ದೇವೇಂದ್ರಪ್ಪಗೌಡ ಪೊಲೀಸ್ ಪಾಟೀಲ್ ಇವರಿಗೆ ಸನ್ಮಾನ.
ಸುರುಪುರ ತಾಲೂಕಿನ ಮಾಲಗತ್ತಿ ಗ್ರಾಮದ ಇತ್ತೀಚೆಗೆ ನಡೆದ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ರೈತ ಮುಖಂಡರಾದ ಶ್ರೀ ದೇವೇಂದ್ರಪ್ಪಗೌಡ ಪೋಲಿಸ್ ಪಾಟೀಲ್ ರವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗೋಗಿಯ ರೈತ ಮುಖಂಡರಾದ ಮಲ್ಲಣ್ಣಗೌಡ ಪರಿವಾಣ,ಪತ್ರಕರ್ತರಾದ ನಾಗಭೂಷಣ ಯಾಳಗಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಯುವ ಘಟಕದ ಕಾರ್ಯಕಾರಣಿ ಸದಸ್ಯರಾದ ಕಲ್ಯಾಣ ಶೆಟ್ಟಿ ಅಂಗಡಿ, ಗೋಗಿ ಜೈನ್ ಸಮಾಜದ ಅಧ್ಯಕ್ಷರಾದ ಗೌತಮ ಜೈನ್, ಯುವ ಮುಖಂಡರಾದ ಶಾಂತಪ್ಪ ಕರಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
