ಹುಣಸೂರು,ಆ25,Tv23 ಕನ್ನಡ
ಲೈಸೆನ್ಸ್ ನವೀಕರಿಸದಿದ್ದರೆ ದಿಢೀರ್ ನೋಟೀಸ್ ಜಾರಿ ಮಾಡಿ ಅಂಗಡಿ ಬಾಗಿಲು ಮುಚ್ಚಿಸುವುದಾಗಿ ಹಾಜರಾಗುವ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಈ ಪೆಟ್ರೋಲ್ ಬಂಕ್ ನಾಲ್ಕು ವರ್ಷಗಳಿಂದ ನವೀಕರಿಸದೆ ರಾಜಾರೋಷವಾಗಿ ವಹಿವಾಟು ನಡೆಸುತ್ತಿರುವುದು ಕಂಡು ಬಂದಿಲ್ಲವಂತೆ.ಈ ವಿಚಾರ ಅಧಿಕಾರಿಗಳ ಗಮನಕ್ಕೆ ಬಂದರೂ ಜಾಣಕುರುಡು ಪ್ರದರ್ಶನ ಮಾಡುತ್ತಿದ್ದಾರೆ.ನಮಗೂ ಇದಕ್ಕೂ ಸಂಭಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.ಗ್ರಾಮ ಪಂಚಾಯ್ತಿ ಕಾರ್ಯಾಲಯದ ಅಧಿಕಾರಿಗಳ ತಾರತಮ್ಯಕ್ಕೆ ಸಾರ್ವಜನಿಕರ ಆಕ್ರೋಷವೂ ವ್ಯಕ್ತವಾಗಿದೆ.
ಈ ಪಟ್ರೋಲ್ ಬಂಕ್ ಎಲ್ಲಿ ಅಂತೀರಾ ಹುಣಸೂರು ತಾಲೂಕು ಬನ್ನಿಕುಪ್ಪೆ ಗ್ರಾಮದಲ್ಲಿ.ಸುಮಾರು ವರ್ಷಗಳಿಂದ ಪೆಟ್ರೋಲ್ ಬಂಕ್ ವಹಿವಾಟು ನಡೆಸುತ್ತಿದೆ.ಹೆಚ್.ಪಿ.ಕಂಪನಿಯ ಹೆಸರಿನಲ್ಲಿ ವಹಿವಾಟು ನಡೆಯುತ್ತಿದೆ.ಕಳೆದ ನಾಲ್ಕು ವರ್ಷಗಳಿಂದ ಲೈಸೆನ್ಸ್ ನವೀಕರಣವಾಗಿಲ್ಲ.ಪ್ರತಿಷ್ಠಿತ ವ್ಯಕ್ತಿಯೊಬ್ಬರ ಒಡೆತನದಲ್ಲಿ ಈ ಪೆಟ್ರೋಲ್ ಬಂಕ್ ಇದೆ.ಗ್ರಾಮ ಪಂಚಾಯ್ತಿಯಲ್ಲಿ ಲೈಸೆನ್ಸ್ ನವೀಕರಿಸಬೇಕಿದೆ.ನಾಲ್ಕು ವರ್ಷಗಳಿಂದ ನವೀಕರಿಸದೆ ರಾಜಾರೋಷವಾಗಿ ವಹಿವಾಟು ನಡೆಯುತ್ತಿದೆ.ಗ್ರಾಮ ಪಂಚಾಯ್ತಿ ಮುಂಭಾಗವೇ ಪೆಟ್ರೋಲ್ ಬಂಕ್ ಕಾರ್ಯನಿರ್ವಹಿಸುತ್ತಿದ್ದರೂ ಅಧಿಕಾರಿಗಳ ಕಣ್ಣಿಗೆ ಬೀಳದಿರುವುದು ಪರಮಾಶ್ಚರ್ಯ.ಅಂಗಡಿ ಮುಂಗಟ್ಟುಗಳ ಮಾಲೀಕರು ಲೈಸೆನ್ಸ್ ನವೀಕರಿಸದಿದ್ದರೆ.ಬಾಗಿಲಿಗೆ ನೋಟೀಸ್ ಅಂಟಿಸಿ ತಮ್ಮದೇ ಶೈಲಿಯಲ್ಲಿ ಹಣ ವಸೂಲಿ ಮಾಡುವ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಈ ಪೆಟ್ರೋಲ್ ಬಂಕ್ ನ ಲೈಸೆನ್ಸ್ ಶುಲ್ಕದ ಹಣ ಬೇಕಿಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ.ಗ್ರಾಮ ಪಂಚಾಯ್ತಿ ಅಧಿಕಾರಿಗಳ ಈ ತಾರತಮ್ಯ ಅನೇಕ ಸಂದೇಹಗಳನ್ನ ಸೃಷ್ಟಿಸುತ್ತಿದೆ.ಜಾಣಕುರುಡರಂತೆ ವರ್ತಿಸದೆ ಲೈಸೆನ್ಸ್ ನವೀಕರಿಸುವ ವಿಚಾರದಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಿ.ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಲಿ…
