ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಚುನಾವಣೆ ದಿನಾಂಕ 19/11/2024 ಮಂಗಳವಾರ ಕರ್ನಾಟಕ ರಾಜ್ಯದ 4 ವಲಯಗಳಲ್ಲಿ ನಡೆಯಿತು ಮೈಸೂರು ವಲಯ ಬೆಂಗಳೂರು ವಲಯ ಗುಲ್ಬರ್ಗ ವಲಯ ಹಾಗೂ ಬೆಳಗಾವಿ ವಲಯ ದಲ್ಲಿ ನಡೆಯಿತು ಚುನವಣೆಯಲ್ಲಿ 6 ಜನರು ಸ್ಪರ್ಧಿಸಿದರು ಇಂದು ದಿನಾಂಕ 21/11/2024 ಗುರುವಾರ ಬೆಂಗಳೂರಿನ ಶಾಂತಿ ನಗರದಲ್ಲಿರುವ R O ಕಛೇರಿಯಿಂದ ಫಲಿತಾಂಶ ಪ್ರಕಟವಾಗಿದ್ದು ಗುಲ್ಬರ್ಗದ ಖಾಜ ಬಂದ್ದ ನವಾಜ್ ದರ್ಗಾದ ಅಧ್ಯಕ್ಷರು ಹಾಗೂ ಸಜ್ಜದೆ ನಶೀ ಗಳಾದ ಹಾಫಿಜ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ರವರು 412 ಮತಗಳು ಹಾಗೂ ವಕ್ಫ್ ನ ಮಾಜಿ ಅಧ್ಯಕ್ಷರಾದ ಅನ್ವರ್ ಬಾಷ ರವರು 421 ಮತಗಳು ಪಡೆದು ವಕ್ಫ್ ನ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ ಮಾಧ್ಯಮದ ಮುಖಾಂತರವಾಗಿ ಪ್ರತಿಕ್ರಿಯಿಸಿದ ಅಭ್ಯರ್ಥಿಗಳು ಸರ್ಕಾರದಿಂದ ಬರುವ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಇನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತರಲಾಗೂವುದು ಎಂದು ತಿಳಿಸಿದರು. ಕರ್ನಾಟಕದ ಮೂಲೆ ಮೂಲೆಗಳಿಂದ ಶುಭಾಶಯ ಕೋರಲು ಬೆಂಗಳೂರಿಗೆ ಆಗಮಿಸಿದ
ಗುಲ್ಬರ್ಗದ ಸೈಯದ್ ಅಲಿ ಹುಸೈನಿರವರ ಅಭಿಮಾನಿಗಳು ಸೈಯದ್ ಅಲಿ ಹುಸೇನಿ ರವರು ವಕ್ಫ್ ನ ಅಧ್ಯಕ್ಷರಾಗಬೇಕೆಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು
ವರದಿ: ಪರ್ವಿಜ್ ಅಹಮದ್