ಸುರಪುರ : ನಗರದ ಶ್ರೀಮತಿ ಎನ್ ಎನ್ ಶೆಟ್ಟಿ ಪದವಿಪೂರ್ವ ವಿಜ್ಞಾನ ಕಾಲೇಜಿನ ಪಿಯು ವಿದ್ಯಾರ್ಥಿಗಳು 2024-25 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದ್ದು ಆ ವಿದ್ಯಾರ್ಥಿಗಳ ಪೈಕಿ ಅತ್ಯುನ್ನತ ಶ್ರೇಣಿಯಲ್ಲಿ 07ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್ )15, ಪ್ರಥಮ ದರ್ಜೆಯಲ್ಲಿ 152, ದ್ವಿತೀಯ ದರ್ಜೆಯಲ್ಲಿ 35 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇವರಲ್ಲಿ ಎಮ್ ಡಿ ಫೌಜನ್ ತಂದೆ ಖಲಿಲ ಉಜಮಾ (95.66 %), ಶೃತಿ ತಂದೆ ಭೀಮಣ್ಣ (95.5%), ಹರ್ಷ ತಂದೆ ಉಮೇಶ (94.5%) ,

ಸಂಗೀತಾ ತಂದೆ ಭೀಮರಾಯ (92.16% ), ಶರಣ್ಯ ತಂದೆ ಶರಣಪ್ಪ (91.66%), ಎಮ್ ಡಿ ಉಸ್ಮಾನ್ ತಂದೆ ಮಕ್ತುಮ್ ಸಾಬ ( 90.66%), ತಿಮ್ಮಯ್ಯ ತಂದೆ ಕೃಷ್ಣ (90.16%), ಪ್ರತಿಶತದೊಂದಿಗೆ ಅಂಕ ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಒಬ್ಬ ವಿದ್ಯಾರ್ಥಿ ಪಡೆದಿದ್ದಾನೆ . ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಒಬ್ಬ ವಿದ್ಯಾರ್ಥಿ ಪಡೆದಿದ್ದಾನೆ. ಎಮ್ ಡಿ ಫೌಜನ್ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ .
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಬೂದೆಪ್ಪ ಎನ್ ಶೆಟ್ಟಿ ಕಾರ್ಯದರ್ಶಿಗಳಾದ ತಿರುಪತಿ ಎನ್ ಶೆಟ್ಟಿ ಪ್ರಾಚಾರ್ಯರಾದ ಲಕ್ಷ್ಮೀ.ಬಿ ಶೆಟ್ಟಿ ಹಾಗೂ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.