ಚುಂಚನಕಟ್ಟೆ ಸಮೀಪದ ಚಿಬುಕಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಮೈಮೂಲ್ ನಿರ್ದೇಶಕ ಎ. ಟಿ ಸೋಮಶೇಖರ್ ಉದ್ಘಾಟಿಸಿ ಮಾತನಾಡಿದ ಅವರು. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಜನರ ಆರ್ಥಿಕ ಪ್ರಗತಿಯ ಮುಖ್ಯ ಕಸುಬಾಗಿದ್ದು ಪ್ರತಿಯೊಬ್ಬ ಉತ್ಪಾದಕರು ರಾಸುಗಳಿಗೆ ಸಮತೋಲನ ಆಹಾರ ನೀಡುವುದರಿಂದ ಗುಣಮಟ್ಟದ ಹಾಲು ಪಡೆಯಲು ಸಾಧ್ಯ. ಗುಣಮಟ್ಟದಿಂದ ಕೂಡಿದ ಹಾಲು ಪೂರೈಕೆಯಿಂದ ಹೆಚ್ಚು ಲಾಭ ಪಡೆದು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವುದರ ಜತೆಗೆ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
ಗ್ರಾಮೀಣ ಜನರ ಜೀವನ ಮಟ್ಟವನ್ನು ಅಭಿವೃದ್ಧಿಪಡಿಸುವಲ್ಲಿ ಹೈನುಗಾರಿಕೆ ಪ್ರಮುಖ ಉದ್ಯೋಗವಾಗಿದೆ. ಉತ್ತಮ ದರ್ಜೆಯ ಹಾಲು ಪೂರೈಕೆ ಮಾಡಿದಷ್ಟು ಹೆಚ್ಚು ಲಾಭವನ್ನು ಉತ್ಪಾದಕರು ಪಡೆಯುತ್ತಾರೆ. ಪೌಷ್ಟಿಕ ಆಹಾರವನ್ನು ರಾಸುಗಳಿಗೆ ನೀಡಿ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು. ಅಲ್ಲದೆ ವಿಮೆ, ಲಸಿಕೆ ಹಾಕಿಸುವ ಮೂಲಕ ರಾಸುಗಳ ಅರೋಗ್ಯ ಕಾಪಾಡ ಬೇಕು ಎಂದ. ಅವರು. ಸಂಘಗಳು ಹೈನುಗಾರರ ಮೇಲೆ ಅವಲಂಬಿತವಾಗಿವೆ ಮೈಮೂಲ್ ನಿಂದ ಸಿಗುವ ಸಹಾಯಧನ ಹಾಗೂ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಉಮೇಶ್ ಪೂಜಾರಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಲ ಮನೋಹರ್, ಜಿಲ್ಲಾ ಮೈಮುಲ್ ವ್ಯವಸ್ಥಾಪಕ ಕರಿಬಸವರಾಜು, ತಾಲೂಕು ಸಹಾಯಕ ವ್ಯವಸ್ಥಾಪಕ ಪ್ರವೀಣ್ ಪತ್ತರ್ ಅಭಿಲಾಶ್, ಸಂತೋಷ, ಚಿಬುಕಹಳ್ಳಿ ಬಸವರಾಜು, ಮಹದೇವ, ಗಿರಿಜಮ್ಮ, ಸಂಘದ ಅಧ್ಯಕ್ಷ ಸಿ. ಟಿ ಪಾಪಣ್ಣ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಜವರಯ್ಯ, ರಾಮೇಗೌಡ, ರಾಜಪ್ಪ, ಪುಟ್ಟೇಗೌಡ, ಸೋಮೇಗೌಡ, ಶೇಷಾ ಕುಮಾರ್, ರವೀಶ, ಸೋಮಶೇಖರ್, ಪ್ರಸನ್ನ, ಮಹಾದೇವಮ್ಮ, ಕಾರ್ಯದರ್ಶಿ ಲೋಕೇಶ್, ಹಾಲು ಪರೀಕ್ಷಕ ಮಂಜೇಶ್, ಸಹಾಯಕ ಜಗದೀಶ್ ಸೇರಿದಂತೆ ಮತ್ತಿತರರು ಇದ್ದರು.
