ಕರ್ನಾಟಕ ಸ್ವಯಂಸೇವಕರ ವೇದಿಕೆಯ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮ 18 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಹಾಗೂ ರಾಷ್ಟ್ರಕವಿ ಜಗದ ಕವಿ ರಸ ಋಷಿ ಕುವೆಂಪುರವರ ಶತಮಾನೋತ್ಸವ ಕಾರ್ಯಕ್ರಮವನ್ನುಹಮ್ಮಿಕೊಂಡಿರುತ್ತೇವೆ ಈ ಕಾರ್ಯಕ್ರಮವನ್ನು ಸ್ಥಳ ಡಿಕ್ಕನ್ ಸನ್ ರಸ್ತೆ ಕಮರ್ಷಿಯಲ್ ಸ್ಟ್ರೀಟ್ ಶಿವಾಜಿನಗರ ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿಶ್ಚಲಾನಂದ ಮಹಾಸ್ವಾಮಿಜಿಗಳು ಪೀಠ್ಯಾಧ್ಯಕ್ಷರು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಹಾಗೂ ಕರುಣಾಮಯಿ ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ರವರು ಹಾಗೂ ಪರಮಪೂಜ್ಯ ಶ್ರೀ ಗುರುಮೂರ್ತಿ ಗುರೂಜಿ ರವರು ಆಧ್ಯಾತ್ಮಕರು ಚಿಂತಕರು ಮತ್ತು ಪೀಠಾಧ್ಯಕ್ಷರು ಶ್ರೀ ಸಾಯಿ ಸಂಸ್ಥಾನ ಇವರ ಉಪಸ್ಥಿತಿಯಲ್ಲಿ ವಿಶ್ವಮಾನವ ರಾಷ್ಟ್ರಕವಿ ಕುವೆಂಪುರವರ ಸ್ಮರಣೆಯಲ್ಲಿ ಜಗ ಹೃದಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರವನ್ನು ಹೆಸರಂತ ಕವಿಗಳು ಬಹುಮುಖಿ ಚಿಂತಕರು ಸಂಘಟಕರು ಚಿತ್ರ ನಿರ್ದೇಶಕರು ರಾಜಕೀಯ ಸಾಮಾಜಿಕ ಕೃಷಿಕರು ಶ್ರೀ ನಾಗತಿಹಳ್ಳಿ ರಮೇಶ್ ರವರಿಗೆ ನೀಡಿ ಸನ್ಮಾನಿಸಲಾಯಿತು. ಇದರ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಂ ಸಿ ಧನಂಜಯ ಗೌಡರವರು ಉಪಸ್ಥಿತರಿದ್ದರು ಹಾಗೂ ರಾಜಕಾರಣಿಗಳು ಹೋರಾಟಗಾರರು ಕ್ರೀಡಾಪಟುಗಳು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು
