ಸುರಪುರ: ಭಾರತೀಯ ವಕೀಲರ ಪರಿಷತ್ ಅಧ್ಯಕ್ಷ ಸದಾಶಿವ ರೆಡ್ಡಿ ಇವರ ಮೇಲಿನ ಹಲ್ಲೆಯನ್ನು ಖಂಡಿಸಿ ಸುರುಪುರು ವಕೀಲರ ಸಂಘದಿಂದ ತಸಿಲ್ದಾರ್ ಕಾರ್ಯಾಲಯದ ಮುಂದೆ ದಿನಾಂಕ :21-4-2025 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಭಾರತೀಯ ವಕೀಲರ ಪರಿಷತ್ತಿನ ಅಧ್ಯಕ್ಷರು ಹಾಗೂ ಕರ್ನಾಟಕದ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು, ಹಿರಿಯ ನ್ಯಾಯವಾದಿಗಳಾದ ಶ್ರೀ ಸದಾಶಿವ ರೆಡ್ಡಿ ಇವರ ಮೇಲೆ ದಿನಾಂಕ :16-4-2025ರಂದು ತಮ್ಮ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಅಪರಿಚಿತ ವ್ಯಕ್ತಿಗಳು ಕಾರ್ಯಾಲಯ ಒಳಗಡೆ ಪ್ರವೇಶ ಮಾಡಿ ಏಕಾಏಕಿ ಅವರ ಮೇಲೆ ಗಂಭೀರವಾಗಿಹಲ್ಲೆ ಮಾಡಿರುವದನ್ನು ಖಂಡಿಸಿ ಸುರಪುರ ವಕೀಲರ ಸಂಘದ ಸದಸ್ಯರು ಕೈ ಗೆ ಕೆಂಪು ಪಟ್ಟಿಯನ್ನು ಕಟ್ಟಿಕೊಂಡು ಮೌನ ಪ್ರತಿಭಟನೆ ಮಾಡಿದರು.
ವಕೀಲರ ಸಂಘದ ಅಧ್ಯಕ್ಷರು ಹಾಗೂ ಹಿರಿಯ ವಕೀಲರು ಮಾತನಾಡಿ ಈ ಅಲ್ಲೇ ಮಾಡಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು ಇವರುಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಗೃಹ ಸಚಿವರಿಗೆ ಬರೆದ ಮನವಿ ಪತ್ರವನ್ನು ಮಾನ್ಯ ತಶಿಲ್ದಾರ್ ಹುಸೇನ್ ಸಾಬ್ ಎ ಸರಕಾವಸ್ ಇವರ ಮೂಲಕ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ರಮಾನಂದ್ ಕವಳಿ, ಉಪಾಧ್ಯಕ್ಷರಾದ ಎಚ್ ವೈ ಕಟ್ಟಿಮನಿ, ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಮಂಗಿಹಾಳ, ನಂದಕುಮಾರ್ ಕನ್ನಳ್ಳಿ, ಸಂತೋಷ್ ಕುಮಾರ್ ಗಾರಂಪಳ್ಳಿ, ಹಿರಿಯ ವಕೀಲರಾದ ದೇವಿಂದ್ರಪ್ಪ ಬೇವಿನಕಟ್ಟಿ,ವಿ ಸಿ ಪಾಟೀಲ್, ಯಂಕಾರೆಡ್ಡಿ ಹವಾಲ್ದಾರ್, ಮನೋಹರ್ ಕುಂಟೋಜಿ, ಚೆನ್ನಪ್ಪ ಹೂಗಾರ್, ನಾಗರೆಡ್ಡಿ, ಸಂಗಣ್ಣ ಬಾಕ್ಲಿ, ಸಂಗಮೇಶ ಪಾಟೀಲ್, ಗೋಪಾಲ್ ತಳವಾರ, ಹಾಗೂ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
