ಕೆ.ಆರ್.ನಗರ:ಯಾವುದೇ ದೇಶ ಅಭಿವೃದ್ಧಿಗೆ ರೈತಾಪಿ ವರ್ಗ ಬಹಳ ಮುಖ್ಯ. ಪಿಕಾರ್ಡ್ ಬ್ಯಾಂಕು ರೈತರ ಜೀವನಾಡಿಯಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು ಬ್ಯಾಂಕಿನ ವತಿಯಿಂದ ಷೇರುದಾರ ಸದಸ್ಯರಿಗೆ ಸಕಾಲದಲ್ಲಿ ಸಮರ್ಪಕವಾಗಿ ಸಾಲ ಸೌಲಭ್ಯಗಳನ್ನು ಒದಗಿಸಿಕೊಡುವುದು ಆಡಳಿತ ಮಂಡಳಿಯ ಜವಾಬ್ದಾರಿ ಎಂದರು.
ರೈತರು ಬ್ಯಾಂಕಿನಿoದ ದೊರೆಯುವ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರ ಜತೆಗೆ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಅನಗತ್ಯ ಬಡ್ಡಿ ಕಟ್ಟುವುದರಿಂದ ಮುಕ್ತರಾಗಬೇಕು. ಇದರಿಂದ ಆಡಳಿತ ಮಂಡಳಿ ಇತರ ಸದಸ್ಯರಿಗೆ ಸಾಲ ವಿತರಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಬ್ಯಾಂಕಿಗೆ ಸರ್ಕಾರದ ವತಿಯಿಂದ ರೈತರ ಅನುಕೂಲಕ್ಕಾಗಿ ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ಮತ್ತು ಸಹಕಾರ ಸಚಿವರಿಂದ ಹೆಚ್ಚಿನ ಹಣಕಾಸಿನ ಸೌಲಭ್ಯವನ್ನು ಒದಗಿಸಿಕೊಡುವಂತೆ ಈಗಾಗಲೇ ಮನವಿ ಸಲ್ಲಿಸಿದ್ದೇನೆ. ಆ ಹಣ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನೂತನ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ರಾಜ್ಯ ಸರ್ಕಾರ ಮತ್ತು ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇನೆಂದರು.
ಇದೇ ಸಂದರ್ಭದಲ್ಲಿ ಶಾಸಕರಾದ ಡಿ.ರವಿಶಂಕರ್, ಮತ್ತು ಕೆ.ಎನ್.ಷಡಕ್ಷರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಸ್ಕಾರ್ಡ್ ಬ್ಯಾಂಕಿನ ಮಂಡ್ಯ ಜಿಲ್ಲಾ ನಿರ್ದೇಶಕ ತಿಮ್ಮರಾಯಿಗೌಡ, ಮೈಸೂರು ಜಿಲ್ಲಾ ನಿರ್ದೇಶಕ ಎಂ.ಮಹದೇವಣ್ಣ, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಬಿ.ಎಂ.ಮಲ್ಲಿಕಾರ್ಜುನ್, ಉಪಾಧ್ಯಕ್ಷೆ ಪುಷ್ಪರೇವಣ್ಣ, ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಮೈಸೂರು ಸಹಕಾರ ಸಂಘಗಳ ಉಪನಿಬಂಧಕ ಆರ್.ಮಂಜುನಾಥ್, ಮೈಸೂರು ಕಾಸ್ಕಾರ್ಡ್ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಎಸ್.ಎಂ.ಮುತ್ತುರಾಜು, ಬ್ಯಾಂಕಿನ ನಿರ್ದೇಶಕರಾದ ಎಂ.ಎಸ್.ಹರಿಚಿದoಬರ, ಎನ್.ಸಿ.ಪ್ರಸಾದ್, ಬಿ.ಎಸ್.ಚಂದ್ರಹಾಸ, ಕಲಾವತಿ, ಆರ್.ಸಿ.ರಮೇಶ್, ಪ್ರೇಮಕುಳ್ಳಬೋರೇಗೌಡ, ಸಿದ್ದೇಗೌಡ, ಕೆ.ಟಿ.ಚಂದ್ರೇಗೌಡ, ಸಿ.ಎಸ್.ಚಂದ್ರಶೇಖರ್, ಪರಶುರಾಮಯ್ಯ, ರಾಮೇಗೌಡ, ಸಿದ್ದನಾಯಕ, ಪ್ರದೀಪ್ಕುಮಾರ್, ವ್ಯವಸ್ಥಾಪಕ ಎನ್.ಆರ್.ನವೀನ್ಕುಮಾರ್, ಸಿಬ್ಬಂದಿಗಳಾದ ಕುಮಾರ್ಮುಟಗಾರ್, ಡಿ.ಎನ್.ಹಾಲಪ್ಪ, ಬಿ.ಆರ್.ಉಷಾ, ಹೆಚ್.ಡಿ.ಶ್ರುತಿ, ಪಿಗ್ಮಿ ಸಂಗ್ರಹಾಕ ಹೆಚ್.ಎಸ್.ಮಂಜುನಾಥ್ ಹಾಜರಿದ್ದರು.
ಪೋಟೊ ೩-ಕೆ.ಆರ್.ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಪಿಕಾರ್ಡ್ ಬ್ಯಾಂಕಿನ ಕಟ್ಟ ಡವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು.
