ನಂಜನಗೂಡಿನ ಪೊಲೀಸ್ ವಸತಿ ಗೃಹದಲ್ಲಿ ಹರ್ಷವರ್ಧನ್ ಆರ್ಯನ್ನು ಆಯುಷ್ ಜೀವನ್ ಮುಂತಾದ , ಶಾಲಾ ವಿದ್ಯಾರ್ಥಿಗಳಿಂದ ಬುಧವಾರ ಬೆಳಿಗ್ಗೆ ಅರ್ಚಕರು ಎರಡನೇ ವರ್ಷದ ಗೌರಿ ಗಣಪತಿಯನ್ನು ಪೂಜೆ ಹೋಮ ಹವನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ಮಕ್ಕಳು ಗಣಪತಿ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ನೆರೆದಿದ್ದ ಭಕ್ತರನ್ನು ಸಂತೋಷಪಡಿಸಿದರು. ನಂತರ ನೆರೆದಿದ್ದ ಎಲ್ಲ ಭಕ್ತರಿಗೂ ಪ್ರಸಾದ ವಿನಿಯೋಗ ವಿತರಿಸಲಾಯಿತು. ಐದು ದಿನಗಳ ಕಾಲ ಗಣಪತಿಯನ್ನು ಭಕ್ತಿ ಭಾವಗಳೊಂದಿಗೆ ಪೂಜಿಸಿ ನೀರಿನಲ್ಲಿ ವಿಸರ್ಜಿಸಲಾಗುವುದು.
