ಅರಸೀಕೆರೆ: ಉತ್ತರ ಪ್ರದೇಶದ ಸಂಭಲ್ ನಲ್ಲಿ ನಡೆದ ಗೋಲಿಬಾರ್ ನಿಂದಾಗಿ ಐದು ಅಮಾಯಕ ಜನರ ಹತ್ಯೆಯಾಗಿದೆ ಹಾಗೂ ಮಸೀದಿಯ ಸರ್ವೆ ನಡೆಸಲು ಅನುಮತಿ ನೀಡಿರುವುದು ಪ್ರಾರ್ಥನಾಸ್ಥಳ ಸಂರಕ್ಷಣಾ ಕಾಯ್ದೆ 1991 ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಈ ಘಟನೆಗಳನ್ನು ವಿರೋಧಿಸಿ ಅರಸೀಕೆರೆ ನಗರದಲ್ಲಿ ಎಸ್ಡಿಪಿಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಧರ್ಮಗುರುಗಳಾದ ಮೌಲಾನಾ ಯಾಸೀನ್ ಅಖ್ತರ್ ಮತ್ತು ಎಸ್ ಡಿ ಪಿ ಐ ತಾಲೂಕ್ ಅಧ್ಯಕ್ಷರಾದ ಸೈಯದ್ ಅಜ್ಗರ್ ರವರು ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಜಂಗಲ್ ರಾಜ್ಯವಾಗಿದೆ,ಹಾಗಾಗಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಹಾಗೂ ಗೋಲಿಬಾರ್ ನಲ್ಲಿ ಪ್ರಾಣ ತೆತ್ತವರ ಕುಟುಂಬಗಳಿಗೆ ಪರಿಹಾರವನ್ನು ಕೊಡಬೇಕು,ಮಸೀದಿ ಸರ್ವೆ ಕಾರ್ಯವನ್ನು ಕೂಡಲೇ ನಿಲ್ಲಿಸಲು ಆದೇಶ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ನ ನಾಯಕರುಗಳಾದ ಸೈಯದ್ ಸದ್ದಾಂ ,ಸಲ್ಮಾನ್ , ಇಸ್ಮೈಲ್ ,ವಸೀಮ್ ಸೈಯದ್ ಇಮ್ರಾನ್ ನಿಜಾಮ್ ಸಮಾಜ ಸೇವಕರಾದ ಸರ್ವರ್ ಹಾಗೂ
ಮುಂತಾದವರು ಪ್ರತಿಭಟನೆಯಲ್ಲಿ ಭಗವಹಿಸಿದ್ದರು ವರದಿ ಪರ್ವಿಜ್ ಅಹಮದ್ ಅರಸೀಕೆರೆ
