ಅರಸೀಕೆರೆ: ನಗರ ಸಭೆ ಸದಸ್ಯರಾದಂತಹ ಸುಜಾತ ರಮೇಶ್ ಮತ್ತು ಸ್ನೇಹಿತರ ಬಳಗದ ವತಿಯಿಂದ 2021 ರಿಂದ ಮಾರುತಿ ನಗರದ ವಾರ್ಡ್ ನಂಬರ್ 30,31 ಬಡ ಕುಟುಂಬಗಳಿಗೆ ಉಚಿತವಾಗಿ ಔಷಧಿಗಳನ್ನು ಕೊಡುತ್ತಾ ಬಂದಿದ್ದು. ನಮ್ಮ ಬಳಗದ ಎಲ್ಲಾ ಸ್ನೇಹಿತರು ಚರ್ಚಿಸಿ ಮಾರ್ಚ್ 2025 ರಿಂದ ವಾರ್ಡ್ ನಂಬರ್ 01 ಕಂತೇನಹಳ್ಳಿ ಮತ್ತು ಸರಸ್ವತಿಪುರಂ ಹಾಗೂ ವಕೀಲರಾದಂತಹ ವಿವೇಕ್ ಸರ್ ರವರ ನೇತೃತ್ವದಲ್ಲಿ ವಾರ್ಡ್ ನಂಬರ್ 17 ಹೆಂಜಗೊಂಡನಹಳ್ಳಿಯ ಬಡ ಕುಟುಂಬಗಳಿಗೆ ಔಷಧಿಗಳನ್ನು ವಿತರಿಸುವ ಹಾಗೂ ಬಡ ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದರೆ ಅವರಿಗೆ ಅಂತ್ಯ ಸಂಸ್ಕಾರಕ್ಕಾಗಿ 5000 ರೂಗಳ ಸಹಾಯಧನವನ್ನು ಕೊಡುವಂತಹ ಯೋಜನೆಯನ್ನು ಜಾರಿಗೆ ತರಲಾಯಿತು. ನಮ್ಮ ಬಳಗದ ಪ್ರಮುಖರಾದಂತಹ ವೈದ್ಯರಾದ ರಜತ್ ರವರು ಈ ಯೋಜನೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಬಳಗದ ರಮೇಶ್, ಅರಸೀಕೆರೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಕಿರಣ್ ಕುಮಾರ್ , ಬಳಗದ ಉಮೇಶ್ ನಾಯಕ್ , ಸರಸ್ವತಿಪುರಂ ಮಂಜು ಉಪಸ್ಥಿತರಿದ್ದರು.
ವರದಿ ಪರ್ವಿಜ್ ಅಹಮದ್ ಅರಸೀಕೆರೆ