ಟಿ20 ವಿಶ್ವಕಪ್ ಗೆಲುವಿನ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಕನ್ನಡಿಗನ ಪರಿಶ್ರಮ

Share

ಕುಮಟಾ :- ಟೀಮ್ ಇಂಡಿಯಾ ವಿಶ್ವಕಪ್ ತಂಡದಲ್ಲಿ ಈ ಬಾರಿ ಇರಲಿಲ್ಲ ಅನ್ನೋದು ಬೇಸರ ಸಂಗತಿ ಆದರೆ ಭಾರತ ತಂಡದ ಗೆಲುವಿಗೆ ಹಾಗೂ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳ ಸಕ್ಸಸ್ ಹಿಂದೆ ಕನ್ನಡಿಗರಿದ್ದ ಖುಷಿಯ ಸಂಗತಿ ಮರೆಯುವಂತಿಲ್ಲ. ಅವರೇ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೀವಗಿ ರಾಘವೇಂದ್ರ ಸುಮಾರು 13 ವರ್ಷದಿಂದ ಭಾರತ ತಂಡ ಜೊತೆ ಇದ್ದು ತಂಡದ ಯಶಸ್ವಿಗೆ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ.ಈ ಒಂದು ಪರಿಶ್ರಮಕ್ಕೆ ಟೀ ಟ್ವೆಂಟಿ ವಿಶ್ವಕಪ್ನಲ್ಲಿ ದೊಡ್ಡ ಪ್ರತಿಫಲ ಸಿಕ್ಕಿದೆ. ಓರ್ವ ಶಿಕ್ಷಕರ ಮಗನಾದ ರಾಘವೇಂದ್ರ ಮೋಹನ್ ದೀವಗಿ 24 ವರ್ಷಗಳ ಹಿಂದೆ ನಾನು ಕ್ರಿಕೆಟ್ ಆಟಗಾರನಾಗಬೇಕೆಂದು ಕನಸು ಕಂಡು ಕೇವಲ 21 ರೂಪಾಯಿನೊಂದಿಗೆ ಮನೆಬಿಟ್ಟರು. ಬಳಿಕ ಇವರ ಆಸೆ ಕಮರಿತು.ಕಳೆದುಕೊಂಡದ್ದನ್ನು ಹುಡುಕಲು ಹೊರಟಿ ಇಂದು ಭಾರತದ ಟಿ20 ವಿಶ್ವಕಪ್ ರೂವಾರಿಗಳಲ್ಲಿ ಒಬ್ಬರಾಗಿ ನಿಂತಿದ್ದಾರೆ. ರಾಘವೇಂದ್ರ ಅವರ ಪ್ರಯಾಣ ಭಾರತ ವಿಶ್ವ ಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವಲ್ಲಿ ಬಂದು ತಲುಪಿದೆ. ಈ ಗೆಲುವಿನ ಹಿಂದೆ ಕನ್ನಡಿಗನ ಪಾತ್ರ ಇದೆ ಅನ್ನೋದು ಮರೆಯುವಂತಿಲ್ಲ. ಟೀಮ್ ಇಂಡಿಯಾ ಬಳಗದಲ್ಲಿ ಗುರುತಿಸಿಕೊಂಡಿರುವ ರಾಘವೇಂದ್ರ ದೀವಗಿ ಥ್ರೋಡೌನ ಎಕ್ಸ್ಪರ್ಟ್ ಅಭ್ಯಾಸದ ಸಮಯದಲ್ಲಿ ಎಲ್ಲಾ ಆಟಗಾರರಿಗೂ ಬೌನ್ಸ ರ ಶಾರ್ಟ್ ಬಾಲ್ ಎಸೆದು ಅವರ ಯಶಸ್ವಿಗೆ ಕಾರಣರಾಗಿದ್ದಾರೆ.ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಪ್ರತಿಯೊಬ್ಬ ಬ್ಯಾಟ್ಸ್ಮನ್ ಗಳಿಗೆ ರಾಘವೇಂದ್ರ ತಲಾ 3೦೦ಎಸೆತಗಳನ್ನು ಒಬ್ಬರಿಗೆ ಎಸೆದು ಸರಿಸುಮಾರು 3000 ಎಸತೆಗಳನ್ನು ಬ್ಯಾಟ್ಸ್ಮನ್ ಗಳಿಗೆ ಎಸೆಯುತ್ತಾರೆ. ರಾಘವೇಂದ್ರ ಪ್ರತಿಭೆಯನ್ನು ಸಚಿನ್ ತೆಂಡೂಲ್ಕರ್ ಬೇಗನೆ ಗುರುತಿಸಿ 2011ರಲ್ಲಿ ಭಾರತ ತಂಡಕ್ಕೆ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ಸೇರಿಕೊಂಡರು. ಕಳೆದ 13 ವರ್ಷಗಳಿಂದ ಭಾರತ ತಂಡದ ಯಶಸ್ಸಿಗೆ ಪಾತ್ರ ವಹಿಸುತ್ತಾ ಬಂದಿದ್ದಾರೆ ಈ ಕನ್ನಡಿಗನ ಸಾಧನೆಗೆ ಇಡೀ ಕರ್ನಾಟಕವೇ ಹೆಮ್ಮೆಪಡುವ ವಿಚಾರವಾಗಿದೆ


Share

ICC T20 World Cup 2024: ನ್ಯೂಯಾರ್ಕ್ ನಲ್ಲಿ ಕಳಪೆ ಆಹಾರ, ಮೂಲಭೂತ ಸೌಕರ್ಯ ಕೊರತೆ: ಭಾರತ ತಂಡ ಅಸಮಾಧಾನ

Share

ನ್ಯೂಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತ ತಂಡ ಅಲ್ಲಿನ ಆಹಾರ ಮತ್ತು ಮೂಲಭೂತ ಸೌಕರ್ಯಗಳ ಕುರಿತು ಚಕಾರವೆತ್ತಿದೆ.

ಹೌದು.. ಕಳೆದ ಮೂರು ದಿನಗಳಿಂದ ಟೀಮ್​ ಇಂಡಿಯಾದ ಆಟಗಾರರು ನ್ಯೂಯಾರ್ಕ್​ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಆಟಗಾರರು ಇಂದು ಬ್ಯಾಟಿಂಗ್​ ಮತ್ತು ಬೌಲಿಂಗ್​ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಆದರೆ ಇಲ್ಲಿ ಅಭ್ಯಾಸ ನಡೆಸಲು ಉನ್ನತ ಸೌಲಭ್ಯಗಳಿಲ್ಲ ಎಂದು ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಅಲ್ಲದೆ ಈ ಸಂಬಂಧ ತಂಡದ ನಾಯಕ ರೋಹಿತ್​ ಶರ್ಮ ಮತ್ತು ಕೋಚ್​ ರಾಹುಲ್​ ದ್ರಾವಿಡ್​ ಬಿಸಿಸಿಐಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.

