿದ್ದು, ಇದು ಎರಡು ವರ್ಷದಿಂದ ಇದೇ ತರಹ ಗಲೀಜು ನೀರು ನಿಂತು ರಸ್ತೆ ಬದಿಯಲ್ಲಿ ಇದ್ಧ ಮನೆಯವರಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿ ಇದರಿಂದ ರೋಗಾಣುಗಳು ಹಬ್ಬುತ್ತಿವೆಯಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ, ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರು ಮತ್ತು ವಾರ್ಡ್ ಸದಸ್ಯರು ಹಾಳಾದ ರಸ್ತೆ ಕಡೆ ಗಮನ ಹರಿಸಿ ಸರಿ ಮಾಡಬೇಕೆಂದು ಸಾರ್ವಜನಿಕರು ಕೋರಿಕೆಯಾಗಿದೆ,
ವರದಿ ರಾಮಚಂದ್ರ ಹ ಕುಕಡಿ ರಾಮದುರ್ಗ