ಶರವತಿ ಮುಳುಗಡೆ ಸಂತ್ರಸ್ತರ.. ಧ್ವನಿಯಾಗಿ ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತಿರುವ ಮಲೆನಾಡಿನ ಹೆಮ್ಮೆಯ.. ಅಭಿವೃದ್ಧಿಯ ನಂಬರ್ ಒನ್ ಸಂಸದ ಶ್ರೀ ಬಿ ವೈ ರಾಘವೇಂದ್ರ… ಇಂದು ಸಂಸತ್ ಅಧಿವೇಶನದಲ್ಲಿ.. ಕನ್ನಡದಲ್ಲಿ ಮಾತು ಆರಂಭಿಸಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸತ್ ಸದಸ್ಯರಾದ ಶ್ರೀ ಬಿ ವೈ ರಾಘವೇಂದ್ರ ಅವರು.. ಅನೇಕ ವರ್ಷಗಳ ಒಂದು ಸಮಸ್ಯೆ.. ಶರಾವತಿ ಮುಳುಗಡೆ ಸಂತ್ರಸ್ಥರ ವಿಷಯವನ್ನ ಪ್ರಸ್ತಾಪಿಸಿದರು.. ಸ್ವತಂತ್ರ ಬಂದು 77 ವರ್ಷ ಆಯ್ತು ಸಂವಿಧಾನ ಬಂದು 75 ವರ್ಷ ಆಯ್ತು ಆದರೆ ಈ ವಿಚಾರವಾಗಿ ಶರಾವತಿ ಜಲ ವಿದ್ಯುತ್ ಯೋಜನೆ ಸಂತಸ್ಥರ ಸಮಸ್ಯೆ ಇನ್ನೂ ಇದೆ.. ಈ ಸಮಸ್ಯೆ 75 ವರ್ಷಗಳಿಂದಲೂ ಇದೆ.. ಶರಾವತಿ ಜಲ ವಿದ್ಯುತ್ ಯೋಜನೆ 1958.64 ರ ನಡುವೆ ನಿರ್ಮಾಣವಾಗುತ್ತೆ.. ಸಾವಿರಾರು ಎಕರೆ.. ನಾಲ್ಕರಿಂದ ಐದು ಸಾವಿರ ಕುಟುಂಬಗಳು… ರೈತರ ಕೃಷಿ ಭೂಮಿ ಇದರಿಂದ ಮುಳುಗಡೆಯಾಗುತ್ತದೆ.. ಈ ವಿದ್ಯುತ್ ಯೋಜನೆಯಿಂದ ಇಡೀ ದೇಶಕ್ಕೆ ವಿದ್ಯುತ್ ಕೊಡುವಂತಹ ಕೆಲಸ.. ಸಂತಸ್ಥರಿಂದ ಆಗುತ್ತದೆ. ಆದರೆ ಈಗಲೂ ಕೂಡ ಆ ಸಂತಸ್ತರಿಗೆ.. ನ್ಯಾಯ ಸಿಕ್ಕಿಲ್ಲ. ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿ ಬರುವಂತಹ ಮುಂಚೆ ಅವರಿಗೆ ಭೂಮಿಯನ್ನು ಕೊಡುವಂತಹ ಪ್ರಯತ್ನ ಹಿಂದಿನ ರಾಜ್ಯ ಸರ್ಕಾರಗಳು ಮಾಡಿಲ್ಲ ಎಂದು ಇನ್ನಿತರ ವಿಷಯವನ್ನು ಪ್ರಸ್ತಾಪಿಸಿದರು..