ಟೀಂ ಇಂಡಿಯಾ ಸತತ ಅಭ್ಯಾಸ

ಕಳೆದ ಮೂರು ದಿನಗಳಿಂದ ಟೀಮ್​ ಇಂಡಿಯಾದ ಆಟಗಾರರು ನ್ಯೂಯಾರ್ಕ್​ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಆಟಗಾರರು ಇಂದು ಬ್ಯಾಟಿಂಗ್​ ಮತ್ತು ಬೌಲಿಂಗ್​ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಅಮೆರಿಕದ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಬುಧವಾರ ಮತ್ತು ಗುರುವಾರ ಆಟಗಾರರು ಕೇವಲ ಜಾಗಿಂಗ್‌ ನಡೆಸಿ, ಫುಟ್ಬಾಲ್‌ ಆಡಿದ್ದರು. ಆದರೆ ಇಲ್ಲಿ ಅಭ್ಯಾಸ ನಡೆಸಲು ಉನ್ನತ ಸೌಲಭ್ಯಗಳಿಲ್ಲ ಎಂದು ನಾಯಕ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ ಭಾರತ ತಂಡದ ಆಟಗಾರಿಗೆ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಈ ವಿಚಾರಗಳನ್ನು ಬಿಸಿಸಿಐ ಆಯೋಜಕ ಐಸಿಸಿ ಗಮನಕ್ಕೆ ತಂದಿದೆ ಎಂದು ವರದಿಯಾಗಿದೆ.
ಭಾರತ ನಾಳೆ(ಶನಿವಾರ) ಬಾಂಗ್ಲಾದೇಶ ವಿರುದ್ಧ ಏಕೈಕ ಅಭ್ಯಾಸ ಪಂದ್ಯವನ್ನಾಡಲಿದೆ. ವ್ಯಾಪಕ ಪ್ರಯಾಣ ಮತ್ತು ಐಪಿಎಲ್​ನಿಂದ ದಣಿದಿರುವ ಕಾರಣ ಕೇವಲ ಒಂದು ಅಭ್ಯಾಸ ಪಂದ್ಯಕ್ಕೆ ಮೊರೆ ಹೋಗಿದೆ.

ಅಂದಹಾಗೆ ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ.


Share

ಮಕ್ಕಳ ಗೌಪ್ಯತೆ ಗೌರವಿಸಿದ್ದಕ್ಕಾಗಿ ಪಾಪರಾಜಿಗಳಿಗೆ ಉಡುಗೊರೆ: ಗಿಫ್ಟ್ ನೀಡಿದ್ದು ನಾನಲ್ಲ ಅನುಷ್ಕಾ ಎಂದ ವಿರಾಟ್ ಕೊಹ್ಲಿ

Share

ಐಪಿಎಲ್ 2024ನೇ ಆವೃತ್ತಿಯ ನಂತರ ವಿರಾಟ್ ಕೊಹ್ಲಿ ಬ್ರೇಕ್ ತೆಗೆದುಕೊಂಡಿದ್ದು, ಟಿ20 ವಿಶ್ವಕಪ್‌ನಲ್ಲಿ ಆರಂಭಿಕವಾಗಿ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿತ್ತು. ಆದರೆ, ಗುರುವಾರ ವಿರಾಟ್ ಕೊಹ್ಲಿ ಅವರು ನ್ಯೂಯಾರ್ಕ್‌ಗೆ ತೆರಳಿದ ಕಾರಣ ವದಂತಿಗಳಿಗೆ ತೆರೆಬಿದ್ದಿದೆ ಮತ್ತು ಶೀಘ್ರದಲ್ಲೇ ಅವರು ಭಾರತೀಯ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ, ಅಭಿಮಾನಿಗಳು ಮತ್ತು ಪಾಪರಾಜಿಗಳು ಸುತ್ತುವರೆದಿದ್ದಾರೆ. ತಮ್ಮ ಮಗ ಅಕಾಯ್ ಜನಿಸಿದ ನಂತರ ಉಡುಗೊರೆಗಳನ್ನು ಕಳುಹಿಸಿದ್ದಕ್ಕಾಗಿ ಪಾಪರಾಜಿಗಳು ಕೊಹ್ಲಿಗೆ ಧನ್ಯವಾದ ಹೇಳಿದ್ದಾರೆ. ಕೂಡಲೇ ಕೊಹ್ಲಿ ಉಡುಗೊರೆಗಳನ್ನು ನೀಡಿದ್ದು ತಾವಲ್ಲ ತಮ್ಮ ಪತ್ನಿ ಅನುಷ್ಕಾ ಶರ್ಮಾ ಎಂದಿದ್ದಾರೆ.ಅನುಷ್ಕಾ ಶರ್ಮಾ ನಿಮಗೆ ಉಡುಗೊರೆಗಳನ್ನು ನೀಡಿದ್ದು, ನಾನಲ್ಲ ಎಂದಿದ್ದಾರೆ. ಈ ಮೂಲಕ ಕ್ರೆಡಿಟ್‌ ಅನ್ನು ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾರಿಗೆ ನೀಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ಮಗಳು ವಮಿಕಾ ಮತ್ತು ಮಗ ಅಕಾಯ್ ಅವರ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸುವ ಮೂಲಕ ಸ್ಟಾರ್ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪಾಪರಾಜಿಗಳಿಗೆ ಉಡುಗೊರೆ ಹ್ಯಾಂಪರ್‌ಗಳನ್ನು ಕಳುಹಿಸಿದ್ದರು. ಇಬ್ಬರೂ ಈ ಹಿಂದೆ ತಮ್ಮ ಒಪ್ಪಿಗೆಯಿಲ್ಲದೆ ಮಗಳು ವಮಿಕಾ ಮತ್ತು ಮಗ ಅಕಾಯ್ ಅವರ ಫೋಟೊ ತೆಗೆಯದಂತೆ ಛಾಯಾಗ್ರಾಹಕರಿಗೆ ವಿನಂತಿಸಿದ್ದರುಉಡುಗೊರೆಯೊಂದಿಗೆ ಇದ್ದ ಟಿಪ್ಪಣಿಯಲ್ಲಿ, ‘ನಮ್ಮ ಮಕ್ಕಳ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಮತ್ತು ಯಾವಾಗಲೂ ಸಹಕರಿಸಿದ್ದಕ್ಕಾಗಿ ಪ್ರಾಮಾಣಿಕವಾಗಿ ಧನ್ಯವಾದಗಳು! ಪ್ರೀತಿಯಿಂದ ಅನುಷ್ಕಾ ಮತ್ತು ವಿರಾಟ್ ಎಂದು ಬರೆಯಲಾಗಿತ್ತು.

