ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸರ್ಕಾರಿ ನೌಕರರ ಜಿಲ್ಲಾ ಕ್ರೀಡಾಕೂಟವು ದಿನಾಂಕ 23 -3-2025 ರಂದು ಸದರಿ ಕ್ರೀಡಾಕೂಟದಲ್ಲಿ ಹಲವು ವಿಭಾಗದ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ರು . ಸದರಿ ಕ್ರೀಡಾಕೂಟದಲ್ಲಿ ಸುರಪೂರ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ ಕಬಡ್ಡಿ ಪ್ರಥಮ ಸ್ಥಾನ, ವಾಲಿಬಾಲ್ ಪ್ರಥಮ ಸ್ಥಾನ, ಖೋ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ವೈಯಕ್ತಿಕ ಆಟವಾದ ಚೆಸ್ಸ ದಲ್ಲಿ ಪ್ರಥಮ ಸ್ಥಾನ ದಶವಂತ್, 100 ಮೀಟರ್ ಓಟದಲ್ಲಿ ಶಿವರಾಜ್ ದ್ವಿತೀಯ ಸ್ಥಾನ, ಬಾರ ಎತ್ತುವ ಸ್ಪರ್ಧೆಯಲ್ಲಿ 70 ಕೆಜಿ ತೂಕ ಈರಣ್ಣ ಮೇಟಿ ಇವರು ಪ್ರಥಮ ಸ್ಥಾನ ಪಡೆದಿದ್ದು, ಇನ್ನೂ ಅನೇಕ ವ್ಯಕ್ತಿಗಳ ಆಟಗಳಲ್ಲಿ ಸುರಪುರ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಅನೇಕ ಬಹುಮಾನಗಳನ್ನು ಪಡೆದಿದ್ದು ಪ್ರಥಮ ಸ್ಥಾನ ಪಡೆದ ಆಟಗಾರರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಸಿಬ್ಬಂದಿ ವರ್ಗದವರನ್ನು ತಾಲೂಕ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಕಲ್ಯಾಣ ಅಧಿಕಾರಿಗಳಾದ ತಿಪ್ಪಾರೆಡ್ಡಿ ಮಾಲಿಪಾಟೀಲ್ ಇವರು ಸಂತಸ ಹಂಚಿಕೊಂಡರು ಮುಂಬರುವ ದಿನಗಳಲ್ಲಿ ನಮ್ಮ ಸಿಬ್ಬಂದಿ ವರ್ಗದವರು ರಾಜ್ಯಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನದಲ್ಲಿ ಗೆಲ್ಲುವ ವಿಶ್ವಾಸ ತಿಳಿಸಿದರು, ಹಿಂದುಳಿದ ವರ್ಗದ ನಿಲಯ ಮೇಲ್ವಿಚಾರಕರಾದ ಹನುಮಗೌಡ ಮಕಾಶಿ, ವೆಂಕಣ್ಣ ಟನಕೇದಾರ್,ಮಾದೇವಿ ಕಟ್ಟಿಮನಿ,ಬಸವರಾಜ್ ನಾಯಕ್, ಶಾಂತಾಬಾಯಿ, ನೀಲಮ್ಮ ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದರು,
ವರದಿ:ಸಿದ್ರಾಮ ಬೇವಿನಮಟ್ಟಿ