ಹುಣಸೂರು ನಗರಕ್ಕೆ ಸಮೀಪದ ಕಿರಿಜಾಜಿ ಗ್ರಾಮದ ರೈತ ಮುಖಂಡ ಧನಂಜಯ, ಶಿವಶಂಕರ್ ಮತ್ತಿತರರು ಶ್ರೀರಂಗಪಟ್ಟಣ-ಕುಶಾಲನಗರ ಹೆದ್ದಾರಿ-೨೭೫ರ ಕಾಮಗಾರಿ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ, ಹೆದ್ದಾರಿ ನಿಮಾಣದ ವೇಳೆಯೇ ಸರ್ವಿಸ್ ರಸ್ತೆ ನಿರ್ಮಿಸಿಕೊಡಬೇಕು. ಅಂಡರ್ ಪಾಸ್ನಿಂದ ೫-೬ ಕಿಮೀ ದೂರ ಬಳಸು ದಾರಿಯಲ್ಲಿ ಬಂದರೂ ಜಮೀನಿಗೆ ತೆರಳಲಾಗುವುದಿಲ್ಲಾ, ಇನ್ನು ಕೆಲವರ ಜಮೀನಿನ ಮದ್ಯದಲ್ಲೇ ಹೆದ್ದಾರಿ ಹಾದು ಹೋಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಂಪ್ ಸೆಟ್ ನೀರು ಹಾಯಿಸಲು ಆಗದಂತಾಗಿದೆ. ಭೂಸ್ವಾಧಿನದ ವೇಳೆ ಈ ಎಲ್ಲಾ ಮಾಹಿತಿ ನೀಡಿರಲಿಲ್ಲಾ ಹೀಗಾಗಿ ಅವರು ಕೊಟ್ಟ ಪರಿಹಾರ ಪಡೆದು ಮೋಸ ಹೋಗಿದ್ದೇವೆ. ಹೆದ್ದಾರಿ ನಿರ್ಮಾಣದ ವೇಳೆಯೇ ಸರ್ವಿಸ್ ರಸ್ತೆ ಮತ್ತು ಪಂಪ್ಸೆಟ್ ನೀರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟ ನಂತರವೇ ರಸ್ತೆ ನಿರ್ಮಿಸಬೇಕು ಎಂದು ಪಟ್ಟು ಹಿಡಿದಿದ್ದರಿಂದ ಅನಿವಾರ್ಯವಾಗಿ ರಸ್ತೆ ಮಾಡುವ ಕಾರ್ಮಿಕರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಪುಟ್ಟಯ್ಯ, ವಾಸು, ಯೋಗೇಂದ್ರ, ಲೋಕೇಶ್, ಪುಟ್ಟಸ್ವಾಮಿ, ಕರುಣ, ಹರೀಶ, ಮಂಜು, ಅಪ್ಪು, ರವಿ ಸೇರಿದಂತೆ ಹಲವರು ಇದ್ದರು.
