ಹೂವಿನ ಹಡಗಲಿ :ಜನಪರ ಚಳವಳಿ ಸಂಗಾತಿ ಮತ್ತಿಹಳ್ಳಿ ಬಸವರಾಜ ರವರ ತಾಯಿ ಮತ್ತಿಹಳ್ಳಿ ಸುವರ್ಣಮ್ಮ (82) ನಿಧನರಾದರು. ಅಂಗನವಾಡಿ ಬಿಸಿಯೂಟ ಕಟ್ಟಡ ಕಾರ್ಮಿಕರು
ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿ ಸಂಘಟನೆಗಳು ಹತ್ತು ಹಲವಾರು ಪ್ರಗತಿಪರ ಸಂಘಟನೆಗಳ ಬೇರು ನೆಟ್ಟು ಬೆಳೆಸಿ ಹೆಮ್ಮರವಾಗಲು ಈ ಕುಟುಂಬದ ಕೊಡುಗೆ ಅತ್ಯಮೂಲ್ಯ. ಸಿ ಪಿ ಐ ಪಕ್ಷದ ರಾಜ್ಯ ನಾಯಕರನ್ನು ಹೂವಿನ ಹಡಗಲಿಗೆ ಕರೆಸಿ ಅನೇಕ ಹೋರಾಟಗಳನ್ನು ಸಂಘಟಿಸಿದ್ದ ಹೆಗ್ಗಳಿಕೆ ಮತ್ತಿಹಳ್ಳಿ ಬಸವರಾಜ ರವರದು. ಜನಪರ ಹೋರಾಟಗಳು ಸುವರ್ಣಕ್ಷಾರದಲ್ಲಿ ದಾಖಲಾಗುವಂತವು. ಹರಪನಹಳ್ಳಿ ಹೂವಿನ ಹಡಗಲಿ ಭಾಗದಲ್ಲಿ ಕಮ್ಯೂನಿಸ್ಟ್ ಪಕ್ಷದ ಎ ಐ ಟಿ ಯು ಸಿ ಎ ಐ ವೈ ಎಫ್ ಡಿ ವೈ ಎಫ್ ಇಪ್ಟಾ ಅಂಗನವಾಡಿ ಫೆಡರೇಷನ್ ಅಕ್ಷರ ದಾಸೋಹ ಸಹಾಯಕರ ಫೆಡರೇಷನ್ ಕಟ್ಟಡ ಕಾರ್ಮಿಕರ ಒಕ್ಕೂಟ ದೇವದಾಸಿ ಮಹಿಳೆಯರ ಸಂಘಟನೆ ಅನೇಕ ಸಂಘಟನೆಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ಇವರದು. ಸಂತಾಪ: ಕಾಮ್ರೇಡ್ ಸುವರ್ಣಮ್ಮ ನಿಧನಕ್ಕೆ ತಾಲೂಕು ಎ ಐ ಟಿ ಯು ಸಿಯ ತಾಲೂಕು ಅಧ್ಯಕ್ಷೆ ಬಿ.ಜಯಲಕ್ಷ್ಮಿ ಬಸವರಾಜ ಸಂಶಿ ಸುರೇಶ ಹಲಗಿ, ಮಂಜುಳಾ, ಕಮಲಮ್ಮ ಅಂಗನವಾಡಿ ಫೆಡರೇಷನನ ಪದಾಧಿಕಾರಿಗಳು ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯಾಧ್ಯಕ್ಷ ಎಂ ದಯಾನಂದ ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆಯ ಅಧ್ಯಕ್ಷ ಬಿಚ್ಚುಗತ್ತಿ ಖಾಜಾ ಹುಸೇನ್, ಸಿಂಚನ ಪ್ರಕಾಶನದ ಸುರೇಶ ಅಂಗಡಿ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್ . ಬಿಸಿಯೂಟ ಸಂಘಟನೆ ಜಿಲ್ಲಾಧ್ಯಕ್ಷೆ ಹೆಚ್.ಅನುಸೂಯ.ಪಿ.ಕವಿತಾ.ಕರ್ನಾಟಕ ಪ್ರೆಸ್ ಕ್ಲಬ್ ನ ಪದಾಧಿಕಾರಿಗಳು ಇತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
