ಅರಸೀಕೆರೆ ತಾಲ್ಲೋಕ್, ಕಣಕಟ್ಟೆ ಹೋಬಳಿ, ಮಾಡಾಳು ಗ್ರಾಮದಲ್ಲಿ ಮೈಸೂರು ರಾಜ ಪ್ರಮುಖರ ಹೆಸರಿನಲ್ಲಿ ಜಮೀನು ಇದ್ದು, ಇದನ್ನು ಮಾಡಾಳು ಗ್ರಾಮದ ಕೆಲ ಪ್ರಭಾವಿಗಳು ಅಕ್ರಮವಾಗಿ ಬಳಸುತ್ತಿರುವುದು ವಿಪರ್ಯಾಸ ಸಂಗತಿ.
ಮಾಡಾಳು ಗ್ರಾಮದಲ್ಲಿ ಸರ್ವೇ ನಂಬರ್ 48/6 ರರಲ್ಲಿ 1 ಎಕರೆ ಜಮೀನಿದ್ದು, ಇದನ್ನು ಕಾಂಗ್ರೆಸ್ ಪಕ್ಷದ ಕಣಕಟ್ಟೆ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಶ್ರೀ MSV ಸ್ವಾಮಿ ರವರು ಅಕ್ರಮವಾಗಿ ಉಳುಮೆ ಮಾಡುತ್ತಿರುವುದು ಕಾನೂನು ಬಾಹೀರವಾಗಿದ್ದು ಹಾಗೂ ಮಾಡಾಳು
ಗ್ರಾಮದಲ್ಲಿರುವ ಇನ್ನೇರೆಡು ಜಮೀನುಗಳಾದ ಸರ್ವೇ ನಂಬರ್ 88/2 b ನ 0.20 ಗುಂಟೆ ಹಾಗೂ ಸರ್ವೇ ನಂಬರ್ 88/2 A1 ರ 0.18 ಗುಂಟೆ ಜಮೀನುಗಳನ್ನು ಮಾಡಾಳು ಗ್ರಾಮದ ಇಬ್ಬರು ಅಕ್ರಮವಾಗಿ ಉಳುಮೆ ಮಾಡುತ್ತಿರುವುದು ಪ್ರಸ್ತುತವಾಗಿ ತಾಲ್ಲೋಕ್ ಸರ್ವೇಯರ್ ರಮೇಶ್ ರವರು ಬುಧವಾರ ದಿನಾಂಕ 23-07-2025 ರ ಮದ್ಯಾಹ್ನ 1 ಗಂಟೆಗೆ ಸ್ಥಳಕ್ಕಾಗಮಿಸಿ ಅಳತೆಗೆ ಒಳಪಡಿಸಿದಾಗಲೇ ಸಾರ್ವಜನಿಕರಿಗೆ ಇವರುಗಳು ಅಕ್ರಮವಾಗಿ ಉಳುಮೆ ಮಾಡುತ್ತಿರುವ ವಿಷಯ ಬಟಾ ಬಯಲಾಗಿದೆ.ಈ ರೀತಿ ಅಕ್ರಮವಾಗಿ ಉಳುಮೆ ಮಾಡುತ್ತಿರುವವರ ಮೇಲೆ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಿ ಈ 3 ಮೈಸೂರು ರಾಜ ಪ್ರಮುಖರ ಹೆಸರಿನಲ್ಲಿರುವ ಸರ್ಕಾರದ ಆಸ್ತಿಯನ್ನು ಸರ್ಕಾರವು ತಕ್ಷಣ ಮುಟ್ಟುಗೊಲು ಹಾಕಿಕೊಂಡು, ಸಂರಕ್ಷಣೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದರು ಹಾಗೂ ಅರಸೀಕೆರೆ
ತಾಲ್ಲೋಕ್ ನಾದ್ಯಂತ ಇನ್ನೆಷ್ಟು ರಾಜ ಪ್ರಮುಖರ ಹೆಸರಲ್ಲಿ ಜಮೀನುಗಳು ಇರಬಹುದು, ಇದನ್ನು ತಾಲ್ಲೋಕ್ ನಾದ್ಯ0ತ ಇರುವ ಎಲ್ಲಾ ವೃತ್ತದ VA ರವರಲ್ಲಿ ಮಾಹಿತಿಯಿದ್ದು ಸಾರ್ವಜನಿಕರು ಇದನ್ನು ತಿಳಿದುಕೊಂಡು ಉಳ್ಳವರ ಪಾಲಾಗದಂತೆ ಇಂತಹ ಜಮೀನುಗಳನ್ನು ಸಂರಕ್ಷಣೆ ಮಾಡಬೇಕೆಂದು ಈ ಮೂಲಕ ಸಾರ್ವಜನಿಕರಲ್ಲಿ ಹಾಗೂ ಸಂಬಂಧಪಟ್ಟ VA, RI, DT, ತಹಶೀಲ್ದಾರ್ ರವರುಗಳು ಇಂತಹ ವಿಚಾರಗಳಲ್ಲಿ ಮುತುವರ್ಜಿ ವಹಿಸಿ, ಗಂಭೀರವಾಗಿ ಪರಿಗಣಿಸಿ, ಸರ್ಕಾರಕ್ಕೆ ವಂಚಿಸಿರುವವರ ವಿರುದ್ಧ ಕ್ರಮ & ಸರ್ಕಾರದ ಆಸ್ತಿಯನ್ನು ಸಂರಕ್ಷಣೆ ಮಾಡಬೇಕೆಂದು ಕನಸಿನ ಭಾರತ ಪತ್ರಿಕೆಯ ಮುಖಾಂತರ ವರದಿಗಾರರಾದ ಮಾಡಾಳ್ ರವಿ ಮನವಿಯನ್ನು ಮಾಡಿದರು.ಈ ಸಂದರ್ಭದಲ್ಲಿ ಮಾಡಾಳು ಗ್ರಾಮದ VA ಆಗಿರುವ ರಾಜು ಸಾಬ್ ರವರು, ಗ್ರಾಮ ಸೇವಕರಾದ MM ಗಂಗಾಧರಪ್ಪ, p ಹೊಸಳ್ಳಿ ಶಿವಕುಮಾರ್ ರವರುಗಳು ಸ್ಥಳದಲ್ಲಿ ಹಾಜರಿದ್ದರು.
ವರದಿ: ಮಾಡಾಳ್ ರವಿ.
