ಚಿಕ್ಕಬಳ್ಳಾಪುರ: ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವು ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ಸರ್ಕಾರದ ಅಡಿಯಲಿ ಕಾರ್ಯ ನಿರ್ವಹಿಸುತ್ತಿದ್ದು ಜಿ ಟಿ ಸಿ ಯ ಕುಡುಮಲ ಕುಂಟೆ ಕೈಗಾರಿಕಾ ಪ್ರದೇಶ ಗೌರಿಬಿದನೂರು ತಾಲೂಕಿನಲ್ಲಿ ಸುಮಾರು ಎಂಟು ಎಕ್ಕರೆ ವಿಸ್ತೀರ್ಣದಲ್ಲಿ ತರಬೇತಿ ಕಟ್ಟಡ ಕಾರ್ಯಗಾರ ಕಟ್ಟಡ ಮತ್ತು ಕ್ಯಾಂಟೀನ್ ಕಟ್ಟಡ ಬಾಲಕ ಮತ್ತು ಬಾಲಕಿಯರ ವಸತಿ ನಿಲಯ ಅಲ್ಲದೆ ಹಸಿರು ಪರಿಸರನ ಕೂಡಿರುವಂತ ಕೇಂದ್ರದ ಸಂಕೀರ್ಣದಲ್ಲಿ ಸುಸಜ್ಜಿತವಾದ ಗಣಕಯಂತ್ರಗಳು ತರಗತಿ ಕೊಠಡಿಗಳು ಪ್ರಯೋಗಾಲಯಗಳು ಮತ್ತು ಲೈಬ್ರರಿ ನುರಿತ ಸಿಬ್ಬಂದಿ ವರ್ಗದಿಂದ ಕೂಡಿರುತ್ತದೆ ಜಿಟಿಸಿ ಗೌರಿಬಿದನೂರು ಕೇಂದ್ರ ದಲ್ಲಿ ಇದುವರೆಗೆ ಸುಮಾರು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗಿದೆ ಈ ಕಾಲೇಜಿನಲ್ಲಿ ಮೂರು ಕೋರ್ಸ್ಕಳಿದ್ದು ಡಿಪ್ಲೋಮಾ ಇನ್ ಟೂರ್ ಅಂಡ್ ಡೈ ಮೇಕಿಂಗ್, ಡಿಪ್ಲೋಮೋ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಟರಿಂಗ್, ಡಿಪ್ಲೋಮೋ ಇನ್ ಮೆಕಾನಿಕ್ಸ್ ಕೋರ್ಸ್ ಗಳಿದು ಎಸೆಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಂತ ಹರೀಶ್ ಕುಮಾರ್ ಅವರು ಮಾಹಿತಿ ನೀಡಿದರು. ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದಂತಹ ಸಂತೃಪ್ತ ಎಂಬ ವಿದ್ಯಾರ್ಥಿಯು ರಾಜ್ಯಕ್ಕೆ ಪ್ರಥಮ ರಾಂಕ್ ಗಳಿಸಿರುತ್ತಾರೆ ಮತ್ತು ಧನುಷ್ ಮತ್ತು ಭರತ್ ರೆಡ್ಡಿ,ಗಿರೀಶ್ ಪ್ರಸಾದ್,ಪವನ್ ಮುಂತಾದ ವಿದ್ಯಾರ್ಥಿಗಳು ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ 2024 25ರಲ್ಲಿ ವಿಜೇತರಾಗಿದ್ದಾರೆ ಪಠ್ಯದ ಜೊತೆಗೆ ಕೌಶಲ್ಯ ಅಭಿವೃದ್ಧಿಯನ್ನು ರೂಪಿಸುವುದು ನಮ್ಮ ಗುರಿಯಾಗಿದೆ ಈ ಸರ್ಕಾರಿ ಕಾಲೇಜಿನ ಸೌಲಭ್ಯಗಳನ್ನು ಗಡಿನಾಡಿನ ಪ್ರದೇಶದಲ್ಲಿ ಇರುವಂತಹ ಎಲ್ಲಾ ವಿದ್ಯಾರ್ಥಿಗಳು ಉಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ವರದಿ :- ನರಸಿಂಹಮೂರ್ತಿ
