ಮಡಿಕೇರಿ ಜಿಲ್ಲೆ ಪಾಲಿಬೆಟ್ಟ ಆರೋಗ್ಯ ಕೇಂದ್ರ ತಜ್ಞ ವೈದ್ಯ ಡಾ.ಲೋಹಿತ್ ರವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ.ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಖಾಸಗಿ ಜಾಲತಾಣ,ಟಿವಿ ಮಾಧ್ಯಮ,ರಾಜಕೀಯ ಪ್ರೇರಿತ ಪೋಸ್ಟರ್ ಗಳಲ್ಲಿ ನಿಮ್ಮ ಛಾಯಾಚಿತ್ರಗಳು ಕಂಡು ಬರುತ್ತಿದೆ.ಸರ್ಕಾರಿ ನೌಕರರಾದ ನೀವು ಮೇಲಧಿಕಾರಿಗಳಿಂದ ಅನುಮತಿ ಪಡೆಯದೆ ಪತ್ರಿಕಾ ಪ್ರಕಟಣೆ ಹೊರಡಿಸುತ್ತಿರುವುದಾಗಿ ಉಲ್ಲೇಖಿಸಿದ್ದು ಮೂರು ದಿನಗಳ ಒಳಗೆ ಈ ಆರೋಪಕ್ಕೆ ಸಮಜಾಯಿಷಿ ನೀಡುವಂತೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ.

ಸದರಿ ವೈದ್ಯರು ತಮ್ಮ ಹುದ್ದೆಗೆ ಸ್ವ ಇಚ್ಛೆ ನಿವೃತ್ತಿ ಪತ್ರ ಸಲ್ಲಿಸಿರುವ ಮಾಹಿತಿಯೂ ಇದೆ.ಆದ್ರೆ ಇದುವರೆಗೆ ಈ ಪತ್ರ ಮಡಿಕೇರಿ ಜಿಲ್ಲಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಲುಪಿಲ್ಲವೆಂಬ ಮಾಹಿತಿ ಇದೆ.ಈ ಹಿನ್ನಲೆ ಡಾ.ಲೋಹಿತ್ ಇನ್ನೂ ಸರ್ಕಾರಿ ನೌಕರರಾಗೇ ಇರುವುದರಿಂದ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ…