ಈಮಧ್ಯೆ, ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡವು ಸಾಕಷ್ಟು ಸಮತೋಲಿತವಾಗಿದೆ. ಆದರೆ, ಅವರು ಅಲ್ಲಿನ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಬೇಕಾಗಿದೆ. ಅಮೆರಿಕದಲ್ಲಿ ಪಂದ್ಯಗಳು ಬೆಳಿಗ್ಗೆ ಪ್ರಾರಂಭವಾಗಲಿದ್ದು, ಅದು ಸಮಸ್ಯೆಯನ್ನು ಉಂಟುಮಾಡಬಹುದು ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ತಿಳಿಸಿದ್ದಾರೆ.ತಂಡ ಸಮತೋಲಿತವಾಗಿದೆ. ರೋಹಿತ್ ಶರ್ಮಾ ನಾಯಕರಾಗಿದ್ದು, ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಟಚ್‌ನಲ್ಲಿದ್ದಾರೆ. ಇಬ್ಬರು ಎಡಗೈ ವೇಗಿಗಳಿದ್ದು, ಅವರು ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡಬಹುದು. ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಇದ್ದಾರೆ. ಪಂದ್ಯಗಳು ಬೆಳಿಗ್ಗೆ 10 ಗಂಟೆಗೆ ಆರಂಭವಾಗುತ್ತವೆ. ವಿಕೆಟ್‌ಗಳು ಸಹ ಡ್ರಾಪ್-ಇನ್ ಆಗಿವೆ. ತಂಡವು ಈ ವಿಕೆಟ್‌ಗಳು ಮತ್ತು ಪರಿಸ್ಥಿತಿಗಳಿಗೆ ಸಾಧ್ಯವಾದಷ್ಟು ಬೇಗ ಒಗ್ಗಿಕೊಳ್ಳಬೇಕು ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದರು.


Share

ವಿರಾಟ್ ಕೊಹ್ಲಿಯನ್ನು ಕಂಡರೆ ಉದ್ಧಟತನವೇಕೆ? ಕೊಹ್ಲಿಯನ್ನು ಟೀಕಿಸಿದ್ದ ಸೈಮನ್ ಡೌಲ್‌ಗೆ ಜೀವ ಬೆದರಿಕೆ!

Share

ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ RCB ತಂಡದ ಆಟಗಾರ ವಿರಾಟ್ ಕೊಹ್ಲಿ ಪರ್ಪಲ್ ಕ್ಯಾಪ್‌ ಗಳಿಸಿದ್ದಾರೆ. ಆದರೆ ಋತುವಿನ ಉದ್ದಕ್ಕೂ, ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಬಗ್ಗೆ ಟೀಕೆಗಳು ಎದುರಾಯಿತು. ಇದರಲ್ಲಿ ಸುನಿಲ್ ಗವಾಸ್ಕರ್ ಅವರಂತಹ ದಿಗ್ಗಜ ಆಟಗಾರರೂ ಇದ್ದಾರೆ. ಅಲ್ಲದೆ, ಮಾಜಿ ನ್ಯೂಜಿಲೆಂಡ್ ವೇಗದ ಬೌಲರ್ ಮತ್ತು ವೀಕ್ಷಕ ವಿವರಣೆಗಾರ ಸೈಮನ್ ಡೌಲ್ ಕೂಡ ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಅನ್ನು ಟೀಕಿಸಿದ್ದರು. ಇದೀಗ ಅವರು ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.ನ್ಯೂಜಿಲೆಂಡ್‌ನ ಮಾಜಿ ವೇಗದ ಬೌಲರ್ ಮತ್ತು ಕಾಮೆಂಟೇಟರ್ ಸೈಮನ್ ಡೌಲ್ ಅವರು ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಅನ್ನು ಟೀಕಿಸಿದ ನಂತರ ಅವರು ಪಡೆದ ಪ್ರತಿಕ್ರಿಯೆಗಳ ಬಗ್ಗೆ ಬಹಿರಂಗಪಡಿಸಿದ್ದಾರೆ. ಕೊಹ್ಲಿ ಬಗ್ಗೆ ಹೇಳಲು ಸಾವಿರಾರು ಒಳ್ಳೆಯ ಸಂಗತಿಗಳು ಇದ್ದರೂ, ತಮ್ಮ ಕೆಲವು ಟೀಕೆಗಳಿಗೆ “ಜೀವ ಬೆದರಿಕೆ” ಬಂದಿವೆ ಎಂದು ಡೌಲ್ ಹೇಳಿದರು.

ಕ್ರಿಕ್‌ಬಝ್‌ನೊಂದಿಗೆ ಮಾತನಾಡುತ್ತಾ, ಡೌಲ್, ನಾನು ಒಬ್ಬ ಶ್ರೇಷ್ಠ ಆಟಗಾರನನ್ನು ನೋಡುತ್ತಿದ್ದೇನೆ. ಮೊದಲಿಗಿಂತ ಹೆಚ್ಚು ಪ್ರಾಬಲ್ಯ ಸಾಧಿಸಬೇಕಾದ ಆಟಗಾರನನ್ನು ನಾನು ನೋಡುತ್ತಿದ್ದೇನೆ ಎಂದರು. ವಿರಾಟ್ ಕೊಹ್ಲಿ ಬಗ್ಗೆ ನಾನು ಒಂದು ಮಿಲಿಯನ್ ಒಳ್ಳೆಯ ಮಾತುಗಳನ್ನು ಹೇಳಿದ್ದೇನೆ. ಆದರೆ ನಾನು ಎಂದಿಗೂ ಒಂದೇ ಒಂದು ಋಣಾತ್ಮಕ ವಿಷಯವನ್ನು ಹೇಳಿಲ್ಲ ಅಥವಾ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ. ಹೀಗಿದ್ದರೂ ನನಗೆ ಕೊಲೆ ಬೆದರಿಕೆಗಳು ಬರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.ಐಪಿಎಲ್ 2024ರಲ್ಲಿ ವಿರಾಟ್ ಕೊಹ್ಲಿಯ ಪ್ರದರ್ಶನ

