ಅಂಕೋಲಾ :- ಕರ್ನಾಟಕ ಮೀಡಿಯಾ ಕ್ಲಬ್ ಬೆಂಗಳೂರು ವತಿಯಿಂದ ನೀಡಲಾಗುವ ಪ್ರಶಸ್ತಿಯನ್ನು ಡಾ ಈಶ್ವರಪ್ಪ ಗೆ ಪ್ರಧಾನ ಮಾಡಲಾಯಿತು.ಅಂಕೋಲಾ ತಾಲೂಕ ಆಸ್ಪತ್ರೆಯಲ್ಲಿ ಜನರು ಮನಗೆದ್ದ ವೈದ್ಯರಿಗೆ ಕರ್ನಾಟಕ ಮೀಡಿಯಾ ಕ್ಲಬ್ 2024/2025 ಸಾಲಿನ ಪ್ರಶಸ್ತಿಯನ್ನು ಡಾ ಈಶ್ವರಪ್ಪಗೆ ನೀಡಿ ಗೌರವಿಸಿದೆ.ಈ ಸಂಧರ್ಭದಲ್ಲಿ ಶ್ರೀ ಡಾ ಬಸವ ರಾಮಾನಂದ ಮಹಾಸ್ವಾಮಿ,ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ ಹೆಗಡೆ, ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆಯಾದ ನಾಗಲಕ್ಷ್ಮೀ ಚೌಧರಿ ಹಿರಿಯ ಕಲಾವಿದರು ಹಾಗೂ ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಗೌರವಧ್ಯಕ್ಷರಾದ ಎಸ್ ರಾಮಸ್ವಾಮಿ, ರಾಜ್ಯಾಧ್ಯಕ್ಷರಾದ ದಯಾನಂದ ಎಂ ಪ್ರಧಾನ ಕಾರ್ಯದರ್ಶಿ ರಮೇಶ್ ಎಸ್ ಜಿ ಮತ್ತಿತರರು ಇದ್ದರು.
