ವಿಜಯಪೂರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಶ್ರೀ. ಮುಖ್ಯಪ್ರಾಣ ದೇವರಾದ ಹನುಮಾನ ದೇವಸ್ಥಾನದ ವಿಷೇಶ ಪವಾಡಗಳು ನಡೆಯು ಸ್ಥಳವಾಗಿದ್ದು,ಬಂದ ಭಕ್ತರು ಭಕ್ತಿಯಿಂದ ಕೇಳುವ ವರವನ್ನು ನೀಡುವ ಸನ್ನಿಧಿಯಾಗಿದ್ದು ಪ್ರತಿ ಶನಿವಾರ ಪಲ್ಲಕ್ಕಿ ಉಸ್ತವ ಜರುಗುವುದು, ಇನ್ನೊಂದು ವಿಷೇಶವೇನಂದರೆ ಪ್ರತಿದಿನ ಪ್ರಥಮ ಪೂಜೆ ಹೂಗಾರ(ಪೂಜಾರಿ) ಸಮಾಜದವರು ಮಾಡುವರು, ಎರಡನೇ ಪೂಜೆಯು ಬ್ರಾಹ್ಮಾಣ ಸಮಾಜದವರು ನೇರೆವೆರಿಸಿಕೊಂಡು ಬರುತ್ತಾರೆ.ಹಾಗೇ ಪ್ರತಿ ರವಿವಾರ ಅಮವಾಸ್ಯಯಂದು ದೇವಿತೀರ್ಥ(ದೇವತ್ರಾಣೆ) ಮಾರುತೇಶ್ವರ ಹೋಗಿ ಗಂಗಾ ಮಿನಿದು ಬರುವ ವಾಡಿಕೆಯುಂಟು ಪ್ರತಿ 3 ವರ್ಷ ಶ್ರೀ ಪ್ರಾಣದೇವರ ಪಾದರಕ್ಷೆಯು ಸವೆದು ಹೊಗುವುದು ಪ್ರತಿ 3 ವರ್ಷಕೊಮ್ಮೆ ಹರಿಜನ ಸಮಾಜದ ವ್ಯಕ್ತಿಯ ಸ್ವಪ್ನದಲ್ಲಿ ಬಂದು ಆ ವರ್ಷದ ಹೊಸದಾಗಿ ಪಾದ ರಕ್ಷೆಗಳನ್ನು ಮಾಡಿಸಬೇಕೆಂದು ಸೂಚನೆಯಾಗುತ್ತದೆ. ಅದೆ ಪ್ರಕಾರ ಆ ಸಮಾಜದವರು ಸತತ 3 ತಿಂಗಳು ಶ್ರದ್ದಾಬಕ್ತಿಯಿಂದ ಪಾದರಕ್ಷೆಯನ್ನು ಮಾಡುತ್ತಾರೆ.ಜಾತ್ರೆಯು 9 ದಿನಗಳ ಕಾಲ ನಡೆಯುವದು. ದಿನಾಂಕ: 30/03/2025 ರಂದು ಕಳಸಹಾರೋಹಣ, ನವಗ್ರಹ ಸ್ಥಾಪನೆ, ಅಭಿಷೇಕ, ಅಲಂಕಾರ ಪೂಜೆ, ಸಾಯಂಕಾಲ ಪಲ್ಲಕ್ಕಿ ಸೇವೆ. ದಿನಾಂಕ: 31/04/2025 ರಂದು ಉದಯರಾಗ, ಕಕ್ಕಡಾರತಿ, ಆಗಮೋಕ್ತ ಹೋಮ, ಪಂಚಾಮೃತ ಅಭಿಷೇಕ, ಸಾಯಂಕಾಲ ಪಲ್ಲಕ್ಕಿ ಸೇವೆ. ದಿನಾಂಕ: 01/04/2025 ರಂದು ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ನೈವೇದ್ಯ ತೀರ್ಥಪ್ರಸಾದ, ಸಾಯಂಕಾಲ ಪಲ್ಲಕ್ಕಿ ಸೇವೆ ಜೋತೆಗೆ ಮಯೂರ ವಾಹನೋತ್ಸವ, ದಿನಾಂಕ: 02/04/2025 ರಂದು ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ನೈವೇದ್ಯ ತೀರ್ಥಪ್ರಸಾದ, ಸಾಯಂಕಾಲ ಪಲ್ಲಕ್ಕಿ ಸೇವೆ ಜೋತೆಗೆ ಗಜವಾಹನೋತ್ಸವ. ದಿನಾಂಕ: 03/04/2025 ರಂದು ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ನೈವೇದ್ಯ ತೀರ್ಥಪ್ರಸಾದ, ಸಾಯಂಕಾಲ ಪಲ್ಲಕ್ಕಿ ಸೇವೆ ಜೋತೆಗೆ ಮಯೂರ ವಾಹನೋತ್ಸವ, ದಿನಾಂಕ: 04/04/2025 ರಂದು ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ನೈವೇದ್ಯ ತೀರ್ಥಪ್ರಸಾದ, ಸಾಯಂಕಾಲ ಪಲ್ಲಕ್ಕಿ ಸೇವೆ ಜೋತೆಗೆ ಅಶ್ವವಾಹನೋತ್ಸವ. ದಿನಾಂಕ: 05/04/2025 ರಂದು ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ನೈವೇದ್ಯ ತೀರ್ಥಪ್ರಸಾದ, ಸಾಯಂಕಾಲ ಪಲ್ಲಕ್ಕಿ ಸೇವೆ ಜೋತೆಗೆ ಕಾಮಧೇನು ವಾಹನೋತ್ಸವ. ದಿನಾಂಕ: 06/04/2025 ರಂದು ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ನೈವೇದ್ಯ ತೀರ್ಥಪ್ರಸಾದ, ಸಾಯಂಕಾಲ ಪಲ್ಲಕ್ಕಿ ಸೇವೆ ಜೋತೆಗೆ ಗರುಡ ವಾಹನೋತ್ಸವ, ದಿನಾಂಕ: 07/04/2025 ರಂದು ಆಗಮೋಕ್ತ ಹೋಮ, ರಥ ಪೂಜೆ, ರಥವನ್ನು ವಿಶ್ವಕರ್ಮ ಸಮಾಜ ಮತ್ತು ಕುರುಬ ಸಮಾಜದವರು ರಥವನ್ನು ತೈಲಾಭಿಷೇಕ ಕಾರ್ಯಾಕ್ರಮ ನೇರೆವೆರಿಸುವರು.
ಅಂದು ವಿವಿಧ ಸ್ಪರ್ಧೆಗಳು ನಡೆಯುವವು ಸಾಯಂಕಾಲ ಅಪ್ಪಸಾಹೇಬಗೌಡ ಮಾಲಿಪಾಟೀಲ ತೇರಿನ ಕಬ್ಬು ಬಾಳೆದಿಂಡು ಅಲಂಕರವು ಇವರದಾಗಿದ್ದು, ಶಿವನಗೌಡ ತಂದೆ ಬಾಬಾಗೌಡ ಬೋರಾವತ ಇವರು ತೇರಿನ ವೃತ್ತಕ್ಕೆ, ಕಳಸ ಹಿಡುವವರು, ವಿಜೃಂಭಣೆಯಿಂದ ಮೇರವಣಿಗೆಯ ಮೂಲಕ ನೆರವೇರಿಸುವವರು, ಕಿಶೋರಗೌಡ ತಂದೆ ಭೀಮನಗೌಡ ಇವರು ತೇರಿನ ಹಗ್ಗದ ಸೇವೆ ಹಾಗೂ ದೊಡ್ಡ ಪಲ್ಲಕ್ಕಿಯ ಸೇವೆಯನ್ನು ಸಲ್ಲಿಸುವವರು. ಸಾಯಂಕಾಲ ಪಲ್ಲಕ್ಕಿಯ ಸಮೇತವಾಗಿ ದೇವಸ್ಥಾನದ ಆವರಣದಿಂದ ಪಾದಗಟ್ಟಿಯವರೆಗೆ ರಥೋತ್ಸವ ಸಾಗುವದು ಈ ಜಾತ್ರೆಯ ಕಾರ್ಯಕ್ರಮದಲ್ಲಿ ಸಕಲ ಕೋರವಾರ ಗ್ರಾಮದ ಭಕ್ತಾದಿಗಳು ಹಾಗೂ ಸುತ್ತ ಮುತ್ತಲಿನ ಗ್ರಾಮದ ಜನರು ಉತ್ತತ್ತಿ, ಹೂವು, ಜಯಗೋಷಣೆಯ ಮೂಲಕ ರಥೋತ್ಸವ ವಿಜೃಂಭಣೆಯಿಂದ ಸಾಗುವದು.ಹಾಗೆ ಪ್ರತಿದಿನ ರಾತ್ರಿ ವಿವಿಧ ಸಂಗೀತ ಕಲಾವಿದರಿಂದ ಸಂಗೀತ ಸೇವೆ ಜರಗುವುದು, ಈ ಜಾತ್ರೆಗೆ ಮಹಾರಾಷ್ಟ್ರ, ಗೋವಾ, ಕರ್ನಾಟಕದ ವಿವಿದ ಜಿಲ್ಲೆಗಳಿಂದ ಜಾತ್ರೆಯಲ್ಲಿ ಪಾಲ್ಗೊಂಡು ಪ್ರಾಣದೇವರ ಕೃಪೆಗೆ ಪಾತ್ರರಾಗುವರು.
ವರದಿಗಾರ:ಸಿದ್ದರಾಮ ಎಮ್ ಬೇವಿನಮಟ್ಟಿ