ವಿರಾಟ್ ಕೊಹ್ಲಿ ಐಪಿಎಲ್ 2024 ರಲ್ಲಿ ಪರ್ಪಲ್ ಕ್ಯಾಪ್‌ಗೆ ಅರ್ಹರಾಗಿದ್ದಾರೆ. ಈ ಋತುವಿನಲ್ಲಿ ಕೊಹ್ಲಿ 15 ಪಂದ್ಯಗಳನ್ನು ಆಡಿದ್ದಾರೆ. ಈ 15 ಪಂದ್ಯಗಳಲ್ಲಿ ಅವರು 154.70 ಸ್ಟ್ರೈಕ್ ರೇಟ್‌ನಲ್ಲಿ 741 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಅರ್ಧ ಶತಕ ಮತ್ತು ಒಂದು ಶತಕ ಸೇರಿದೆ. ಈ ಋತುವಿನಲ್ಲಿ ಅವರ ಐಪಿಎಲ್ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ ಅಜೇಯ 113 ರನ್. ವಿರಾಟ್ ಕೊಹ್ಲಿ ಐಪಿಎಲ್ 2024 ರಲ್ಲಿ 62 ಬೌಂಡರಿ ಮತ್ತು 38 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.


Share

ವಿಚ್ಛೇದನ ವದಂತಿ ಬೆನ್ನಲೇ ಮೊದಲ ಮಗುವಿನ ಸೂಚನೆ ಕೊಟ್ರಾ ಚಹಾಲ್-ಧನಶ್ರೀ ದಂಪತಿ?

Share

ಟೀಂ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೀರಾ? ಭಾರತದ ಸ್ಟಾರ್ ಆಟಗಾರ ಯುಜ್ವೇಂದ್ರ ಚಹಾಲ್ ಟಿ20 ವಿಶ್ವಕಪ್‌ ಪ್ರವಾಸದಲ್ಲಿದ್ದು ಪತಿ ಜೊತೆ ಪತ್ನಿ ನೃತ್ಯಗಾರ್ತಿ ಧನಶ್ರೀ ವರ್ಮಾ ಕೂಡ ತೆರಳಿದ್ದಾರೆ. ಇಬ್ಬರೂ ಪ್ರವಾಸಕ್ಕೆ ತೆರಳುವ ಮುನ್ನ ಕೆಲವು ಚಿತ್ರಗಳು ಹೊರಬಿದ್ದಿವೆ.

ಇದನ್ನು ನೋಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಧನಶ್ರೀ ಗರ್ಭಿಣಿ, ಆಕೆ ಮತ್ತು ಚಹಲ್‌ನ ಮೊದಲ ಮಗುವಿನ ನಿರೀಕ್ಷೆಯಲ್ಲಿ ಎಂಬ ಚರ್ಚೆಗಳು ಶುರುವಾಗಿದೆ. ಆದರೂ ಈ ಬಗ್ಗೆ ಚಹಾಲ್ ಅಥವಾ ಧನಶ್ರೀ ಯಾವುದೇ ಹೇಳಿಕೆ ನೀಡಲಾಗಿಲ್ಲ. ಯುಜುವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಕುರಿತಂತೆ ಕೆಲವು ಸಮಯದಿಂದ ಇಬ್ಬರೂ ಬೇರೆಯಾಗಲಿದ್ದಾರೆ. ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಯಾಗಿತ್ತು.2024ರ ಮೇ 27ರಂದು ಧನಶ್ರೀ ಮತ್ತು ಯುಜುವೇಂದ್ರ ಚಹಾಲ್ ಅವರು ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಧನಶ್ರೀ ಹೂವಿನ ಚಿತ್ರ ಮುದ್ರಿತ ಮಾತೃತ್ವದ ಡ್ರೆಸ್‌ನ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರ ನಂತರ ಮೇಡಮ್ ಬಹುಶಃ ಒಳ್ಳೆಯ ಸುದ್ದಿಯನ್ನು ನೀಡಲಿದ್ದಾರೆ ಎಂದು ಊಹಿಸಲಾಗಿದೆ.ಯುಜುವೇಂದ್ರ ಚಹಾಲ್ ಬಿಳಿ ಡ್ರೀಮ್ 11 ಟಿ-ಶರ್ಟ್ ಧರಿಸಿದ್ದಾರೆ. ಆದರೆ ಧನಶ್ರೀ ತೊಟ್ಟಿರುವ ಡ್ರೆಸ್ ಜನ ಆಶ್ಚರ್ಯ ಪಡುವಂತೆ ಮಾಡಿದ್ದು, ಆಕೆ ಗರ್ಭಿಣಿ ಎಂದು ಜನ ಹೇಳುತ್ತಿದ್ದಾರೆ. ಯುಜುವೇಂದ್ರ ಚಹಾಲ್ ಮತ್ತು ಘನಶ್ರೀ 2020ರಲ್ಲಿ ಸ್ವಲ್ಪ ಸಮಯದ ಡೇಟಿಂಗ್ ನಂತರ ವಿವಾಹವಾಗಿದ್ದರು.


Share

ಭಾರತ ತಂಡದ ಕೋಚ್‌ ಆಗಿ ಗೌತಮ್ ಗಂಭೀರ್? ಘೋಷಣೆಯಷ್ಟೇ ಬಾಕಿ!

Share

ರಾಹುಲ್ ದ್ರಾವಿಡ್ ಬಳಿಕ ಭಾರತ ತಂಡದ ಮುಂದಿನ ಕೋಚ್‌ಗಾಗಿ ಬಿಸಿಸಿಐ ಹುಡುಕಾಟ ನಡೆಸುತ್ತಿದೆ. ಹಲವು ವಿದೇಶಿ ದಿಗ್ಗಜ ಆಟಗಾರರ ಹೆಸರು ಕೂಡ ಕೋಚ್ ಹುದ್ದೆಗೆ ಕೇಳಿ ಬಂದಿದ್ದವು. ಕೆಕೆಆರ್ ತಂಡದ ಮೆಂಟರ್ ಆಗಿರುವ, ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಹೆಸರು ಬಲವಾಗಿ ಕೇಳಿಬಂದಿದೆ.ಈ ಬಾರಿ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಮೆಂಟರ್ ಸ್ಥಾನ ವಹಿಸಿಕೊಂಡ ಗಂಭೀರ್ ತಂಡವನ್ನು ಚಾಂಪಿಯನ್ ಮಾಡಿದ್ದಾರೆ. 2024 ರ ಮೊದಲು, ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್‌ನ ಮಾರ್ಗದರ್ಶಕರಾಗಿದ್ದರು. ಕೆಎಲ್ ರಾಹುಲ್ ನೇತೃತ್ವದ ತಂಡ ಗಂಭೀರ್ ನಾಯಕತ್ವದಲ್ಲಿ ಸತತ ಎರಡು ಆವೃತ್ತಿಗಳಲ್ಲಿ ಐಪಿಎಲ್ ಪ್ಲೇ-ಆಫ್ ಪ್ರವೇಶಿಸಿದೆ. ಇದು ಬಿಸಿಸಿಐ ಗಂಭೀರ್ ಹೆಸರನ್ನು ಪರಿಗಣಿಸಲು ಮತ್ತೊಂದು ಬಲವಾದ ಕಾರಣವಾಗಿದೆ.

ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಯ್ಕೆಯ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಅಧಿಕೃತ ಗಡುವು ಮುಗಿದಿದೆ. ಭಾರತದ ಮುಂದಿನ ಕೋಚ್ ಅರ್ಜಿ ಸಲ್ಲಿಸಲು ಸೋಮವಾರ ಕೊನೆಯ ದಿನಾಂಕವಾಗಿತ್ತು.

ಇತ್ತೀಚಿನ ವರದಿಗಳ ಪ್ರಕಾರ ಗೌತಮ್ ಗಂಭೀರ್ ಅವರೇ ಭಾರತದ ಕೋಚ್ ಆಗುವುದು ಬಹುತೇಕ ಖಚಿತವಾಗಿದೆ. ಅವರನ್ನು ಭಾರತ ತಂಡದ ಕೋಚ್ ಆಗಿ ಆಯ್ಕೆ ಮಾಡಲಾಗಿದ್ದು, ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.ಮೂರನೇ ಬಾರಿಗೆ ಮುಖ್ಯ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ತಾವು ಆಸಕ್ತಿ ಹೊಂದಿಲ್ಲ ಎಂದು ದ್ರಾವಿಡ್ ಬಿಸಿಸಿಐಗೆ ತಿಳಿಸಿದ್ದರೆ, ರಿಕಿ ಪಾಂಟಿಂಗ್ ಮತ್ತು ಜಸ್ಟಿನ್ ಲ್ಯಾಂಗರ್ ಅವರಂತಹ ಆಸ್ಟ್ರೇಲಿಯಾದ ಮಾಜಿ ಆಟಗಾರರು ಮುಖ್ಯ ಕೋಚ್ ಹುದ್ದೆಯನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.

ಈ ವರದಿಗಳ ಬೆನ್ನಲ್ಲೇ, ‘ನಾನಾಗಲೀ ಅಥವಾ ಬಿಸಿಸಿಐ ಆಗಲಿ ಯಾವುದೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಮುಖ್ಯ ಕೋಚ್ ಹುದ್ದೆಗೆ ಸಂಪರ್ಕಿಸಿಲ್ಲ. ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುವ ವರದಿಗಳು ಸಂಪೂರ್ಣವಾಗಿ ತಪ್ಪಾಗಿದೆ’ ಎಂದು ಜಯ್ ಶಾ ಕಳೆದ ವಾರ ತಳ್ಳಿಹಾಕಿದ್ದರು.’ನಮ್ಮ ರಾಷ್ಟ್ರೀಯ ತಂಡಕ್ಕೆ ಸರಿಯಾದ ತರಬೇತುದಾರರನ್ನು ಹುಡುಕುವುದು ಒಂದು ನಿಖರವಾದ ಮತ್ತು ಸಂಪೂರ್ಣ ಪ್ರಕ್ರಿಯೆಯಾಗಿದೆ. ನಾವು ಭಾರತೀಯ ಕ್ರಿಕೆಟ್ ರಚನೆಯ ಬಗ್ಗೆ ಆಳವಾದ ತಿಳುವಳಿಕೆ ಹೊಂದಿರುವ ಮತ್ತು ಶ್ರೇಯಾಂಕಗಳ ಮೂಲಕ ಉನ್ನತ ಮಟ್ಟಕೇರಿದ ವ್ಯಕ್ತಿಗಳನ್ನು ಗುರುತಿಸುವತ್ತ ಗಮನಹರಿಸಿದ್ದೇವೆ’ ಎಂದಿರುವ ಅವರು ದ್ರಾವಿಡ್ ಅವರ ಉತ್ತರಾಧಿಕಾರಿಯು ಭಾರತೀಯರೇ ಆಗಿರಬೇಕೆಂಬ ಸುಳಿವು ನೀಡಿದರು.


Share

T20 World Cup: ಭಾರತ ಟಿ20 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗದ ಕುರಿತು ಮೌನ ಮುರಿದ ರಿಂಕು ಸಿಂಗ್

Share

ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಭಾರತ ತಂಡಕ್ಕೆ ರಿಂಕು ಸಿಂಗ್ ಅವರನ್ನು ಆಯ್ಕೆ ಮಾಡದ ಭಾರತೀಯ ಕ್ರಿಕೆಟ್ ತಂಡದ ಆಯ್ಕೆಗಾರರು ತೆಗೆದುಕೊಂಡ ನಿರ್ಧಾರವು ಸಾಕಷ್ಟು ಅಭಿಮಾನಿಗಳು ಮತ್ತು ತಜ್ಞರಿಂದ ಟೀಕೆಗೆ ಕಾರಣವಾಯಿತು. ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಅವರನ್ನು ಆಲ್‌ರೌಂಡರ್‌ಗಳನ್ನಾಗಿ ಆಯ್ಕೆ ಮಾಡುವ ಬಿಸಿಸಿಐ ನಿರ್ಧರಾವು ರಿಂಕುಗೆ ಮೀಸಲು ಪಟ್ಟಿಯಲ್ಲಿ ಸ್ಥಾನ ಪಡೆಯಲು ಕಾರಣವಾಯಿತು. ರಿಂಕು ಸಿಂಗ್ ಅವರಿಗೆ ಐಪಿಎಲ್ 2024ನೇ ಆವೃತ್ತಿಯಲ್ಲಿ ಬ್ಯಾಟಿಂಗ್ ಮಾಡಲು ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. ಸಿಕ್ಕಿದ್ದ ಅಲ್ಪ ಅವಕಾಶದಲ್ಲಿ ಅವರು ಕೇವಲ 168 ರನ್ ಗಳಿಸಿದ್ದಾರೆ. ಆದಾಗ್ಯೂ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸ್ಪರ್ಧೆಯಲ್ಲಿ ಜಯಗಳಿಸಿದೆ.T20 ವಿಶ್ವಕಪ್ ಭಾರತ ತಂಡಕ್ಕೆ ಆಯ್ಕೆಯಾಗದ ಬಗ್ಗೆ ರಿಂಕು ಸಿಂಗ್ ಈಗ ಮೌನ ಮುರಿದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮನ್ನು ತಂಡಕ್ಕೆ ಸೇರಿಸಿಕೊಳ್ಳದಿರುವ ನಿರ್ಧಾರದ ಬಗ್ಗೆ ಮತ್ತು ಆ ಬಗ್ಗೆ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಸಹ ಬಹಿರಂಗಪಡಿಸಿದ್ದಾರೆ.

