ಕುಮಟಾ :-ಹುಬ್ಬಳ್ಳಿಯ ಪ್ರೇರಣಾ ವಸತಿ ಸಹಿತ ಪ ಪೂ ಕಾಲೇಜಿನಲ್ಲಿ ನಡೆದ ಬೆಳಗಾವಿ ವಿಭಾಗದ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ವರ್ಧೆಗಳಲ್ಲಿ ಕುಮಟಾದ ಬಾಡದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸೃಷ್ಟಿ ಆರ್ ಪಟಗಾರ ಕನ್ನಡ ಪ್ರಬಂಧ ಸ್ವರ್ಧೆಗಳಲ್ಲಿ ಶೈಕ್ಷಣಿಕ ಪಲಿತಾಂಶ ಹೆಚ್ಚಿಸುವಲ್ಲಿ ತಂತ್ರಜ್ಞಾನದ ಪ್ರಭಾವ” ವಿಷಯವನ್ನು ಪ್ರಸ್ತುತ ಪಡಿಸಿ ಪ್ರಥಮ ಸ್ಥಾನ ಪಡೆದು ತುಮಕೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪದೆ೯ಗೆ ಆಯ್ಕೆಯಾಗಿದ್ದಾಳೆ. ದ್ವಿತೀಯ ಪಿಯುಸಿ ವಿಭಾಗದಲ್ಲಿ ಸ್ಪದೆ೯ಗೆ ಆಯ್ಕೆಯಾಗಿದ್ದ ರಕ್ಷಿತಾ ಎಂ ಮಡಿವಾಳ ಕೂಡ ಗಮನಾರ್ಹ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಬಾಡ ಪದವಿ ಪೂವ೯ ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.