ಅಮೃತ ಮಿತ್ರ ಕಾರ್ಯಕ್ರಮದ ಅಡಿಯಲ್ಲಿ ಮರಗಳ ರಕ್ಷಣೆಗೆ ಮಹಿಳೆಯರು ಎಂಬ ಕಾರ್ಯಕ್ರಮ ಉತ್ತಮ ಕಾರ್ಯಕ್ರಮ ಆಗಿದ್ದು ಮಹಿಳೆಯರು ತಮ್ಮ ತಮ್ಮ ಕುಟುಂಬಗಳನ್ನು ಹೇಗೆ ಉತ್ತಮ ರೀತಿಯಲ್ಲಿ ಸಾಗಿಸುತ್ತಾರೋ ಅದೇ ರೀತಿ ಮಹಿಳೆಯ ಹೆಸರು ತಾಯಂದಿರು ತಮ್ಮ ಅಕ್ಕತಂಗಿಯರ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ಉತ್ತಮ ಕಾರ್ಯ ಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ ಇದರಿಂದ ಸರ್ಕಾರ ಚಿಂತನೆ ಮಾಡಿ ಈ ಯೋಜನೆ ಜಾರಿಗೆ ತಂದಿದೆ ಮಹಿಳೆಯರು ಈ ರೀತಿ ಗಿಡಗಳನ್ನು ನೆಟ್ಟಿ ಹಸಿರು ಯುಕ್ತ ನಗರಗಳನ್ನು ನಿರ್ಮಾಣ ಮಾಡಿ ಪರಿಸರ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಹೆಚ್ಚಾಗಿದೆ ಹೀಗಾಗಿ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅರಸಿಕೆರೆ ನಗರಸಭೆಯ ಅಧ್ಯಕ್ಷರಾದ ಎಮ್ ಸಮೀವುಲ್ಲಾ ತಿಳಿಸಿದರು
ಅರಸೀಕೆರೆ ನಗರದ ಜೇನುಕಲ್ ನಗರದ ಬಳಿ ಇರುವ ನಗರ ಸಭೆಯ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈಗಾಗಲೇ ಅರಸೀಕೆರೆ ನಗರದಲ್ಲಿ ಎರಡು ಮಹಿಳಾ ಸ್ವಸಹಾಯ ಸಂಘಗಳಿಗೆ ಉದ್ಯಾನವನಗಳ ನಿರ್ವಹಣೆಗಾಗಿ ನಗರಸಭಾ ವತಿಯಿಂದ ಜವಾಬ್ದಾರಿ ನೀಡಿದ್ದು ಈ ಕಾರ್ಯವನ್ನು ಸ್ವಸಾಯ ಸಂಘದ ಮಹಿಳೆಯರು ಯಶಸ್ವಿಯಾಗಿ ಮತ್ತು ಶಿಸ್ತಿನಿಂದ ನಡೆಸುತ್ತಿದ್ದಾರೆ ಮಹಿಳೆಯರಿಗೆ ಯಾವುದೇ ಜವಾಬ್ದಾರಿಗಳನ್ನು ನೀಡಿದಲ್ಲಿ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಾರೆ ಎನ್ನುವುದಕ್ಕೆ ಈ ಕಾರ್ಯಕ್ರಮ ಉದಾಹರಣೆಯಾಗಿದೆ ಎಂದರು ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ಉಪಾಧ್ಯಕ್ಷರಾದ ಮನೋಹರ್ ನಗರಸಭೆ ಸದಸ್ಯರುಗಳಾದ ಪ್ರೇಮ. ಅನ್ನಪೂರ್ಣ. ದರ್ಶನ್ . ನಗರ ಸಭೆಯ ಸಮುದಾಯ ಸಂಘಟನಾಧಿಕಾರಿಗಳಾದ ರಾಜಶೇಖರ್ ಉಪಸ್ಥಿತರಿದ್ದರು
ವರದಿ. ಎಂ ಡಿ ನಾಸಿರ್ ಅರಸೀಕೆರೆ.
