ಮಡಿಕೇರಿ ನಗರದ ವಿಷ್ಣುಸೇನಾ ಸಮಿತಿಯ ವತಿಯಿಂದ ಹೋಟೆಲ್ ಪ್ಯಾರಿಸ್ ನಲ್ಲಿ ಡಾಕ್ಟರ್ ವಿಷ್ಣುವರ್ಧನ್ ರವರ 75ನೇ ವರ್ಷದ ಹುಟ್ಟುಹಬ್ಬದ ಪೂರ್ವಭಾವಿ ಸಭೆ ನಡೆಯಿತು. ವಿಷ್ಣುಸೇನಾ ಸಮಿತಿಯ ಅಧ್ಯಕ್ಷರಾದ ರಫೀಕ್ ದಾದಾ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಬಗ್ಗೆ ವಿಷ್ಣು ಸಮಾಧಿಯ ಬಗ್ಗೆ ಮತ್ತು ಹುಟ್ಟು ಹಬ್ಬದ ವಿಷಯಗಳ ಚರ್ಚೆ ನಡೆಯಿತು. ಸಭೆಯಲ್ಲಿ ಹಾಜರಿದ್ದ ಸಮಿತಿಯ ಅಧ್ಯಕ್ಷರಾದ ರಫೀಕ್ ದಾದಾ, ಮಂಜುನಾಥ್, ನಾಗರಾಜ್, ಅನ್ಸಾರ್, ರಮೇಶ್ ರೈ, ಫಾರೂಕ್, ಆಟೋ ಲತೀಫ್ ಹಾಗೂ ಇತರರು ಭಾಗವಹಿಸಿದ್ದರು
