ನಾಗಮ್ಮ ಟೌನ್ ಕ್ಲಸ್ಟರ್ ನಂಜನಗೂಡು ಇವರ ವತಿಯಿಂದ ಈ ವರ್ಷದಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಪಟ್ಟಣದ ಕನಕದಾಸ ಸರಕಾರಿ ಕಿರಿಯಾ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ನಡೆಸಲಾಯಿತು. ಈ ಪ್ರತಿಭಾ ಕಾರಂಜಿ ಹಬ್ಬದಂತೆ ಸಂಭ್ರಮವಾಗಿ ನಡೆಯಿತು ಅಭಿನಯ ಗೀತೆ, ಭಾವಗೀತೆ, ಏಕ ಪಾತ್ರ ಅಭಿನಯ, ಛದ್ಮವೇಷ ಸ್ಪರ್ಧೆ, ದೇಶಭಕ್ತಿ ಗೀತೆ, ಕಂಠಪಾಠ ಮುಂತಾದ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸ್ಪರ್ಧೆಯಲ್ಲಿ ಛದ್ಮವೇಷ ಸ್ಪರ್ಧೆಯಾದ ಅಯ್ಯಪ್ಪ ಸ್ವಾಮಿ ವೇಷದಾರಿಯು ಪ್ರಥಮ ಸ್ಥಾನ ಹೆಚ್ಚು ಪ್ರಶಂಸೆಯನ್ನು ಪಡೆಯಿತು. ಈ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಭಾಗ್ಯ ಲಕ್ಷ್ಮಿ, ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು ಸಹಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
