ಜೇವರ್ಗಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ಎಚ್ ಪೂಜಾರಿ ಹಾಲಗಡ್ಲಾ ಅವರಿಗೆ ಜಿಲ್ಲಾ ಮಟ್ಟದ ಕೃಷಿ ರತ್ನ ಪ್ರಶಸ್ತಿ ಮುಡಿಗೇರಿದ್ದು . ಶ್ರೀರಾಮ ಸೇನೆಯ ಜೇವರ್ಗಿ ತಾಲೂಕ ಅಧ್ಯಕ್ಷರಾದ ಮಲ್ಕಣ್ಣ ಹಿರೇ ಪೂಜಾರಿ ಚನ್ನುರ ಅವರು ಹರ್ಷ ವ್ಯಕ್ತಪಡಿಸಿದರು ಸಿದ್ದಲಿಂಗ ಪೂಜಾರಿ ಅವರು ಕಟ್ಟಾ ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಪಕ್ಕಾ ಅನುಯಾಯಿಯಾಗಿದ್ದು ಜೇವರ್ಗಿ ತಾಲೂಕಿನ ರೈತಪರ ಹೋರಾಟಗಾರರಾಗಿದ್ದು ಹಾಗೂ ತಾಲೂಕಿನ ರೈತರಿಗೆ ಅನ್ಯಾಯವಾದಾಗ ರೈತಪರ ಧ್ವನಿ ಎತ್ತಿ ಕಂಚಿನ ಕಂಠದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಸೆಡ್ಡು ಹೊಡೆದು ರೈತರಿಗೆ ನ್ಯಾಯ ಕೊಡಿಸುವಲ್ಲಿ ಸಿದ್ದಲಿಂಗ ಪೂಜಾರಿ ಅವರು ಮುಂಚೂಣಿಯ ಸ್ಥಾನದಲ್ಲಿದ್ದಾರೆ ಅದೇ ರೀತಿಯಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ಎಚ್ ಪೂಜಾರಿ ಅವರಿಗೆ ಯಡ್ರಾಮಿ ತಾಲೂಕಿನಲ್ಲಿ ಜೈ ಕನ್ನಡಿಗರ ಸೇನೆ ಯಡ್ರಾಮಿ ತಾಲೂಕ ವತಿಯಿಂದ ಹಮ್ಮಿಕೊಂಡ ಪದಾಧಿಕಾರಿಗಳ ಪದಾಗ್ರಹಣ ಕಾರ್ಯಕ್ರಮದಲ್ಲಿ ಸಿದ್ದಲಿಂಗ ಪೂಜಾರಿ ಅವರಿಗೆ ಕೃಷಿ ರತ್ನ ಪ್ರಶಸ್ತಿ ಬಂದಿರವದು ತುಂಬಾ ಹರ್ಷವಾಗಿದೆ ಎಂದು ಜೇವರ್ಗಿ ತಾಲೂಕ ಶ್ರೀರಾಮ ಸೇನೆಯ ತಾಲೂಕ ಅಧ್ಯಕ್ಷರಾದ ಮಲ್ಕಣ್ಣ ಹಿರೇ ಪೂಜಾರಿ ಚೆನ್ನುರ್ ಅವರು ಹರ್ಷ ವ್ಯಕ್ತಪಡಿಸಿದರು