‘ಹೌದು, ಉತ್ತಮ ಪ್ರದರ್ಶನ ನೀಡಿದರೂ ಆಯ್ಕೆಯಾಗದಿದ್ದರೆ ಯಾರಿಗಾದರೂ ಸ್ವಲ್ಪ ಬೇಸರವಾಗುತ್ತದೆ. ಆದರೆ, ಈ ಬಾರಿ ತಂಡದ ಸಂಯೋಜನೆಯಿಂದ ನಾನು ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಪರವಾಗಿಲ್ಲ, ಯಾರೊಬ್ಬರ ಕೈಯಲ್ಲಿಲ್ಲದ ವಿಚಾರಗಳ ಬಗ್ಗೆ ಹೆಚ್ಚು ಯೋಚಿಸಬಾರದು. ಹೌದು, ಆರಂಭದಲ್ಲಿ ನಾನು ಕೊಂಚ ಬೇಸರಗೊಂಡಿದ್ದೆ. ಈಗ ಏನು ನಡೆದಿದೆಯೋ ಪರವಾಗಿಲ್ಲ. ಏನೇ ನಡೆದರೂ ಅದೆಲ್ಲವೂ ಒಳ್ಳೆಯದಕ್ಕಾಗಿಯೇ ನಡೆದಿದೆ. ರೋಹಿತ್ ಭಯ್ಯಾ ವಿಶೇಷವಾಗಿ ಏನನ್ನೂ ಹೇಳಿಲ್ಲ. ಕಷ್ಟಪಟ್ಟು ಕೆಲಸ ಮಾಡಿ ಎಂದು ಮಾತ್ರ ಹೇಳಿದರು. ಎರಡು ವರ್ಷಗಳ ನಂತರ ಮತ್ತೊಮ್ಮೆ ವಿಶ್ವಕಪ್ ಇದೆ. ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಎಂದು ಅವರು ನನಗೆ ಹೇಳಿದರು’ ಎಂದು ರಿಂಕು ದೈನಿಕ್ ಜಾಗರಣ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.ಐಪಿಎಲ್ 2024ರ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಎಂಟು ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಫ್ರಾಂಚೈಸಿಗೆ ಇದು ಮೂರನೇ ಐಪಿಎಲ್ ಟ್ರೋಫಿಯಾಗಿದೆ.’ಇದೀಗ ಅತ್ಯುತ್ತಮ ಭಾವನೆ ನನ್ನಲ್ಲಿದೆ. ಕನಸು ನನಸಾಗಿದೆ. ನಾನು 7 ವರ್ಷಗಳಿಂದ ಇಲ್ಲಿದ್ದೇನೆ ಮತ್ತು ನಾವು ತುಂಬಾ ಸಂತೋಷವಾಗಿದ್ದೇವೆ. ಇದರ ಕ್ರೆಡಿಟ್ ಜಿಜಿ (ಗೌತಮ್ ಗಂಭೀರ್) ಸರ್ ಅವರಿಗೆ ಸಲ್ಲಬೇಕು. ನಾನು ಅಂತಿಮವಾಗಿ ಐಪಿಎಲ್ ಟ್ರೋಫಿಯನ್ನು ಎತ್ತಿದ್ದೇನೆ. ಇದು ದೇವರ ಯೋಜನೆ’ ಎಂದು ವಿಜಯದ ನಂತರ ರಿಂಕು ಹೇಳಿದರು.


Share

IPL 2024: ನಾಳೆ ಕೆಕೆಆರ್ ವಿರುದ್ಧ ಫೈನಲ್ ಪಂದ್ಯ: ಖಂಡಿತವಾಗಿಯೂ ಟ್ರೋಫಿ ಗೆಲ್ಲುತ್ತೇವೆ- ಭುವನೇಶ್ವರ್ ಕುಮಾರ್

Share

ಟಿವಿ ೨೩ ಕನ್ನಡ

ಈ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳುವುದಾಗಿ ಭುವನೇಶ್ವರ್ ಕುಮಾರ್ ಹೇಳಿದ್ದಾರೆ. “ಕಳೆದ ಮೂರು ಸೀಸನ್‌ಗಳಲ್ಲಿ ನಾವು ಪ್ಲೇಆಫ್‌ನಲ್ಲಿ ಆಡದ ಕಾರಣ ಇದು ವಿಭಿನ್ನ ಭಾವನೆಯಾಗಿದೆ. ಇದು ಒಂದು ಉತ್ತಮ ಭಾವನೆಯಾಗಿದೆ. ಈ ಆವೃತ್ತಿಯಲ್ಲಿ ನಾವು ಆಡುತ್ತಿರುವ ಹಾದಿ ಗಮನಿಸಿದರೆ ನಾವು ಫೈನಲ್‌ಗೆ ತಲುಪುತ್ತೇವೆ ಎಂಬ ಭಾವನೆಯನ್ನು ಹೊಂದಿದ್ದೇವೆ. ಪಂದ್ಯದ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ನೀಡಿರುವ ಕೊಡುಗೆ ಬಗ್ಗೆ ಎಲ್ಲರಿಗೂ ಸಂತೋಷವಾಗಿದೆ, ಇದು ಅದ್ಭುತ ತಂಡದ ಕೆಲಸವಾಗಿದೆ. ಐಪಿಎಲ್ ಪ್ರಶಸ್ತಿ ಗೆಲ್ಲುವುದು ನಿಜವಾಗಿಯೂ ವಿಶೇಷವಾಗಿದೆ ಮತ್ತು ಈಗ ನಾವು ಫೈನಲ್‌ಗೆ ತಲುಪಿದ್ದು, ಖಂಡಿತವಾಗಿಯೂ ಟ್ರೋಫಿ ಗೆಲ್ಲುತ್ತೇವೆ ಎಂದು ಭುವನೇಶ್ವರ್ ಕುಮಾರ್ ಜಿಯೋಸಿನೆಮಾಗೆ ತಿಳಿಸಿದರು.

