ಲಕ್ಷ್ಮೇಶ್ವರ; ಜೂಲೈ 29.ಕನ್ನಡ ನೆಲ ಜಲ ಭಾಷಗಳಿಗಾಗಿ
ಕರ್ನಾಟಕದಲ್ಲಿ ನಿರಂತರ ಹೋರಾಟ ಮಾಡುವ ಕನ್ನಡ ಪದ ಸಂಘಟನೆಗಳ ಹೋರಾಟಗಾರರನ್ನು ಸರ್ಕಾರ ಬೆಂಬಲಿಸುವ ಕೆಲಸ ಮಾಡಬೇಕು ಎಂದು
ಶ್ರೀ ಮ.ನಿ.ಪ್ರ ಚನ್ನವೀರ ಮಹಾಸ್ವಾಮಿಗಳು
ವಿರಕ್ತಮಠ ಹೂವಿನ ಶಿಗ್ಲಿ ಪೂಜ್ಯರು ಹೇಳಿದರು
ಅವರು ಪಟ್ಟಣದ ಚನ್ನಮ್ಮನವನ ಕಲ್ಯಾಣ ಮಂಟಪದಲ್ಲಿ ಭಾನುವಾರ ಸ್ಟಾರ ಆಫ್ ಕರ್ನಾಟಕ ನ್ಯೂಸ್ ಚಾನೆಲ್ 3 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕನ್ನಡಾಂಬೆಗೆ ಗಾನ ನಮನ ಸರಿಗಮಪ ರಾಗ ರಂಜನಿ ಗಾಯನ ಸ್ಪರ್ಧೆಯ
2 ಆವೃತ್ತಿಯ ಮೊದಲ ಸುತ್ತು ಹಾಗೂ ಕರ್ನಾಟಕ ಭಾಷೆ ನೆಲ ಜಲ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಜಿ ಎಸ್ ಗಡ್ಡದೇವರಮಠ ಅವರು ಮಾತನಾಡಿ ಇಂದಿನ ಸಮಾಜದಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಮಾಧ್ಯಮ ಮತ್ತು ಪತ್ರಿಕೆಯ ಮೂಲಕ ವರದಿ ಮಾಡಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು ಅವುಗಳ ಪರಿಹಾರ ಒದಗಿಸುವ ಕೆಲಸ ಮಾಡುತ್ತಿರುವ ಪತ್ರಿಕಾ ಮಾಧ್ಯಮಗಳ ಕಾರ್ಯ ಮಹತ್ವದ್ದಾಗಿದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ್ ಮಾಗಡಿ ಅವರು ಮಾತನಾಡಿ
ಯಾವುದೇ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಹೆದರದೆ ನೇರವಾಗಿ ವರದಿ ಮಾಡುವ ಮಾಧ್ಯಮ ಮತ್ತು ಪತ್ರಿಕೆ ಕಾರ್ಯ ಮಹತ್ವದಾಗಿದೆ ಆವರು ತಮ್ಮ ಜೀವನದ ಹಂಗನ್ನು ತೆರೆದು ನೈಜ ವರದಿಯನ್ನು ಬಿತ್ತರಿಸುವ ಮೂಲಕ ಹಲವಾರು ಅಭಿವೃದ್ಧಿ ಕೆಲಸಗಳು ಉತ್ತಮವಾಗಿ ಸಾಗಲು ಕಾರಣವಾಗಿವೆ ಎಂದರು
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಗದಗ್ ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷೆ ಉಷಾ ದಾಸರ, ಕರ್ನಾಟಕ ಸ್ಟಾರ್ ಆಫ್ ನ್ಯೂಸ್ ಚಾನೆಲ್ ಸಂಪಾದಕ ಮೆಹಬೂಬ್ ಹುಸೇನ್ ಮುಲ್ಲಾ ರೈತ ಸಂಪರ್ಕ ಅಧಿಕಾರಿ ಚಂದ್ರಶೇಖರ್ ನರಸಮ್ಮನವರ, ನಿವೃತ್ತ ಶಿಕ್ಷಕರಾದ ಸಿ.ಜಿ. ಹಿರೇಮಠ,ಹೊನ್ನಪ್ಪ ವಡ್ಡರ, ನಾಗಣ್ಣ ಚಿಂಚಲಿ ,ಕನ್ನಡಪರ ಸಂಘಟನೆಯ ಅಧ್ಯಕ್ಷರಗಳಾದ ಸುರೇಶ್ ನಂದೆಣ್ಣವರ, ಮಹೇಶ್ ಕಲಘಟಿಗಿ, ಶರಣು ಗೋಡಿ, ಫಕೀರೇಶ ಭಜಕ್ಕನವರ ,ಸದಾನಂದ ನಂದೆಣ್ಣವರ ,ಜಾಕಿರ್ ಹುಸೇನ್ ಹವಾಲ್ದಾರ್,ಇಸ್ಮಾಯಿಲ್ ಆಡೂರು, ರಮೇಶ ಹಂಗನಕಟ್ಟಿ, ಬಸವರಾಜ್ ಹಿರೇಮನಿ, ಸುರೇಶ್ ಹಟ್ಟಿ, ಎಂ ಎಂ ಮುಳುಗುಂದ, ಸೇರಿದಂತೆ ಇನ್ನು ಅನೇಕ ಕನ್ನಡ ಪರ ಸಂಘಟನೆ ಮುಖಂಡರು ಪಾಲ್ಗೊಂಡಿದ್ದರು.
