ಹುಣಸೂರುಗ್ರಾಮ ಠಾಣಾ ಸ್ಥಳಗಳನ್ನ ಗುರುತಿಸಿ ಹದ್ದುಬಸ್ತು ಮಾಡಿ ಸಾರ್ವಜನಿಕರಿಗೆ ನಿವೇಶನಗಳನ್ನಾಗಿ ನಿರ್ಮಿಸಿ ಕೊಡುವ ವಿಚಾರದಲ್ಲಿ ಹುಣಸೂರು ತಾಲೂಕು ಇಓ ಆಸಕ್ತಿ ತೋರಿದ್ದಾರೆ.ಈ ಸಂಬಂಧ ಹುಣಸೂರು ತಾಲೂಕು ವ್ಯಾಪ್ತಿಯ ಗ್ರಾಮ ಠಾಣಾ ಜಾಗಗಳನ್ನ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಇಓ ರವರು ತಹಸೀಲ್ದಾರ್ ಗೆ ಜೂನ್12,2025 ರಂದು ಪತ್ರ ಬರೆದಿದ್ದಾರೆ.ಪತ್ರ ಬರೆದು 5 ತಿಂಗಳು ಕಳೆದರೂ ಇದುವರೆಗೆ ತಹಸೀಲ್ದಾರ್ ಯಾವುದೇ ಕ್ರಮ ಕೈಗೊಂಡಿಲ್ಲ.ಇಓ ಪತ್ರಕ್ಕೆ ತಹಸೀಲ್ದಾರ್ ಡೋಂಟ್ ಕೇರ್ ಎಂದು ನಿರ್ಲಕ್ಷಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮೇಲ್ನೋಟಕ್ಕೆ ಹುಣಸೂರು ತಾಲೂಕಿನ 60 ಗ್ರಾಮ ಠಾಣಾ ಜಾಗಗಳು ಖಾಸಗಿ ವ್ಯಕ್ತಿಗಳ ಕಪಿಮುಷ್ಠಿಯಲ್ಲಿದೆ.ಇವುಗಳನ್ನ ಬಿಡಿಸಿಕೊಂಡು ಬಡವರಿಗಾಗಿ ಬಡಾವಣೆ ರಚಿಸಿ ನಿವೇಶನಗಳನ್ನ ವಿತರಿಸಿ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುವಂತೆ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಮನವಿ ಮಾಡಲಾಗಿತ್ತು.ಈ ಹಿನ್ನಲೆ ಇಓ ರವರು ಅಂತಹ ಜಾಗಗಳನ್ನ ಗುರಿತಿಸಿ ಹದ್ದುಬಸ್ತು ಮಾಡಿ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಗೆ ಪತ್ರ ಬರೆದಿದ್ದಾರೆ.5 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ತಹಸೀಲ್ದಾರ್ ವರ್ತನೆ ಭಾರಿ ಅನುಮಾನಕ್ಕೆ ಕಾರಣವಾಗಿದೆ.ಇನ್ನಾದ್ರೂ ತಹಸೀಲ್ದಾರ್ ರವರು ಆಸಕ್ತಿ ವಹಿಸಿ ಬಡವರ ಪರ ಬ್ಯಾಟಿಂಗ್ ಆಡುವರೇ…?