ರಾಜಸ್ಥಾನ ವಿರುದ್ಧ 37 ರನ್‌ಗಳ ಕೊಡುಗೆ ನೀಡಿದ ರಾಹುಲ್ ತ್ರಿಪಾಠಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದರು. ಅವರು ಈ ಆವೃತ್ತಿಯಲ್ಲಿ ಕೇವಲ ಐದು ಪಂದ್ಯಗಳನ್ನು ಆಡಿದ್ದು, ಒಂದು ಅರ್ಧಶತಕ ಸೇರಿದಂತೆ 156 ರನ್ ಗಳಿಸಿದ್ದಾರೆ.

ಈ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳುವುದಾಗಿ ಭುವನೇಶ್ವರ್ ಕುಮಾರ್ ಹೇಳಿದ್ದಾರೆ. “ಕಳೆದ ಮೂರು ಸೀಸನ್‌ಗಳಲ್ಲಿ ನಾವು ಪ್ಲೇಆಫ್‌ನಲ್ಲಿ ಆಡದ ಕಾರಣ ಇದು ವಿಭಿನ್ನ ಭಾವನೆಯಾಗಿದೆ. ಇದು ಒಂದು ಉತ್ತಮ ಭಾವನೆಯಾಗಿದೆ. ಈ ಆವೃತ್ತಿಯಲ್ಲಿ ನಾವು ಆಡುತ್ತಿರುವ ಹಾದಿ ಗಮನಿಸಿದರೆ ನಾವು ಫೈನಲ್‌ಗೆ ತಲುಪುತ್ತೇವೆ ಎಂಬ ಭಾವನೆಯನ್ನು ಹೊಂದಿದ್ದೇವೆ. ಪಂದ್ಯದ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ನೀಡಿರುವ ಕೊಡುಗೆ ಬಗ್ಗೆ ಎಲ್ಲರಿಗೂ ಸಂತೋಷವಾಗಿದೆ, ಇದು ಅದ್ಭುತ ತಂಡದ ಕೆಲಸವಾಗಿದೆ. ಐಪಿಎಲ್ ಪ್ರಶಸ್ತಿ ಗೆಲ್ಲುವುದು ನಿಜವಾಗಿಯೂ ವಿಶೇಷವಾಗಿದೆ ಮತ್ತು ಈಗ ನಾವು ಫೈನಲ್‌ಗೆ ತಲುಪಿದ್ದು, ಖಂಡಿತವಾಗಿಯೂ ಟ್ರೋಫಿ ಗೆಲ್ಲುತ್ತೇವೆ ಎಂದು ಭುವನೇಶ್ವರ್ ಕುಮಾರ್ ಜಿಯೋಸಿನೆಮಾಗೆ ತಿಳಿಸಿದರು.

ರಾಜಸ್ಥಾನ ವಿರುದ್ಧ 37 ರನ್‌ಗಳ ಕೊಡುಗೆ ನೀಡಿದ ರಾಹುಲ್ ತ್ರಿಪಾಠಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದರು. ಅವರು ಈ ಆವೃತ್ತಿಯಲ್ಲಿ ಕೇವಲ ಐದು ಪಂದ್ಯಗಳನ್ನು ಆಡಿದ್ದು, ಒಂದು ಅರ್ಧಶತಕ ಸೇರಿದಂತೆ 156 ರನ್ ಗಳಿಸಿದ್ದಾರೆ.

ನವದೆಹಲಿ: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಕೆಕೆಆರ್ ವಿರುದ್ಧದ ಫೈನಲ್ ಹಣಾಹಣಿಗೆ ಸಜ್ಜಾಗಿರುವ ಸನ್‌ರೈಸರ್ಸ್ ಹೈದರಾಬಾದ್ ವೇಗಿ ಭುವನೇಶ್ವರ್ ಕುಮಾರ್ ಈ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಶುಕ್ರವಾರ ನಡೆದ ಕ್ವಾಲಿಫೈಯರ್‌ 2ರ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ 36 ರನ್‌ಗಳಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಸೋಲಿಸಿ ಫೈನಲ್‌ ತಲುಪಿತು. ಆದಾಗ್ಯೂ, ಅವರು ಕ್ವಾಲಿಫೈಯರ್ 1ರ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 8 ವಿಕೆಟ್ ಗಳಿಂದ ಸೋತಿತ್ತು. ಆರು ಸೀಸನ್ ಗಳಲ್ಲಿ ಇದೇ ಮೊದಲ ಬಾರಿಗೆ ಹೈದ್ರಾಬಾದ್ ಫೈನಲ್ ಪಂದ್ಯವನ್ನಾಡಲಿದೆ. 2018ರಲ್ಲಿ ಫೈನಲ್ ತಲುಪಿ ಚೆನ್ನೈ ವಿರುದ್ಧ ಸೋತಿದ್ದರು. ಕಳೆದ ಮೂರು ಸೀಸನ್ ಗಳಲ್ಲಿ ಅವರು ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ.ಈ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳುವುದಾಗಿ ಭುವನೇಶ್ವರ್ ಕುಮಾರ್ ಹೇಳಿದ್ದಾರೆ. “ಕಳೆದ ಮೂರು ಸೀಸನ್‌ಗಳಲ್ಲಿ ನಾವು ಪ್ಲೇಆಫ್‌ನಲ್ಲಿ ಆಡದ ಕಾರಣ ಇದು ವಿಭಿನ್ನ ಭಾವನೆಯಾಗಿದೆ. ಇದು ಒಂದು ಉತ್ತಮ ಭಾವನೆಯಾಗಿದೆ. ಈ ಆವೃತ್ತಿಯಲ್ಲಿ ನಾವು ಆಡುತ್ತಿರುವ ಹಾದಿ ಗಮನಿಸಿದರೆ ನಾವು ಫೈನಲ್‌ಗೆ ತಲುಪುತ್ತೇವೆ ಎಂಬ ಭಾವನೆಯನ್ನು ಹೊಂದಿದ್ದೇವೆ. ಪಂದ್ಯದ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ನೀಡಿರುವ ಕೊಡುಗೆ ಬಗ್ಗೆ ಎಲ್ಲರಿಗೂ ಸಂತೋಷವಾಗಿದೆ, ಇದು ಅದ್ಭುತ ತಂಡದ ಕೆಲಸವಾಗಿದೆ. ಐಪಿಎಲ್ ಪ್ರಶಸ್ತಿ ಗೆಲ್ಲುವುದು ನಿಜವಾಗಿಯೂ ವಿಶೇಷವಾಗಿದೆ ಮತ್ತು ಈಗ ನಾವು ಫೈನಲ್‌ಗೆ ತಲುಪಿದ್ದು, ಖಂಡಿತವಾಗಿಯೂ ಟ್ರೋಫಿ ಗೆಲ್ಲುತ್ತೇವೆ ಎಂದು ಭುವನೇಶ್ವರ್ ಕುಮಾರ್ ಜಿಯೋಸಿನೆಮಾಗೆ ತಿಳಿಸಿದರು.

