ನಂಜನಗೂಡು ಪಟ್ಟಣವು ಅತಿ ವೇಗವಾಗಿ ಬೆಳೆಯುತ್ತಿದ್ದು, ವಾಹನಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು, ರಸ್ತೆಯನ್ನು ದಾಟಿಯಲ್ಲಿ ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ. ಜೀವವನ್ನು ಕೈಯಲ್ಲಿ ಹಿಡಿದು ರಸ್ತೆ ಗಾಟುವ ಪ್ರಸಂಗ ಎದುರಾಗಿದ್ದು ದಿನನಿತ್ಯ, ಸಂಚಾರವನ್ನು ನಿಯಂತ್ರಿಸುವಲ್ಲಿ ಪಟ್ಟಣದ ಸಂಚಾರಿ ಪೊಲೀಸರು ಯಶಸ್ವಿಯಾಗಿದ್ದು, ಸಾರ್ವಜನಿಕರು ಇವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಆದರೆ ಮೈಸೂರು ನಂಜನಗೂಡು ಊಟಿ ರಸ್ತೆಯಲ್ಲಿ ಸಂಚಾರಿ ಪೊಲೀಸ್ ಠಾಣೆ ಮುಂಭಾಗ ರಸ್ತೆಯನ್ನು ದಾಟಲು ಸಾರ್ವಜನಿಕರು ತುಂಬಾ ಕಷ್ಟ ಪಡಬೇಕಾಗಿದ್ದು, ಅಪಘಾತವಾಗುವ ಸಂಭವ ಹೆಚ್ಚಾಗಿರುತ್ತದೆ. ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆ ಸಂಚಾರಿ ಠಾಣೆಯ ಮುಂಭಾಗದಲ್ಲಿ ನಂದಿನಿ ಹಾಲು ಮಾರಾಟ ಮಳಿಗೆ ಇದ್ದು, ಪೋಲಿಸ್ ವಸತಿಗೃಹದ ವಾಸಿಗಳು ಎಲ್ಲರೂ ಹಾಲನ್ನು ತೆಗೆದುಕೊಳ್ಳಲು ರಸ್ತೆನು ದಾಟಲು ಹಾಲು ಮಾರಾಟ ಮಳಿಗೆಗೆ ಹೋಗಲು ತುಂಬಾ ತ್ರಾಸದಾಯಕವಾಗಿರುತ್ತದೆ. ಆದ್ದರಿಂದ ಸಂಚಾರಿ ಪೊಲೀಸ್ ಠಾಣೆಯ ಮುಂದಾಗ ರಸ್ತೆನು ದಾಟಲು ವಾಹನಗಳು ನಿಧಾನವಾಗಿ ಚಲಿಸುವಂತೆ ರಸ್ತೆ ಚಿಕ್ಕದಾದ ರಸ್ತೆ ಉಬ್ಬನ್ನು ಮಾಡಲು ಸಾರ್ವಜನಿಕರು ಪತ್ರಿಕೆ ಮೂಲಕ ಪುರಸಭೆಯವರನ್ನು ಸಾರ್ವಜನಿಕರುಒತ್ತಾಯ ಮಾಡಿದ್ದಾರೆ.
