ಅರಸೀಕೆರೆ ತಾಲ್ಲೋಕ್, ಕಣಕಟ್ಟೆ ಹೋಬಳಿ ಚಿಕ್ಕಲ್ಕೂರ್ ಗ್ರಾಮದಲ್ಲಿ ನೆಲೆಸಿರುವ ಶ್ರೀ ಗುರು ಬೆಟ್ಟದ ಸಿದ್ದೇಶ್ವರ ಸ್ವಾಮಿಯ ಪೂಜೆಯು ಹುಣ್ಣಿಮೆಯ ಪ್ರಯುಕ್ತ ಇಂದು ಅದ್ದೂರಿಯಾಗಿ ನಡೆಯಿತು. ಶ್ರೀ ಗುರು ಬೆಟ್ಟದ ಸಿದ್ದೇಶ್ವರ ಸ್ವಾಮಿಯ ಅಭಿಷೇಕ, ಪೂಜೆ, ದೂಪದಾರತಿ, ದೀಪದಾರತಿ, ಮಹಾ ಮಂಗಳಾರತಿ ಹಾಗೂ ನೈವೇದ್ಯ,ನಂತರ ಬಂದಂಥಹ ಸದ್ಭಕ್ತರು ದರ್ಶನವನ್ನು ಪಡೆದು, ನಂತರ ಪ್ರಸಾದವನ್ನು ಸವಿದು ಈ ಧಾರ್ಮಿಕ ಕಾರ್ಯಕ್ರಮವನ್ನು ಅತ್ಯoತ ಯಶಸ್ವಿಯಾಗಿ ನಡೆಸಿಕೊಟ್ಟರು.