ರಾಜಸ್ಥಾನ ವಿರುದ್ಧ 37 ರನ್‌ಗಳ ಕೊಡುಗೆ ನೀಡಿದ ರಾಹುಲ್ ತ್ರಿಪಾಠಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದರು. ಅವರು ಈ ಆವೃತ್ತಿಯಲ್ಲಿ ಕೇವಲ ಐದು ಪಂದ್ಯಗಳನ್ನು ಆಡಿದ್ದು, ಒಂದು ಅರ್ಧಶತಕ ಸೇರಿದಂತೆ 156 ರನ್ ಗಳಿಸಿದ್ದಾರೆ.


Share

ಐಪಿಎಲ್ ನಿಯಮ ಉಲ್ಲಂಘನೆ: ಹೆಟ್ಮೆಯರ್ ಗೆ ಪಂದ್ಯ ಶುಲ್ಕದ ಶೇ.10 ರಷ್ಟು ದಂಡ!

Share

ಚೆನ್ನೈ: ಚೆನ್ನೈನಲ್ಲಿ ಶುಕ್ರವಾರ ರಾತ್ರಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯದ ವೇಳೆ ಐಪಿಎಲ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್‌ನ ಶಿಮ್ರಾನ್ ಹೆಟ್ಮೆಯರ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ. ಸನ್ ರೈಸರ್ಸ್ ಹೈದ್ರಾಬಾದ್ 36 ರನ್ ಗಳಿಂದ ಪಂದ್ಯ ಗೆದ್ದುಕೊಂಡಿತ್ತು.

ಹೆಟ್ಮೆಯರ್‌ಗೆ ಏಕೆ ದಂಡ ವಿಧಿಸಲಾಯಿತು ಎಂಬುದನ್ನು ಆಯೋಜಕರು ನಿರ್ದಿಷ್ಟಪಡಿಸದಿದ್ದರೂ, ಅವರು ಔಟಾದ ನಂತರ ತೋರಿದ ವರ್ತನೆಗೆ ದಂಡ ವಿಧಿಸಬರಹುದು ಎನ್ನಲಾಗಿದೆ. 14 ನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಬೌಲ್ಡ್ ಮಾಡಿದ ನಂತರ, ಹೆಟ್ಮೆಯರ್ ಹತಾಶೆಯಿಂದ ಸ್ಟಂಪ್‌ಗಳನ್ನು ಚೂರು ಮಾಡಲು ಪ್ರಯತ್ನಿಸಿದರು.ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್‌ನ ಶಿಮ್ರಾನ್ ಹೆಟ್ಮೆಯರ್ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

Hetmyer IPL ನೀತಿ ಸಂಹಿತೆಯ ಆರ್ಟಿಕಲ್ 2.2 ಅಡಿಯಲ್ಲಿ ಲೆವೆಲ್ 1 ಅಪರಾಧವೆಸಗಿದ್ದಾರೆ. ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪಂದ್ಯದ ರೆಫರಿಯ ನಿರ್ಧಾರ ಅಂತಿಮ ಮತ್ತು ಬದ್ಧವಾಗಿರುವುದಾಗಿ ಅವರು ಹೇಳಿರುವುದಾಗಿ ತಿಳಿದುಬಂದಿದೆ.


Share

IPL 2024: RR ವಿರುದ್ಧ ಗೆದ್ದ ಹೈದರಾಬಾದ್ ಫೈನಲ್ ಗೆ ಎಂಟ್ರಿ: KKR ವಿರುದ್ಧ SRH ಹಣಾಹಣಿ!

Share

ಐಪಿಎಲ್ 2024ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೈನಲ್ ಗೆ ಎಂಟ್ರಿ ಕೊಟ್ಟಿದೆ.

ಚೆನ್ನೈನ ಚೆಪಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಬಾರಿಸಿತ್ತು. ಹೈದರಾಬಾದ್ ನೀಡಿದ 176 ರನ್ ಗುರಿ ಬೆನ್ನಟ್ಟಿದ ರಾಯಲ್ಸ್ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತವಾಗಿದ್ದು 36 ರನ್ ಗಳಿಂದ ಸೋಲು ಕಂಡಿದೆ.

ಹೈದರಾಬಾದ್ ಪರ ಟ್ರಾವಿಸ್ ಹೆಡ್ 34, ಅಭಿಶೇಕ್ ಶರ್ಮಾ 12, ರಾಹುಲ್ ತ್ರಿಪಾಠಿ 37 ಮತ್ತು ಹೆನ್ರಿಚ್ ಕ್ಲಾಸೆನ್ 50 ರನ್ ಬಾರಿಸಿದ್ದರು. ಆರ್ ಆರ್ ಪರ ಬೌಲಿಂಗ್ ನಲ್ಲಿ ಟ್ರೆಂಟ್ ಬೋಲ್ಟ್ ಮತ್ತು ಆವೇಶ್ ಖಾನ್ ತಲಾ 3 ವಿಕೆಟ್ ಪಡೆದಿದ್ದರೆ ಸಂದೀಪ್ ಶರ್ಮಾ 2 ವಿಕೆಟ್ ಪಡೆದಿದ್ದಾರೆ.ರಾಜಸ್ಥಾನ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 42, ಟಾಮ್ ಕೊಹ್ಲೆರ್ 10 ರನ್ ಗಳಿಸಿ ಔಟಾದರೆ ಧ್ರುವ್ ಜುರೆಲ್ ಏಕಾಂಗಿ ಹೋರಾಟ ನಡೆಸಿ ಅಜೇಯ 56 ರನ್ ಬಾರಿಸಿದರು. ಆದರೆ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ. ಹೈದರಾಬಾದ್ ಪರ ಶಹಬಾಜ್ ಅಹಮದ್ 3 ವಿಕೆಟ್ ಪಡೆದಿದ್ದರೆ ಅಭಿಶೇಕ್ ಶರ್ಮಾ 2 ವಿಕೆಟ್ ಪಡೆದಿದ್ದಾರೆ.


Share