ಜನವರಿ 26 ರಂದು ನವದೆಹಲಿಯ ಕರ್ತವ್ಯ ಪಥ್ ನಲ್ಲಿ ನಡೆಯಲಿರುವ ರಾಷ್ಟ್ರ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಹರಿಹರ ತಾಲ್ಲೂಕು ಕೆ. ಬೇವಿನಹಳ್ಳಿ ಗ್ರಾಮದ ಡಿ. ಕೆ.ಉಮೇಶ್ ಇವರ ಪುತ್ರಿ ಕು. ಪಲ್ಲವಿ. ಡಿ. ಯು. ಇವರು ದಾವಣಗೆರೆ ನಗರದ ಬಿ. ಎಸ್ .ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ. ಕಾಂ. ಓದುತ್ತಿದ್ದು ಇವರು ಎನ್.ಎಸ್.ಎಸ್. ಘಟಕದಿಂದ ಆಯ್ಕೆ ಆಗಿರುತ್ತಾರೆ, ಇವರಿಗೆ ತಂದೆ – ತಾಯಿ, ಬಂಧು ಮಿತ್ರರು, ಸಂಬಂಧಿಗಳು ಹಾಗೂ ಕೆ .ಬೇವಿನಹಳ್ಳಿ ಸಮಸ್ತ ಊರಿನ ಗ್ರಾಮಸ್ಥರು ಶುಭ ಕೋರಿರುತ್ತಾರೆ.
ವರದಿ:- ವಿನಾಯಕ ಜಿ ಎಮ್. ಹರಿಹರ.